ETV Bharat / state

ಸವಾಲುಗಳು ಎದುರಾದರೂ ಎದೆಗುಂದದ 'ರಾಜಾಹುಲಿ '... ಸಿಎಂ ಬಿಎಸ್​ವೈ ಹೋರಾಟದ ಹಾದಿ

ರಾಜ್ಯದಲ್ಲಿ ಸಿಎಂ ಬದಲಾವಣೆಯ ಚರ್ಚೆ ಜೋರಾಗಿ ನಡೆಯುತ್ತಿದೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಮತ್ತೊಬ್ಬರಿಗೆ ಮನೆ ಹಾಕಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸುತ್ತಿದೆ. ಆದರೆ, ರಾಜ್ಯಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಡಿಯೂರಪ್ಪ ಅವರ ಪಾತ್ರ ಪ್ರಮುಖವಾಗಿದೆ. ಶಿವಮೊಗ್ಗದ ಶಿಕಾರಿಪುರದಿಂದ ಆರಂಭಗೊಡು ಸಿಎಂ ಸ್ಥಾನದವರೆಗೆ ಯಡಿಯೂರಪ್ಪ ಅವರ ರಾಜಕೀಯ ಹಾದಿ ಹೇಗಿತ್ತು ಎಂಬುವುದರ ಮಾಹಿತಿ ಇಲ್ಲಿದೆ.

Political Life of CM BSY
ಸಿಎಂ ಬಿಎಸ್​ವೈ ಹೋರಾಟದ ಹಾದಿ
author img

By

Published : Jul 24, 2021, 12:07 PM IST

Updated : Jul 26, 2021, 1:26 PM IST

ಬೆಂಗಳೂರು: ಹೋರಾಟಗಳಿಂದ ನಾಯಕತ್ವವನ್ನು ಬೆಳೆಸಿಕೊಂಡು ಬಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜೀವನದುದ್ದಕ್ಕೂ ಸವಾಲುಗಳಿಗೆ ಎದೆಗುಂದಲಿಲ್ಲ. ಅದರ ಬದಲಿಗೆ ಅವುಗಳನ್ನೇ ಹೋರಾಟದ ಆಯುಧಗಳನ್ನಾಗಿ ಮಾಡಿಕೊಂಡರು. ಛಲಬಿಡದೆ ಮಾಡಿದ ಸಂಕಲ್ಪವನ್ನು ಪೂರ್ಣಗೊಳಿಸುವವರೆಗೆ ಹೋರಾಟ ನಡೆಸುತ್ತಲೇ ಶಿವಮೊಗ್ಗದ ಶಿಕಾರಿಪುರದಿಂದ ಆರಂಭಗೊಂಡ ಅವರ ರಾಜಕೀಯ ಜೀವನ ವಿಧಾನಸೌಧದ ಮೂರನೇ ಮಹಡಿಗೆ ಬರುವಂತಾಗಿದೆ.

ಹೋರಾಟದ ಅವಧಿಯಲ್ಲಿ ಅವರ ಜೀವನದ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಆಡಳಿತದ ಶಕ್ತಿಕೇಂದ್ರ ವಿಧಾನಸೌಧದ ಮೆಟ್ಟಿಲುಗಳನ್ನು ಕಷ್ಟಪಟ್ಟೇ ಹತ್ತಿದ ಬಿಎಸ್​ವೈ, ರೈತರ, ಬಡವರ ಸಮಸ್ಯೆಗಳನ್ನು ಪರಿಹರಿಸಲು ಹೋರಾಟಗಳನ್ನು ನಡೆಸಿದರು. ನಗರಕ್ಕೆ ಸೀಮಿತವಾಗಿದ್ದ ಬಿಜೆಪಿಯನ್ನು ಹಳ್ಳಿ ಹಳ್ಳಿಗೂ ಮುಟ್ಟಿಸುವಲ್ಲಿ ಯಡಿಯೂರಪ್ಪನವರ ಪಾತ್ರ ಪ್ರಮುವಾಗಿದೆ. ಅವರು ನಡೆಸಿದ ಹೋರಾಟಗಳಿಂದಾಗಿ ಶೂನ್ಯ ಸ್ಥಾನದಲ್ಲಿದ್ದ ಬಿಜೆಪಿ ಇವತ್ತು ಹೆಮ್ಮರವಾಗಿ ಬೆಳೆಯಲು ಸಾಧ್ಯವಾಯಿತು ಎಂಬುದು ವಾಸ್ತವಾಂಶ.

ರಾಜ್ಯಾದ್ಯಂತ ಪ್ರವಾಸ : ಉಪಮುಖ್ಯಮಂತ್ರಿಯಾಗಿ 2006 ರಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್. ಯಡಿಯೂರಪ್ಪ, 20 ತಿಂಗಳ ಕಾಲ ಹಲವು ಜನಪರ ಕಾರ್ಯಗಳನ್ನು ಕೈಗೊಂಡರು. ನಂತರ ರಾಜಕೀಯ ಬೆಳವಣಿಗೆಯಿಂದ ಮುಖ್ಯಮಂತ್ರಿ ಹುದ್ದೆ ಸಿಗಲಿಲ್ಲ. ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವ ಶಪಥ ಮಾಡಿದ ಯಡಿಯೂರಪ್ಪ ರಾಜ್ಯಾದ್ಯಂತ ಪ್ರವಾಸ ಮಾಡಿ 2008 ರಲ್ಲಿ ಬಹುಮತದೊಂದಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದರು. ನಂತರ ಆಂತರಿಕ ಕಚ್ಚಾಟದಿಂದಾಗಿ ಬಿಜೆಪಿ ಅಧಿಕಾರ ಕಳೆದುಕೊಂಡಿತು.

ಬಿಜೆಪಿ ಅಧಿಕಾರಕ್ಕೆ ತರಲು ಪಣ : 2008 ರಲ್ಲಿ ಇದ್ದಂತಹ ಅನುಕಂಪದ ಅಲೆಯು 2018 ರ ಚುನಾವಣೆಯಲ್ಲಿ ಇರಲಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನಪ್ರಿಯ ಯೋಜನೆಗಳನ್ನು ನೀಡುವ ಮೂಲಕ ಜನಮನ ಗೆದ್ದಿದ್ದರು. ಇದನ್ನು ಮೆಟ್ಟಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಸುಲಭದ ಮಾತಾಗಿರಲಿಲ್ಲ. ಆದರೆ, ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲೇ ಬೇಕು ಎಂದು ಪಣತೊಟ್ಟ ಬಿಎಸ್​ವೈ, ಸಕಲ ರೀತಿಯಲ್ಲಿ ಸಜ್ಜಾದರು. ಚುನಾವಣೆ ಘೋಷಣೆಯಾಗುವ ಏಳು ತಿಂಗಳ ಮೊದಲೇ ಪೂರ್ವ ತಯಾರಿ ನಡೆಸಿ ನವ ಕರ್ನಾಟಕ ಪರಿವರ್ತನಾ ಯಾತ್ರೆಯನ್ನು ಕೈಗೊಂಡರು.

ರಾಜ್ಯದ 224 ಕ್ಷೇತ್ರಗಳಲ್ಲಿಯೂ ಪ್ರವಾಸ ಕೈಗೊಂಡು ಅವಿರತ ಶ್ರಮದ ಫಲವಾಗಿ ಬಿಜೆಪಿ 104 ಸ್ಥಾನಗಳನ್ನು ಗಳಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಚುನಾವಣೆ ಘೋಷಣೆಯಾದ ಬಳಿಕವೂ ರಾಜ್ಯದ ಉದ್ದಗಲಕ್ಕೂ ಏಕಾಂಗಿಯಾಗಿ ಸಂಚರಿಸಿ ಬಿಜೆಪಿ ಪರ ಜನರನ್ನು ಓಲೈಸಿಕೊಳ್ಳುವಲ್ಲಿನ ಯಡಿಯೂರಪ್ಪ ಸಫಲರಾದರು.

2018 ರ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಅನ್ನು ಮಣಿಸಿ ಬಿಜೆಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ಯಡಿಯೂರಪ್ಪ ಪಣತೊಟ್ಟಿದ್ದರು. ಇದಕ್ಕಾಗಿ ರಾಜ್ಯ ಪ್ರವಾಸ ಕೈಗೊಳ್ಳುವುದರ ಜತೆಗೆ ‘ಶೋಷಿತರೆಡೆಗೆ ನಮ್ಮ ನಡಿಗೆ’ ಅಭಿಯಾನ ಪ್ರಾರಂಭಿಸಿದರು. ಯಡಿಯೂರಪ್ಪ ಅವರ ಈ ಅಭಿಯಾನವು ಕಾಂಗ್ರೆಸ್‌ಗೆ ರಾಜಕೀಯವಾಗಿ ಭಾರಿ ಪೆಟ್ಟುಬೀಳುವಂತೆ ಮಾಡಿತು. ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಗಳಿಸುವಂತೆ ಮಾಡಿತು.

ರಾಜ್ಯದ ವಿವಿಧ ಜಿಲ್ಲೆಗಳ ದಲಿತರ ಮನೆಗೆ ಹೋಗಿದ್ದ ವೇಳೆ ನೀಡಿದ ಸತ್ಕಾರಕ್ಕೆ ಪ್ರತಿಯಾಗಿ ಕೃತಜ್ಞತೆ ಸಲ್ಲಿಸಲು ಯಡಿಯೂರಪ್ಪ ಅವರು 2017 ರಲ್ಲಿ ತಮ್ಮ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಕೃತಜ್ಞತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಪಕ್ಷದ ವತಿಯಿಂದ ನಡೆಸಿದ ಅಭಿಯಾನದ ಅಂಗವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಉಪಾಹಾರ, ಊಟ ಸೇವಿಸಿದ ದಲಿತ ಕುಟುಂಬಗಳನ್ನು ತಮ್ಮ ಮನೆಗೆ ಕರೆದು ಊಟ ಹಾಕಿ ಕೃತಜ್ಞತೆ ಸಲ್ಲಿಸಿದರು.

ಪ್ರವಾಹ ನಿರ್ವಹಣೆಯಲ್ಲಿ ಏಕಾಂಗಿ ಹೋರಾಟ : 2019 ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಯಡಿಯೂರಪ್ಪ ಅವರಿಗೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಯಿತು. ಆಗ ಸುರಿದ ಧಾರಾಕಾರ ಮಳೆಗೆ ರಾಜ್ಯವೇ ತತ್ತರಿಸಿತು. ಆ ಸಮಯದಲ್ಲಿ ಸಚಿವ ಸಂಪುಟ ಕೂಡ ರಚನೆಯಾಗಿರಲಿಲ್ಲ. ಒಬ್ಬರೇ ಯುವಕನಂತೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡರು. ಕೇಂದ್ರದ ನೆರವಿಗಾಗಿಯೂ ಕಾಯದೆ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಭಾಯಿಸಿದರು. ಈ ಮೂಲಕ ಇಡೀ ರಾಜ್ಯವೇ ನಿಬ್ಬೆರಗಾಗುವಂತೆ ಮಾಡಿದರು.

ರಾಜ್ಯದ ಚರಿತ್ರೆಯಲ್ಲಿಯೇ ನಾಲ್ಕು ದಶಕಗಳ ಬಳಿಕ ಪ್ರಕೃತಿ ಮುನಿಸಿಗೆ ರಾಜ್ಯ ನಲುಗಿದ್ದು, ನೆರೆ ಹಾವಳಿಯಿಂದಾಗಿ ಲೆಕ್ಕಕ್ಕೆ ಸಿಗದಷ್ಟು ಹಾನಿಯಾಯಿತು. ಆದರೂ ಜನರ ರಕ್ಷಣೆಗಾಗಿ ಒಬ್ಬರೇ ಸಂಚರಿಸಿ ಸುರಕ್ಷತೆ ಕ್ರಮ ಕೈಗೊಂಡಿದ್ದು ಈಗ ಇತಿಹಾಸ.

ಕೋವಿಡ್ ಅತಿದೊಡ್ಡ ಸವಾಲು ಎದುರಿಸಿದ ಬಿಎಸ್ ವೈ : ಸದಾ ಸವಾಲುಗಳಿಗೆ ಎದೆಯೊಡ್ಡಿ ಕೆಲಸ ಮಾಡುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಾಲ್ಕನೇ ಬಾರಿಗೆ ರಾಜ್ಯದ ಅಧಿಕಾರ ಗದ್ದುಗೆ ಹಿಡಿದಾಗ ಪ್ರವಾಹ ಸಮಸ್ಯೆ ತಲೆದೋರಿತು. ನಂತರ ಅದನ್ನು ಸಮರ್ಥವಾಗಿ ನಿಭಾಯಿಸಿ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದ ವೇಳೆಗೆ ಎದುರಾಗಿದ್ದು, ವಿಶ್ವವನ್ನೇ ತಲ್ಲಣಗೊಳಿಸಿದ ಕೋವಿಡ್ ಸೋಂಕು ಎಂಬ ಮಹಾಮಾರಿ.

ಬಜೆಟ್ ಅಧಿವೇಶನ ಸಂದರ್ಭ, ರಾಜ್ಯದಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕನ್ನು ತಡೆಯುವ ಸಂಬಂಧ ಅಧಿವೇಶನವನ್ನೇ ಮೊಟಕುಗೊಳಿಸಿ ರಾಜ್ಯದ ಜನತೆಯ ಆರೋಗ್ಯದ ಕಡೆ ಗಮನ ಹರಿಸಿದರು. ಪ್ರತಿನಿತ್ಯ ಸಭೆಗಳನ್ನು ನಡೆಸಿ ಆಡಳಿತ ಯಂತ್ರವನ್ನು ಮತ್ತಷ್ಟು ಚುರುಕುಗೊಳಿಸಿದರು. ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಬದಿಗೊತ್ತಿ ಕೋವಿಡ್ ನಿಯಂತ್ರಣಕ್ಕೆ ಸಂಪೂರ್ಣ ಗಮನಹರಿಸಿದರು. ಉಸ್ತುವಾರಿ ಸಚಿವರು, ಅಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಕೋವಿಡ್ ಸೋಂಕು ಹತೋಟಿಗೆ ತರಲು ಹೆಚ್ಚಿನ ಹೊಣೆಗಾರಿಕೆ ನೀಡಿದರು. ಜನರ ಆರೋಗ್ಯದ ದೃಷ್ಟಿಯಿಂದ ಸಕಲ ರೀತಿಯ ಕಾರ್ಯಗಳನ್ನು ಕೈಗೊಳ್ಳಲು ಟೊಂಕಕಟ್ಟಿ ನಿಂತರು.

ಸಚಿವರ ಜೊತೆ ಐಎಎಸ್ ಅಧಿಕಾರಿಗಳು, ಕೆಎಎಸ್ ಅಧಿಕಾರಿಗಳನ್ನು ಬಳಸಿಕೊಂಡರು. ಕೆಎಎಸ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜನೆ ಮಾಡಿ ಕೊರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಂಡರು. ಪ್ರತಿಪಕ್ಷಗಳ ಆರೋಪಗಳಿಗೆ ಕಿವಿಗೊಡದೆ ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಂಡರು. ರಾಜ್ಯದಲ್ಲಿ ಸೋಂಕು ಪತ್ತೆಯಾಗುತ್ತಿದ್ದಂತೆ ಎಚ್ಚೆತ್ತು ಲಾಕ್‌ಡೌನ್‌ನಂತಹ ಕ್ರಮ ಕೈಗೊಂಡು ಜನರ ಜೀವ ಉಳಿಸುವ ಕಾರ್ಯದಲ್ಲಿ ಮಗ್ನರಾದರು. ತಮ್ಮ ವಯಸ್ಸನ್ನು ಲೆಕ್ಕಿಸದೆ ಯಡಿಯೂರಪ್ಪ ಅವರು ಸತತವಾಗಿ ಸಭೆಗಳನ್ನು ನಡೆಸಿದರು. ಜಿಲ್ಲಾಡಳಿತಗಳು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿ ನಿಯಂತ್ರಣಕ್ಕೆ ಆದ್ಯತೆ ನೀಡಿದರು.

ಕೋವಿಡ್‌ನ ಎರಡನೇ ಅಲೆ ರಾಜ್ಯಕ್ಕೆ ಭಾರಿ ಪೆಟ್ಟು ನೀಡಿತು. ಆಮ್ಲಜನಕ ಕೊರತೆ, ಬೆಡ್ ಕೊರತೆ, ಔಷಧಿಗಳ ಪೂರೈಕೆ ಸರಿಯಾಗಿ ಆಗದ ಕಾರಣ ಸಾಕಷ್ಟು ಸಮಸ್ಯೆ ಎದುರಿಸಬೇಕಾಯಿತು. ಇಂತಹ ಸಂದರ್ಭದಲ್ಲೂ ಎದೆಗುಂದದ ಬಿಎಸ್ ವೈ, ರಾಜ್ಯದಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯನ್ನು ಹತೋಟಿಗೆ ತರಲು ಆಮ್ಲಜನಕ ಪೂರೈಕೆ, ರೆಮ್‌ಡೆಸಿವಿರ್, ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿನ ಹಾಸಿಗೆ ಲಭ್ಯ ಮತ್ತು ವಾರ್ ರೂಂ ಗಳೆಂದು ನಾಲ್ಕು ವಿಭಾಗಗಳನ್ನು ರಚಿಸಿ, ಐವರು ಸಚಿವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಿ ಮಹತ್ವದ ತೀರ್ಮಾನ ಕೈಗೊಂಡರು.

ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ್​ ನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಹೊಣೆಗಾರಿಕೆಯನ್ನು ನೀಡಿ ಜನರಿಗೆ ಸಮಸ್ಯೆಯಾಗದಂತೆ ನೋಡಿಕೊಂಡರು.

ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಆಕ್ಸಿಜನ್ ಸರಬರಾಜು ಮೇಲ್ವಿಚಾರಣೆ ನೀಡಿದರೆ, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಅವರಿಗೆ ರೆಮ್‌ಡೆಸಿವಿರ್ ಮತ್ತು ಇತರೆ ಔಷಧ ಅಗತ್ಯತೆಗಳ ನಿರ್ವಹಣೆ ಹಾಗೂ ಮಾನವ ಸಂಪನ್ಮೂಲ ನಿರ್ವಹಣೆ ಮೇಲ್ವಿಚಾರಣೆ ವಹಿಸಲಾಯಿತು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆ, ವೈದ್ಯಕೀಯ ಕಾಲೇಜಿನಲ್ಲಿನ ಹಾಸಿಗೆ ವ್ಯವಸ್ಥೆ, ಸಮಸ್ಯೆ ನಿವಾರಣೆಯ ಮೇಲ್ವಿಚಾರಣೆಯನ್ನು ನೀಡಲಾಯಿತು. ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರಿಗೆ ವಾರ್ ರೂಂ ಜವಾಬ್ದಾರಿಯನ್ನು ವಹಿಸಿ ವ್ಯವಸ್ಥಿತವಾಗಿ ಕೊರೊನಾ ಹತೋಟಿಗೆ ತರುವಲ್ಲಿ ಯಶಸ್ವಿಯಾದರು.

ಆಸ್ಪತ್ರೆಯಿಂದಲೇ ಕಾರ್ಯನಿರ್ವಹಣೆ ಮಾಡಿದ ಸಿಎಂ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎರಡು ಬಾರಿ ಕೊರೊನಾ ಸೋಂಕಿಗೆ ಒಳಗಾಗಿ ನಗರದ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಆಸ್ಪತ್ರೆಯಿಂದಲೇ ಪ್ರತಿನಿತ್ಯ ಅಧಿಕಾರಿಗಳು, ಸಚಿವರ ಜತೆ ಸಭೆ ನಡೆಸಿ ಕೊರೊನಾ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದ್ದರು. ಅಲ್ಲದೇ, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಗತ್ಯ ಸೂಚನೆಗಳನ್ನು ಸಹ ನೀಡುತ್ತಿದ್ದರು. ಸರ್ಕಾರದ ಮುಖ್ಯಕಾರ್ಯದರ್ಶಿ, ಜಿಲ್ಲಾಧಿಕಾರಿಗಳು ಜತೆ ವಿಡಿಯೋ ಸಂವಾದ ನಡೆಸಿ ಕೊರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡುತ್ತಿದ್ದರು. ತಮ್ಮ ಇಳಿವಯಸ್ಸಿನಲ್ಲಿಯೂ ಎದೆಗುಂದದ ಯಡಿಯೂರಪ್ಪ, ಧೈರ್ಯದಿಂದ ಕೋವಿಡ್ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು.

Last Updated : Jul 26, 2021, 1:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.