ETV Bharat / state

ಕೊರೊನಾ ರೋಗಿಗಳಿಗೆ ಹಾಸಿಗೆ ಮೀಸಲಿಡದ ಆಸ್ಪತ್ರೆಗಳ ವಿರುದ್ಧ ಎಫ್​ಐಆರ್ ದಾಖಲಿಸಲು ಆದೇಶ

ಕೆಲವು ಆಸ್ಪತ್ರೆಗಳು ಡಯಾಲಿಸಿಸ್, ಹೃದ್ರೋಗ ಸೇರಿದಂತೆ ಎಮರ್ಜೆನ್ಸಿ ಕಾರಣಗಳಿಗೆ ಹಾಸಿಗೆ ಮೀಸಲಿಟ್ಟಿರಿವುದಾಗಿ ವಿವರಣೆ ನೀಡಿವೆ. ಇನ್ನು ಕೆಲವು ಆಸ್ಪತ್ರೆಗಳ ವಿವರಣೆ ಸಮಂಜಸವಾಗಿಲ್ಲ. ಹಾಗಾಗಿ ಆ ಆಸ್ಪತ್ರೆಗಳ ವಿರುದ್ಧ ಎಫ್​ಐಆರ್ ದಾಖಲಿಸಲು ಆದೇಶ ನೀಡಿರುವುದಾಗಿ ಆಯುಕ್ತರು ತಿಳಿಸಿದ್ದಾರೆ.

Possibility of registration of FIR against 4 hospitals
ಹಾಸಿಗೆ ಮೀಸಲಿಡದ ಆಸ್ಪತ್ರೆಗಳ ವಿರುದ್ಧ ಎಫ್​ಐಆರ್ ದಾಖಲಿಸಲು ಆದೇಶ
author img

By

Published : Sep 24, 2020, 9:45 PM IST

ಬೆಂಗಳೂರು: ಬಿಬಿಎಂಪಿ ಸೂಚಿಸುವ ಕೊರೊನಾ ಸೋಂಕಿತರ ಚಿಕಿತ್ಸೆಗೆ ಶೇ.50 ರಷ್ಟು ಹಾಸಿಗೆ ಬಿಟ್ಟುಕೊಡದ ನಾಲ್ಕು ಪ್ರಮುಖ ಆಸ್ಪತ್ರೆ ಹಾಗೂ ರಾಜಾಜಿನಗರದ ಒಂದು ಆಸ್ಪತ್ರೆ ಮೇಲೆ ಡಿಸಾಸ್ಟರ್ ಮ್ಯಾನೇಜ್​ಮೆಂಟ್​ ಅಡಿ ಎಫ್​ಐಆರ್​ ದಾಖಲಿಸಲು ಸಂಬಂಧಿತ ಅಧಿಕಾರಿಗಳಿಗೆ ಆದೇಶ ನೀಡಿರುವುದಾಗಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

Possibility of registration of FIR against 4 hospitals
ಆದೇಶ ಪ್ರತಿ

ಬನ್ನೇರುಘಟ್ಟ ರಸ್ತೆ ಪಕ್ಕದಲ್ಲಿರುವ ಫೋರ್ಟೀಸ್ ಆಸ್ಪತ್ರೆ, ಪದ್ಮನಾಭನಗರದ ಎನ್​ಯು, ಲಾಗ್ ಫಾರ್ಡ್ ಗಾರ್ಡನ್​ ಸಮೀಪದ ಪಬ್ಲಿಕ್ ಹಾಗೂ ವಿಕ್ರಂ ಆಸ್ಪತ್ರೆ ವಿರುದ್ಧ ಕ್ರಮಕ್ಕೆ ಆದೇಶಿಸಿದ್ದು, ರಾಜಾಜಿನಗರದ ಫೋರ್ಟೀಸ್ ಆಸ್ಪತ್ರೆಗೆ ಕೊನೆಯ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.

ಹಾಸಿಗೆ ಮೀಸಲಿಡದ 36 ಆಸ್ಪತ್ರೆಗಳಿಗೆ ಬಿಬಿಎಂಪಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಈ ವೇಳೆ 4 ಪ್ರಮುಖ ಆಸ್ಪತ್ರೆಗಳು ನೀಡಿರುವ ವಿವರಣೆ ಸಮಂಜಸವಾಗಿಲ್ಲ. ಕೆಪಿಎಂಸಿ ಪೋರ್ಟನಲ್​ನಲ್ಲಿ ಹಾಸಿಗೆಗಳು ಖಾಲಿ ಇವೆ ಎಂದು ನಮೂದಿಸಿದ್ದರೂ ಸೋಂಕಿತರನ್ನು ಕಳಿಸಿದಾಗ ಖಾಲಿ ಇಲ್ಲ ಎಂದು ನಿರಾಕರಿಸಿವೆ. ಹೀಗಾಗಿ ಈ ಆಸ್ಪತ್ರೆಗಳ ವಿರುದ್ಧ ಪಾಲಿಕೆ ಕ್ರಮಕ್ಕೆ ಮುಂದಾಗಿದೆ. ಕೆಲವು ಆಸ್ಪತ್ರೆಗಳು ಡಯಾಲಿಸಿಸ್, ಹೃದ್ರೋಗ ಸೇರಿದಂತೆ ಎಮರ್ಜೆನ್ಸಿ ಕಾರಣಗಳಿಗೆ ಹಾಸಿಗೆ ಮೀಸಲಿಟ್ಟಿರಿವುದಾಗಿ ವಿವರಣೆ ನೀಡಿವೆ. ಇನ್ನು ಕೆಲವು ಆಸ್ಪತ್ರೆಗಳ ವಿವರಣೆ ಸಮಂಜಸವಾಗಿಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.