ETV Bharat / state

ಗೋಡೆಗಳ ಮೇಲೆ ‘ಸೋಂಕಿತ ಸರ್ಕಾರ’ ಎಂಬ ಪೋಸ್ಟರ್​​​​​: ಕಿಡಿಗೇಡಿಗಳಿಗಾಗಿ ಪೊಲೀಸರ ಶೋಧ - City Police Commissioner Kamal Pant

ಅಧಿವೇಶನದ ವಿರೋಧಿಸಿ ಪೋಸ್ಟ್​​ರ್​​ಗಳನ್ನು ಹಾಕಿದ್ದಲ್ಲದೆ ಸಚಿವರು, ಶಾಸಕರ ಹೆಸರನ್ನು ತಿರುಚಲಾಗಿದೆ. ಈ ಹಿನ್ನೆಲೆ ಕಿಡಿಗೇಡಿಗಳ ಕುರಿತು ಮಾಹಿತಿ ಕಲೆಹಾಕುವಂತೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಬೆಂಗಳೂರು ನಗರ ಪೊಲೀಸ್​​ ಆಯುಕ್ತ ಕಮಲ್ ಪಂತ್ ಸೂಚನೆ ನೀಡಿದ್ದಾರೆ.

Posters pasted in Several areas  about Opposing the session
ಅಧಿವೇಶನ ವಿರೋಧಿಸಿ ‘ಸೋಂಕಿನ ಸರ್ಕಾರ’ ಎಂಬ ಪೋಸ್ಟರ್​: ಕಿಡಿಗೇಡಿಗಳಿಗಾಗಿ ಪೊಲೀಸರ ಶೋಧ
author img

By

Published : Sep 21, 2020, 12:49 PM IST

ಬೆಂಗಳೂರು: ಇಂದು ಅಧಿವೇಶನ ಪ್ರಾರಂಭವಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಭಿತ್ತಿಪತ್ರಗಳನ್ನು ಗೋಡೆಗಳಿಗೆ, ಬಸ್​​​​ ಸ್ಟ್ಯಾಂಡ್​​​​ಗಳಲ್ಲಿ ಅಂಟಿಸಲಾಗಿದೆ.

ಸೋಂಕಿತ ಸರ್ಕಾರ ಅಧಿಕಾರದಲ್ಲಿದೆ ಎಂದು ಶಾಸಕರ ಹೆಸರು ತಿರುಚಿರುವುದು ಪೋಸ್ಟರ್​​ಗಳಲ್ಲಿ ಕಂಡು ಬಂದಿದೆ. ಈ ಹಿನ್ನೆಲೆ ಸ್ಥಳೀಯ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​​​ ಸೂಚನೆ ನೀಡಿದ್ದು, ಸಿಸಿಟಿವಿ ದೃಶ್ಯದ ಆಧಾರದ ಮೇರೆಗೆ ತನಿಖೆ ಮುಂದುವರೆಸಿದ್ದಾರೆ.

ಅಧಿವೇಶನ ವಿರೋಧಿಸಿ ‘ಸೋಂಕಿತ ಸರ್ಕಾರ’ ಎಂಬ ಪೋಸ್ಟರ್

ಇನ್ನು ಭಿತ್ತಿ ಪತ್ರಗಳಲ್ಲಿ ಹಣಕ್ಕಾಗಿ ಅಧಿಕಾರಕ್ಕೆ ಬಂದ ಸರ್ಕಾರ, ಸೋಂಕಿತ ಸರ್ಕಾರ. ಭ್ರಷ್ಟ, ಕೊರೊನಾ ಸಂಕಷ್ಟದಲ್ಲೂ ಲೂಟಿ ಮಾಡಲು ನಿಂತಿರುವ ಸೋಂಕಿತ ಸರ್ಕಾರ ಎಂದು ಇಲ್ಲಿನ ಮೇಕ್ರಿ ಸರ್ಕಲ್, ಪ್ಯಾಲೇಸ್ ರಸ್ತೆ, ಟಿವಿ ಟವರ್ ರಸ್ತೆ, ಶಂಕರ್ ಮಠ, ಕಾಮಾಕ್ಷಿಪಾಳ್ಯಾ ಬಳಿ ಅನಾಮಿಕರು ಭಿತ್ತಿಪತ್ರ ಅಂಟಿಸಿದ್ದಾರೆ.

ಅಲ್ಲದೆ ಶಾಸಕರ ಹೆಸರನ್ನು ತಿರುಚಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಅಧಿವೇಶನದ ವಿರುದ್ಧವಾಗಿ ಪೋಸ್ಟರ್​​​ ಹಾಕಿರುವ ಹಿನ್ನೆಲೆ ಕಿಡಿಗೇಡಿಗಳ ಕುರಿತು ಮಾಹಿತಿ ಕಲೆಹಾಕುವಂತೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ನಗರ ಪೊಲೀಸ್​ ಆಯುಕ್ತರು ಸೂಚನೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.