ETV Bharat / state

ನೇತ್ರದಾನಕ್ಕೆ ಹೊಸ ಆಯಾಮ ನೀಡಿದ ಪುನೀತ್‌​: ಅಭಿಮಾನಿಗಳ ಮೂಲಕ ನಡೀತಿದೆ ಜಾಗೃತಿ ಕ್ರಾಂತಿ - Eye Donation

ಕಣ್ಣುಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದ ವರನಟ ಡಾ.ರಾಜ್ ಕುಮಾರ್ ಅವರ ಹಾದಿಯಲ್ಲಿಯೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾಗಿದ್ದಾರೆ. ಸದ್ಯ ಅಪ್ಪು ಅಭಿಮಾನಿಗಳ ಸಂಘದಿಂದ ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುವ ಶಿಬಿರಗಳನ್ನು ಆಯೋಜನೆ ಮಾಡುತ್ತಾ ಬರಲಾಗುತ್ತಿದೆ.

Puneeth Rajkumar Inspiration for Eye Donation Campaign
ನೇತ್ರದಾನಕ್ಕೆ ಹೊಸ ಆಯಾಮ ನೀಡಿದ ಪವರ್​ಸ್ಟಾರ್
author img

By

Published : Oct 29, 2022, 5:01 AM IST

ಬೆಂಗಳೂರು: ವರನಟ ಡಾ.ರಾಜ್ ಕುಮಾರ್ ಅವರ ಹಾದಿಯಲ್ಲಿಯೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾಗಿದ್ದು, ಅಪ್ಪನಂತೆ ತಮ್ಮ ಕಣ್ಣುಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು. ಅಷ್ಟೇ ಅಲ್ಲದೇ ತಂದೆಗೆ ತಕ್ಕ ಮಗನಾಗಿ ನೇತ್ರದಾನದ ಬಗ್ಗೆಯೂ ಜಾಗೃತಿ ಮೂಡಿಸಿದ್ದರು. ಅಪ್ಪು ಅಗಲಿದ್ದರೂ ಅವರು ಮೂಡಿಸಿದ್ದ ಜಾಗೃತಿ ಮಾತ್ರ ನಿರಂತರವಾಗಿದೆ. ನೇತ್ರದಾನ ಮಾಡುವವರ ಸಂಖ್ಯೆ ಶೇ.20-30ರಷ್ಟು ಹೆಚ್ಚಾಗಿರುವುದೇ ಇದಕ್ಕೆ ನಿದರ್ಶನ.

ಒಂದು ವರ್ಷದ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ನಿಧನರಾಗಿ ಇಡೀ ರಾಜ್ಯಕ್ಕೇ ಕತ್ತಲು ಕವಿದಂತಾಗಿತ್ತು. ಆದರೆ ಈ ಕತ್ತಲಿನ ಕಾರ್ಮೋಡದ ನಡುವೆಯೂ ನಾಲ್ಕು ಅಂಧರ ಬಾಳು ಬೆಳಗಿತ್ತು. ಪುನೀತ್ ಕಣ್ಣುಗಳು ಕೇವಲ ನಾಲ್ವರಿಗೆ ಬೆಳಕು ನೀಡಿರಬಹುದು. ಆದರೆ ಅವರು ಮೂಡಿಸಿರುವ ಜಾಗೃತಿಯಿಂದ ನೂರಾರು ಅಂಧರ ಬದುಕು ಇಂದು ಬೆಳಕಾಗುತ್ತಿದೆ.

ನೇತ್ರದಾನ ಜಾಗೃತಿಗೆ ಹೊಸ ಆಯಾಮ: ರಾಜ್ಯದಲ್ಲಿ ನೇತ್ರದಾನದ ಜಾಗೃತಿಗೆ ದೊಡ್ಡ ಶಕ್ತಿ ನೀಡಿದ್ದು ಡಾ.ರಾಜ್ ಕುಮಾರ್. ಸ್ವತಃ ನೇತ್ರದಾನ ಮಾಡುವ ಮೂಲಕ ರಾಜ್ಯದಲ್ಲಿ ನೇತ್ರದಾನ ಜಾಗೃತಿಗೆ ಹೊಸ ಆಯಾಮ ನೀಡಿದ್ದರು. ಅವರ ಹಾದಿಯಲ್ಲಿಯೇ ದೊಡ್ಮನೆ ಕುಟುಂಬ ಸಾಗಿದೆ.

ಇದನ್ನೂ ಓದಿ: ನೇತ್ರದಾನ ಮಹಾದಾನ‌ ಅಂದ್ರು ಪವರ್ ಸ್ಟಾರ್ ಪುನೀತ್.!

ಪುನೀತ್ ರಾಜ್ ಕುಮಾರ್ ನೇತ್ರದಾನ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು. ಅವರ ನಿಧನರಾಗಿದ್ದರಿಂದ ಶೋಕದಲ್ಲಿ ಮುಳುಗಿದ್ದ ಅಪ್ಪು ಅಭಿಮಾನಿಗಳು ರಾಜ್ಯಾದ್ಯಂತ ಶ್ರದ್ಧಾಂಜಲಿ ಕಾರ್ಯಕ್ರಮ ಮಾಡಿದ್ದರು. ಅಲ್ಲಿಯೇ ಅಭಿಮಾನಿಗಳು ನೇತ್ರದಾನದ ಘೋಷಣೆ ಮಾಡಿ ನೇತ್ರದಾನಕ್ಕೆ ನೋಂದಾಯಿಸಿಕೊಳ್ಳಲು ಶುರು ಮಾಡಿದ್ದಾರೆ.

ನೇತ್ರದಾನ ಕ್ರಾಂತಿ: ಇನ್ನು ಅಪ್ಪು ಅಭಿಮಾನಿಗಳ ಸಂಘದಿಂದ ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುವ ಶಿಬಿರಗಳನ್ನು ಆಯೋಜನೆ ಮಾಡುತ್ತಾ ಬರಲಾಗುತ್ತಿದೆ. ರಕ್ತದಾನದಂತೆ ನೇತ್ರದಾನವೂ ರಾಜ್ಯದಲ್ಲಿ ಆರಂಭಗೊಂಡಿದೆ. ಇದಕ್ಕೆ ಮುಖ್ಯ ಕಾರಣ ಅಪ್ಪು ಅವರ ನೇತ್ರದಾನದಿಂದ ಆದ ನೇತ್ರದಾನ ಕ್ರಾಂತಿ.

ಹಸೆಮಣೆ ಏರುವ ಮುನ್ನವೇ ನೇತ್ರದಾನಕ್ಕೆ ಸಹಿ: ಅಪ್ಪು ಅಗಲಿಕೆ ಬೆನ್ನಲ್ಲೇ ಹುಬ್ಬಳ್ಳಿಯ ಗೋಕುಲ ರಸ್ತೆ ಚವ್ಹಾಣ್​ ಗಾರ್ಡನ್​ನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ ಪುತ್ರ ಸುಚೀತ್ ಹಾಗೂ ರಜನಿ ವಿವಾಹ ಮಹೋತ್ಸವ ನೆರವೇರಿತ್ತು. ನವ ದಂಪತಿ ಹಸೆಮಣೆ ಏರುವ ಮುನ್ನವೇ ನೇತ್ರದಾನಕ್ಕೆ ಸಹಿ ಮಾಡಿದ್ದರು. ಅಷ್ಟು ಮಾತ್ರವಲ್ಲದೆ ಇಡೀ ಕುಟುಂಬದ ಸದಸ್ಯರಿಂದಲೂ ನೇತ್ರದಾನ ಪತ್ರಕ್ಕೆ ಸಹಿ ಹಾಕಿಸಿ ಮದುವೆಗೆ ಬಂದಿದ್ದ ಬಂಧು–ಬಳಗದವರಲ್ಲಿಯೂ ಹಲವರಿಂದ ನೇತ್ರದಾನ ಪತ್ರಕ್ಕೆ ಸಹಿ ಹಾಕಿಸಿ, ಹುಬ್ಬಳ್ಳಿಯ ಎಂ.ಎಂ ಜೋಶಿ ನೇತ್ರಾಲಯಕ್ಕೆ ನೋಂದಣಿ ಪತ್ರ ಹಸ್ತಾಂತರ ಮಾಡಲಾಗಿತ್ತು.

ಇದನ್ನೂ ಓದಿ: ಅಪ್ಪು ಕಣ್ಣಿನ Stem Cellsನಿಂದ ಇನ್ನೂ ಹಲವರಿಗೆ ದೃಷ್ಟಿಭಾಗ್ಯ.. ನಾರಾಯಣ ನೇತ್ರಾಲಯದ ವಿನೂತನ ಪ್ರಯತ್ನ..

ಪುನೀತ್​ ಪ್ರೇರಣೆ: ಇನ್ನು ರಾಜ್ಯಾದ್ಯಂತ ಅಪ್ಪು ಅಭಿಮಾನಿಗಳ ಸಂಘದಿಂದ ನೇತ್ರದಾನ ಶಿಬಿರ ಆಯೋಜನೆ ಮಾಡಲಾಗುತ್ತಾ ಬರಲಾಗುತ್ತಿದೆ. ಈವರೆಗೆ ಇದ್ದ ಮೂಢನಂಬಿಕೆ ಬಿಟ್ಟು ಜನರು ನೇತ್ರದಾನಕ್ಕೆ ಮುಂದೆ ಬರುತ್ತಿದ್ದಾರೆ. ಇದಕ್ಕೆ ಅಪ್ಪು ನೇತ್ರದಾನವೇ ಸ್ಪೂರ್ತಿಯಾಗಿದೆ. ಅಪ್ಪು ಅಗಲಿದ ಒಂದು ತಿಂಗಳಲ್ಲಿಯೇ 234 ಕಣ್ಣುಗಳನ್ನು ಸಂಗ್ರಹಿಸಲಾಗಿತ್ತು. 2ನೇಯ ತಿಂಗಳಿನಲ್ಲೇ 209 ಕಣ್ಣುಗಳನ್ನು ಸಂಗ್ರಹಿಸಲಾಗಿತ್ತು.

ನೇತ್ರದಾನಿಗಳ ಸಂಖ್ಯೆ ಗಣನೀಯ ಏರಿಕೆ: ಅಪ್ಪು ಅಗಲಿಕೆಗೂ ಮೊದಲು ನೇತ್ರ ಬ್ಯಾಂಕ್​​ನಲ್ಲಿ ಪ್ರತಿ ತಿಂಗಳು 100-200 ಜನ ಮಾತ್ರ ನೇತ್ರದಾನಕ್ಕೆ ಸಹಿ ಹಾಕುತ್ತಿದ್ದರು. ಆದರೆ ಈಗ ಅದು ಹೆಚ್ಚು ಕಡಿಮೆ 2 ಸಾವಿರಕ್ಕೆ ಹೆಚ್ಚಳವಾಗಿದೆ. ರಾಜ್ಯದಲ್ಲಿ ಪುನೀತ್ ರಾಜಕುಮಾರ್ ನೇತ್ರದಾನ ಮಾಡಿದ ನಂತರ ಜನರಲ್ಲಿ ಈ ಕುರಿತು ಜಾಗೃತಿ ಹೆಚ್ಚಾಗಿದೆ. ಪರಿಣಾಮವಾಗಿ, ನೇತ್ರದಾನಕ್ಕೆ ಮುಂದಾಗುತ್ತಿರುವವರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ ಎಂದು ಮಿಂಟೋ ಕಣ್ಣಿನ ಆಸ್ಪತ್ರೆ ನಿರ್ದೇಶಕಿ ಡಾ.ಸುಜಾತಾ ರಾಥೋಡ್ ಮಾಹಿತಿ ನೀಡಿದ್ದಾರೆ.

ಯಾರು ನೇತ್ರದಾನ ಮಾಡಬಹುದು?: ರಾಜ್ಯದಲ್ಲಿ 32 ನೇತ್ರ ಬ್ಯಾಂಕ್​​ಗಳಿದ್ದು, ಅದರಲ್ಲಿ 7 ಬ್ಯಾಂಕ್​​ಗಳು ಸರ್ಕಾರಿ ಸ್ವಾಮ್ಯದಲ್ಲಿವೆ. ಒಬ್ಬ ವ್ಯಕ್ತಿ ಮರಣ ಹೊಂದಿದ್ದ 6 ಗಂಟೆಯೊಳಗೆ ನೇತ್ರಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ. ವಯಸ್ಸು, ಲಿಂಗ, ಜಾತಿ, ರಕ್ತದ ಗುಂಪು ಯಾವುದೇ ಬೇಧವಿಲ್ಲದೆ ಎಲ್ಲರೂ ನೇತ್ರದಾನ ಮಾಡಬಹುದಾಗಿದೆ. ಕೇವಲ 20 ನಿಮಿಷದಲ್ಲಿ ನೇತ್ರ ಸಂಗ್ರಹಣೆ ಮಾಡಬಹುದಾಗಿದ್ದು, ಸತ್ತ ವ್ಯಕ್ತಿಯ ಕಣ್ಣುಗಳು ಮಣ್ಣಲ್ಲಿ ಮಣ್ಣಾಗುವ ಬದಲು ಅಂಧರ ಬಾಳಿಗೆ ಬೆಳಕಾಗಲು ಇದೊಂದು ಅವಕಾಶ.

ನೇತ್ರದಾನ ಯಾವ ರೀತಿ ಮಾಡಬಹುದು: ಹಲವು ಸಂಘ ಸಂಸ್ಥೆಗಳು ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುತ್ತಾ ಶಿಬಿರಗಳನ್ನು ಆಯೋಜಿಸುತ್ತಾರೆ. ಅಲ್ಲಿ ಅರ್ಜಿ ಭರ್ತಿ ಮಾಡಿ ನೇತ್ರದಾನ ಮಾಡಬಹುದು. ಜೀವಸಾರ್ಥಕತೆ ವೆಬ್ ಸೈಟ್ ಅನ್ನು ಸರ್ಕಾರ ಇದಕ್ಕಾಗಿಯೇ ವಿನ್ಯಾಸಗೊಳಿಸಿದೆ. ಈ ವೆಬ್ ಮುಖಾಂತರ ತಮ್ಮ ಹೆಸರನ್ನು ನೇತ್ರದಾನಿಗಳಾಗಿ ಸೇರಿಸಬಹುದಾಗಿದೆ.

ಇದನ್ನೂ ಓದಿ: ಪುನೀತ್ ಸ್ಫೂರ್ತಿ.. 12 ಸಾವಿರಕ್ಕೂ ಹೆಚ್ಚು ಜನ ನೇತ್ರದಾನಕ್ಕಾಗಿ ನೋಂದಣಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.