ಬೆಂಗಳೂರು: ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಸರ್ಕಾರಿ ಬಂಗಲೆಗೆ ಇಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಅಧಿಕೃತವಾಗಿ ಎಂಟ್ರಿ ಕೊಟ್ಡಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿಯ ಆವರಣದಲ್ಲಿರುವ ಮನೆಯನ್ನು ಮಾಜಿ ಕಮಿಷನರ್ ಅಲೋಕ್ ಕುಮಾರ್ ಬಿಟ್ಡು ಕೊಡದೆ ಸತಾಯಿಸುತ್ತಿದ್ದರು. ಹೀಗಾಗಿ ಈಗಿನ ಹಾಲಿ ಕಮಿಷನರ್ ಭಾಸ್ಕರ್ ರಾವ್ ಡಿಜಿ ನೀಲಮಣಿ ಎನ್ ರಾಜು ಅವರಿಗೆ ದೂರು ನೀಡಿದ್ದರು.
ದೂರು ನೀಡಿದ್ದ ಹಿನ್ನೆಲೆ ಹಾಗೂ ಇತ್ತೀಚೆಗಷ್ಟೇ ಅಲೋಕ್‌ಕುಮಾರ್ ಅವರ ಹೆಸರು ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಬೆಳಕಿಗೆ ಬರ್ತಿದ್ದ ವೇಳೆ ಮನೆ ಬಿಟ್ಟುಕೊಟ್ಡಿದ್ದರು. ಇಂದು ಭಾಸ್ಕರ್ ರಾವ್ ಅವರು ಪುರೋಹಿತರನ್ನ ಕರೆತಂದು ಪೂಜೆ ನಡೆಸಿ ಅಧಿಕೃತವಾಗಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.