ETV Bharat / state

ಕೈ ನಾಯಕರಿಂದ ಪ್ರಣಬ್ ಮುಖರ್ಜಿ ಗುಣಗಾನ: ಆರ್​ಎಸ್​ಎಸ್​ ಸೇರ್ಪಡೆ ಬಗ್ಗೆ ಅಚ್ಚರಿ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನ ಹಿನ್ನೆಲೆ ಕೆಪಿಸಿಸಿ ಕಚೇರಿಯಲ್ಲಿ ಸಂತಾಪ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕೈ ನಾಯಕರು ಅವರೊಂದಿಗಿದ್ದ ಒಡನಾಟವನ್ನು ಮೆಲುಕು ಹಾಕುಕಿದರು. ಸಭೆ ಉದ್ದಕ್ಕೂ ಆರ್​ಎಸ್​ಎಸ್ ಸೇರ್ಪಡೆ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರು.

Pranab Mukherjee is a bigg thinker: Congress leaders
ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪ್ರಣಬ್ ಮುಖರ್ಜಿ ಸಂತಾಪ ಸಭೆಯಲ್ಲಿ ಮಾತನಾಡುತ್ತಿರುವ ಕೈ ನಾಯಕರು
author img

By

Published : Sep 1, 2020, 4:44 PM IST

ಬೆಂಗಳೂರು: ಮಾಜಿ ರಾಷ್ಟ್ರಪತಿ ಹಾಗೂ ಭಾರತ ರತ್ನ ಪ್ರಣಬ್ ಮುಖರ್ಜಿ ದೊಡ್ಡ ವಿಚಾರವಾದಿ. 1977ರಲ್ಲಿಯೇ ನನಗೆ ಅವರ ಪರಿಚಯವಿತ್ತು ಎಂದು ಕಾಂಗ್ರೆಸ್ ಹಿರಿಯ​ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪ್ರಣಬ್ ಮುಖರ್ಜಿ ಸಂತಾಪ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 78ರಲ್ಲಿ ಇಂದಿರಾ ಗಾಂಧಿ ಚಿಕ್ಕಮಗಳೂರಿನಲ್ಲಿ ಸ್ಪರ್ಧಿಸಿದ್ದರು. ಆಗ ಪ್ರಣಬ್ ಜೊತೆ ನಾವು ಕೆಲಸ ಮಾಡಿದ್ದೆವು. ಬೆಳ್ತಂಗಡಿಯ ಗೆಸ್ಟ್ ಹೌಸ್​ನಲ್ಲಿ ತಂಗಿದ್ದೆವು. ಅಲ್ಲಿ ಎರಡು ಕೊಠಡಿಗಳಲ್ಲಿ‌ ನಾವು, ಪ್ರಣಬ್ ಇದ್ದೆವು. ಎಲ್ಲಾ ಹಳ್ಳಿಗಳಿಗೆ ನಾವು ಭೇಟಿ ನೀಡುತ್ತಿದ್ದೆವು. ಆಗ ಪ್ರಣಬ್ ಅವರಿಗೆ ಓದುವ ಹವ್ಯಾಸ ಹೆಚ್ಚಿತ್ತು. ಅಂದಿನಿಂದ ಅವರ ಜೊತೆ ಹತ್ತಿರದ ಸಂಬಂಧವಿತ್ತು. ಕಲಬುರಗಿಗೂ ಎರಡು ಬಾರಿ ಅವರನ್ನ ಕರೆಸಿದ್ದೆ ಎಂದು ಹೇಳಿದರು.

Pranab Mukherjee is a bigg thinker: Congress leaders
ಕೆಪಿಸಿಸಿ ಕಚೇರಿಯಲ್ಲಿ ಸಂತಾಪ ಸಭೆ

ಕಲಬುರಗಿಯಲ್ಲಿ ಬೌದ್ಧ ವಿಹಾರ ಕಟ್ಟಿದ್ದೆವು. ಆಗ ಪಾಲಿ ಇನ್ಸಿಟಿಟ್ಯೂಟ್ ಮಾಡುವಂತೆ ಪ್ರಣಬ್ ಮುಖರ್ಜಿಯವರೇ ಸಲಹೆ ಕೊಟ್ಟಿದ್ದರು. ಆದರೆ ಪಾಲಿ ಲಾಂಗ್ವೇಜ್​ಗೆ ವಿದ್ಯಾರ್ಥಿಗಳು ಬರಲ್ಲ. ಆ ಭಾಷೆಯ ಶಿಕ್ಷಕರೂ ಸಿಗುವುದಿಲ್ಲವೆಂದಿದ್ದೆ. ಆಗ ನಾನೇ ಪಶ್ಚಿಮ ಬಂಗಾಳದಿಂದ ಕಳಿಸಿಕೊಡ್ತೇನೆ ಅಂದಿದ್ದರು. ಸಿದ್ದರಾಮಯ್ಯ ಅವಧಿಯಲ್ಲಿ ಅದಕ್ಕೆ ಒಪ್ಪಿಗೆಯೂ ಸಿಕ್ಕಿತ್ತು. ಆದರೆ ಅದನ್ನ ಜಾರಿಗೆ ತರಲು ಸಾಧ್ಯವಾಗಲೇ ಇಲ್ಲ ಎಂದು ಇದೇ ಸಂದರ್ಭ ವಿವರಿಸಿದರು.

ಪ್ರಣಬ್ 1969ರಲ್ಲಿ ಕಾಂಗ್ರೆಸ್ ಸೇರಿದ್ದರು. 70ರಲ್ಲೂ ಅವರು ಪತ್ರಕರ್ತರಾಗಿ ಮುಂದುವರೆದಿದ್ದರು. ಹಲವು ಹುದ್ದೆಗಳನ್ನ ಅವರು ನಿಭಾಯಿಸಿದ್ದರು. ಕೊನೆಗೆ ರಾಷ್ಟ್ರಪತಿಗಳೂ ಆದರು. ಅವರು ಅತ್ಯುನ್ನತ ಹುದ್ದೆಯವರೆಗೆ ಎಲ್ಲವನ್ನೂ ನಿಭಾಯಿಸಿದ್ರು. ಇಂತಹ ಮೇಧಾವಿ ಕೊನೆಗೆ ಆರ್​ಎಸ್​ಎಸ್​ಗೆ ಹೋದ್ರು. ಅವರು ಯಾಕೆ ಅಲ್ಲಿಗೆ ಹೋದ್ರು ಅನ್ನೋದು ಈಗಲೂ ನಿಗೂಢವೇ. ಇಂದಿರಾ ತತ್ವದ ಮೇಲೆಯೇ ನಂಬಿಕೆಯಿಟ್ಟವರು. ನಂತರ ಅವರು ಆರ್​ಎಸ್​ಎಸ್​ಗೆ ಹೋಗಿದ್ದು ಕುತೂಹಲಕಾರಿಯಾಗಿದೆ.

ಇದರ ಬಗ್ಗೆ ಅವರ ಜೊತೆ ನಾನು ಮಾತನಾಡಬೇಕಿತ್ತು. ಆದರೆ ಕೊನೆಗೆ ಒನ್ ಟು ಒನ್ ಮಾತನಾಡಲು ಅವಕಾಶ ಸಿಗಲಿಲ್ಲ. ಅವರ ಮಗ ಅಭಿಜಿತ್ ಮುಖರ್ಜಿ ನಮ್ಮ ಜೊತೆಯಲ್ಲೇ ಇರ್ತಿದ್ರು. ಮಾತನಾಡುವಾಗ ಸಿದ್ಧತೆ ಮಾಡಿಕೊಂಡೇ ಬರ್ತಿದ್ರು. ಮಗನಿಗೆ ಬೆಂಬಲಿಸುವಂತೆ ಪದೇ ಪದೆ ಪ್ರಣಬ್ ಹೇಳ್ತಿದ್ರು. ನಾನು ಹೆಚ್ಚಿಗೆ ಅಭಿಜಿತ್​ಗೆ ಹೇಳಿಕೊಡುತ್ತಿದ್ದೆ. ಅಭಿಜಿತ್ ಉತ್ತಮ ಸಂಭಾವಿತ ವ್ಯಕ್ತಿ. ಪ್ರಣಬ್ ಕಾಂಗ್ರೆಸ್ ಪಕ್ಷವನ್ನು ಎತ್ತರಕ್ಕೇರಿಸಿದವರು. ಅವರ ನಿಧನ ತುಂಬಲಾರದ ನಷ್ಟ. ನನಗೂ ಅವರ ನಿಧನ ಸಾಕಷ್ಟು ನೋವು ತಂದಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಸಂತಾಪ ವ್ಯಕ್ತಪಡಿಸಿದರು.

ಕೆಜಿಎಫ್ ಓಪನ್ ಮಾಡಿಸಿದ್ದರು:

ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಮಾತನಾಡಿ, 91/92ರಲ್ಲಿ ನಾನು ಸಂಸತ್ತಿಗೆ ಆಯ್ಕೆಯಾಗಿದ್ದೆ. ಪ್ರಣಬ್ ಅವರನ್ನ ಸಂಪುಟಕ್ಕೆ ಸೇರಿಸಿಕೊಂಡಿದ್ರು. ಆಗಷ್ಟೇ ನಾನು ಅವರ ಸಂಪರ್ಕಕ್ಕೆ ಬಂದಿದ್ದೆ. ಎನ್​ಡಿಎ ಸರ್ಕಾರ ಕೆಜಿಎಫ್ ಕ್ಲೋಸ್ ಮಾಡಿತ್ತು. ಯುಪಿಎ ಅಧಿಕಾರಕ್ಕೆ ಬಂದಾಗ ರೀ-ಒಪನ್ ಬಗ್ಗೆ ಚರ್ಚೆ ನಡೆದಿತ್ತು. ನಾನು ಕೇಂದ್ರದಲ್ಲಿ ರಾಜ್ಯ ಸಚಿವನಾಗಿದ್ದೆ. ಸರ್ಕಾರ ಹಣ ಹಾಕೋದು ಬೇಡ, ರೀ-ಒಪನ್ ಮಾಡಿ ಎಂದಿದ್ದೆ. ಆದರೆ ಚಿದಂಬರಂ ಸುತಾರಾಂ ಒಪ್ಪಲಿಲ್ಲ. ನಂತರ ಪ್ರಣಬ್ ಮುಖರ್ಜಿ ಅದಕ್ಕೆ ಬೆಂಬಲಿಸಿದ್ದರು. ಕೆಜಿಎಫ್ ರೀ-ಓಪನ್​ಗೆ ಅವಕಾಶವೂ ಸಿಕ್ಕಿತ್ತು. ಮತ್ತೊಮ್ಮೆ ಪವರ್ ಲೂಮ್ ಬಗ್ಗೆಯೂ ಪ್ರಣಬ್ ಬೆಂಬಲಿಸಿದ್ದರು ಎಂದರು.

ಆರ್​ಎಸ್​ಎಸ್​ಗೆ ಹೋಗುವ ಮೊದಲು ಅವರನ್ನ ಭೇಟಿ ಮಾಡಿದ್ದೆ. ಇಲ್ಲಿಯವರೆಗೆ ನೀವು ಪಕ್ಷವನ್ನ ಕಟ್ಟಿದ್ದೀರಾ. ಈಗ ಆ ಪಕ್ಷಕ್ಕೆ‌ ಹೋಗುತ್ತಿರುವುದಕ್ಕೆ ನಿಮ್ಮ ಹೆಸರಿಗೆ ಕಳಂಕ ಬರುವುದಿಲ್ಲವೇ ಎಂದಿದ್ದೆ. ಅವರ ಜೊತೆ ಅರ್ಧ ತಾಸು ಮಾತುಕತೆ ನಡೆಸಿದ್ದೆ. ಸಂದರ್ಭ ಬಂದಾಗ ಒಪ್ಪಿಕೊಳ್ಳಬೇಕಾಗುತ್ತದೆ ಎಂದಿದ್ದರು. ಇವತ್ತು ಅವರು ಅಗಲಿದ್ದಾರೆ. ಇಡೀ ದೇಶ ಅವರ ನಿಧನದ ನೋವಿನಲ್ಲಿದೆ ಎಂದರು.

ನೇರ ಚುನಾವಣೆ ಎದುರಿಸಿದ್ದು ಕಡಿಮೆ:

ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಅವರು ನಿರ್ವಿವಾದಕ್ಕೆ ಒಳಗಾದವರು. ಪ್ರಣಬ್ ಅವರು ಮಾಸ್ ಲೀಡರ್ ಆಗಿರಲಿಲ್ಲ. ಅವರು ನೇರ ಚುನಾವಣೆಗೆ ನಿಂತಿದ್ದೇ ಕಡಿಮೆ. ಕಡಿಮೆ ವಯಸ್ಸಿನಲ್ಲೇ ರಾಜ್ಯಸಭೆಗೆ ಹೋದವರು. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಹಣಕಾಸು ಖಾತೆ ಕೊಟ್ಟಿದ್ದರು. ನಮ್ಮ ತಂದೆಯವರಿಗೆ ಅವರು ಹತ್ತಿರದಲ್ಲಿದ್ದವರು. ನಮ್ಮ ತಂದೆಯವರಿಗೆ ಹೆಚ್ಚಿನ ಗೌರವ ಕೊಡುತ್ತಿದ್ದರು. 1993ರಲ್ಲಿ ನಮ್ಮ ತಂದೆ ನಿಧನರಾಗಿದ್ದರು. ಆಗ ಅವರು ಅಂತ್ಯಕ್ರಿಯೆಗೆ ಬೆಂಗಳೂರಿಗೆ ಬಂದಿದ್ದರು. ನನಗೂ ಅವರು ಮಾರ್ಗದರ್ಶಕರಾಗಿದ್ದರು. ನಮ್ಮ ಕುಟುಂಬದ ಜೊತೆ ನಿಕಟ ಸಂಬಂಧವಿತ್ತು. 13 ಪ್ರಣಬ್ ಅವರಿಗೆ ಲಕ್ಕಿ ನಂಬರ್. ಅನಿರೀಕ್ಷಿತವೆಂಬಂತೆ 13ನೇ ರಾಷ್ಟ್ರಪತಿಯಾಗಿದ್ದರು. ಹಲವು ಕ್ಷೇತ್ರಗಳಲ್ಲಿ ನೈಪುಣ್ಯತೆ ಪಡೆದುಕೊಂಡಿದ್ದರು. ಅವರಿಗೆ ಪ್ರಧಾನಿಯಾಗುವ ಆಸೆಯಿತ್ತು. ಎಲ್ಲಾ ಪಕ್ಷದವರು ಅವರಿಗೆ ಗೌರವ ಕೊಡುತ್ತಿದ್ದರು. ಎಲ್ಲರ ಪ್ರೀತಿಗೆ ಅವರು ಪಾತ್ರರಾಗಿದ್ದರು ಎಂದು ವಿವರಿಸಿದರು.

ದೇಶ ಕಂಡ ಅತ್ಯುತ್ತಮ ಬುದ್ಧಿಜೀವಿ:

ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಪ್ರಣಬ್ ಸುದೀರ್ಘ ರಾಜಕೀಯ ಜೀವನ ನಡೆಸಿದವರು. ದೇಶ ಕಂಡ ಕೆಲವೇ ಬುದ್ಧಿಜೀವಿಗಳಲ್ಲಿ ಒಬ್ಬರು. ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಆಗಿದ್ದವರು. ಸಮಸ್ಯೆ ಎದುರಾದಾಗ ಅವರು ಜವಾಬ್ದಾರಿ ಹೊರುತ್ತಿದ್ದರು. ತಮ್ಮ ಬುದ್ಧಿವಂತಿಕೆಯಿಂದ ಸಮಸ್ಯೆ ನಿವಾರಿಸುತ್ತಿದ್ದರು. ನಾನು ಕಾಂಗ್ರೆಸ್ ಸೇರಿದ ಮೇಲೆ ಭೇಟಿ ಮಾಡಿದ್ದೆ. ಆಗ ಅವರು ಕೆಲವು ಸೂಚನೆಗಳನ್ನ ಕೊಟ್ಟಿದ್ದರು. ನಂತರ ಸಿಎಂ ಆದ ಮೇಲೆ ಅವರನ್ನ ಭೇಟಿ ಮಾಡುತ್ತಿದ್ದೆ. ಇದೇ ಕೆಪಿಸಿಸಿ ಕಚೇರಿಗೆ ಶಾಸಕರ ಮತ ಕೇಳೋಕೆ ಬಂದಿದ್ದರು. ನಮ್ಮ ಶಕ್ತಿಗಿಂತ ಹೆಚ್ಚಿನ ಮತಗಳು ರಾಜ್ಯದಿಂದ ಸಿಕ್ಕಿದ್ದವು. ಅವರಿಗೆ ರಾಜಕೀಯದಲ್ಲಿ ಅಜಾತ ಶತೃಗಳಿದ್ದರು. ರಾಜ್ಯಕ್ಕೆ ಅವರು ನಾಲ್ಕೈದು ಬಾರಿ ಬಂದಿದ್ದರು. ಎಸ್ಸಿಪಿ, ಟಿಎಸ್ಪಿ ಯೋಜನೆಗೆ ಸಹಿ ಹಾಕಿ ಕೊಟ್ಟಿದ್ದರು. ಪ್ರಗತಿಪರ ವಿಚಾರ ಹೇಳಿದಾಗ ಪರವಾಗಿ ನಿಲ್ಲುತ್ತಿದ್ರು. ಅವರಿಗೆ ಹಲವು ಪ್ರಶಸ್ತಿಗಳು ಹರಿದು ಬಂದಿದ್ದವು ಎಂದರು.

ಕೆಪಿಸಿಸಿ ಕಚೇರಿಯಲ್ಲಿ ಸಂತಾಪ ಸಭೆ

ಜಗತ್ತಿನ ಐವರು ಅತ್ಯುತ್ತಮ ಹಣಕಾಸು ಸಚಿವರಲ್ಲಿ ಇವರೂ ಒಬ್ಬರು. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಪಕ್ಷ ತೊರೆದಿದ್ದರು. ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ಪಾರ್ಟಿ ಕಟ್ಟಿದ್ದರು. ಪ್ರಣಬ್ ಮುಖರ್ಜಿ ಹಣಕಾಸು ಸಚಿವರಾಗಿದ್ದರು. ಆಗ ಮನಮೋಹನ್ ಸಿಂಗ್​ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿದ್ದರು. ಮನಮೋಹನ್ ಸಿಂಗ್​ ಪ್ರಧಾನಿಯಾಗಿದ್ದಾಗ ಪ್ರಣಬ್ ಹಣಕಾಸು ಸಚಿವರಾಗಿದ್ದರು. ಇದೇ ನೋಡಿ ವಿಪರ್ಯಾಸ. ಅವರು ಆರ್​ಎಸ್​ಎಸ್​ಗೆ ಹೋಗಿದ್ದೇ ಯಕ್ಷಪ್ರಶ್ನೆ. ಆರ್​ಎಸ್​ಎಸ್ ಇದೆಯಲ್ಲ ಅದು ಕೋಮುವಾದಿ ಸಂಘಟನೆ. 50 ವರ್ಷ ಇದೇ ಸಿದ್ಧಾಂತದ ವಿರುದ್ಧ ರಾಜಕಾರಣ ಮಾಡಿದವರು. ಅಲ್ಲಿಗೆ ಹೋಗಿ ಭಾಷಣ ಮಾಡ್ತಾರೆ ಅಂದ್ರೆ ಹೇಗೆ? ಎಂದು ಪ್ರಣಬ್ ಮುಖರ್ಜಿ ಆರ್​ಎಸ್​ಎಸ್ ಸೇರಿದ ಬಗ್ಗೆ ಸಿದ್ದರಾಮಯ್ಯ ಆಶ್ಚರ್ಯ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.