ETV Bharat / state

ರಾಜಕೀಯ ದ್ವೇಷ ಆರೋಪ : ಈ 5 ಕುಟುಂಬಗಳಿಗಿಲ್ಲ ನೀರಿನ ಭಾಗ್ಯ!

ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಗ್ರಾಮ ಪಂಚಾಯತ್​ ವ್ಯಾಪ್ತಿಯ ಹಮಾಮ್​​ ಗ್ರಾಮದಲ್ಲಿ ಐದು ಕುಟುಂಬಗಳು ನೀರಿನ ವ್ಯವಸ್ಥೆ ಇಲ್ಲದೆ ಪರದಾಟ ನಡೆಸುತ್ತಿವೆ. ರಾಜಕೀಯ ದ್ವೇಷದಿಂದ ಹೀಗೆ ಮಾಡುತ್ತಿದ್ದಾರೆ ಎಂದು ಕುಟುಂಬಗಳು ಆರೋಪ ಮಾಡಿವೆ.

ನೀರಿಗಾಗಿ ಪರದಾಡುತ್ತಿರುವ ಕುಟುಂಬಗಳು
Political issues : Five families no water facility in Doddaballapur
author img

By

Published : Apr 11, 2021, 9:59 AM IST

ದೊಡ್ಡಬಳ್ಳಾಪುರ: ಪ್ರತಿಯೊಂದು ಗ್ರಾಮದಲ್ಲಿ ಪಂಚಾಯತ್​ ವತಿಯಿಂದ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ ಈ ಗ್ರಾಮ ಪಂಚಾಯತ್​ನಲ್ಲಿ ಐದು ಕುಟುಂಬಳಿಗೆ ಮಾತ್ರ ನೀರಿನ ಭಾಗ್ಯ ಇಲ್ಲ. ರಾಜಕೀಯ ದ್ವೇಷದಿಂದ ಪಿಡಿಒ ನೀರಿನ ಸಂಪರ್ಕ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ನೀರಿನ ಸೌಲಭ್ಯವಿಲ್ಲದೆ ಪರದಾಡುತ್ತಿರುವ ಕುಟುಂಬಗಳು

ತಾಲೂಕಿನ ಕೊನಘಟ್ಟ ಗ್ರಾಮ ಪಂಚಾಯತ್​ ವ್ಯಾಪ್ತಿಯ ಹಮಾಮ್​​ ಗ್ರಾಮದ ಇಬ್ರಾಹಿಂ ಎಂಬುವವರು ತಮ್ಮ ಮಕ್ಕಳಿಗಾಗಿ 5 ಮನೆಗಳನ್ನು ನಿರ್ಮಿಸಿದ್ದಾರೆ. ಅವುಗಳಲ್ಲಿ ಕೆಲವು ಮನೆಯನ್ನು ಬಾಡಿಗೆ ನೀಡಿದ್ದಾರೆ. ಈ 5 ಮನೆಗಳಲ್ಲಿ 25 ಜನರು ವಾಸವಾಗಿದ್ದು, ಪಂಚಾಯತ್​ ವತಿಯಿಂದ ಪ್ರತಿ ಮನೆಗೂ ನೀರಿನ ಪೂರೈಕೆ ಆಗುತ್ತಿದೆ. ಆದರೆ ಈ 5 ಕುಟುಂಬಗಳಿಗೆ ಮಾತ್ರ ನೀರು ಪೂರೈಕೆ ಆಗುತ್ತಿಲ್ಲ. ಇದರಿಂದ ಕುಟುಂಬಗಳು ಪ್ರತಿದಿನ ನೀರಿಗಾಗಿ ಪರದಾಡುತ್ತಿವೆ.

ಹಲವು ಬಾರಿ ಮನವಿ ಮಾಡಿದ್ರೂ ಪ್ರಯೋಜವಾಗಿಲ್ಲ:

ಮನೆ ಮಾಲೀಕ ನೀರಿನ ಸಂಪರ್ಕ ಕಲ್ಪಿಸುವಂತೆ ಕೊನಘಟ್ಟ ಗ್ರಾ.ಪಂ.ಗೆ ಹಲವು ಬಾರಿ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕೊನಘಟ್ಟ ಗ್ರಾಪಂ ಪಿಡಿಒ ರಘು ಎಂಬುವವರಿಗೆ ಐದು ಮನೆಗಳಿಗೆ ನೀರಿನ ಸಂಪರ್ಕ ನೀಡುವಂತೆ ಖುದ್ದು ಶಾಸಕ ವೆಂಕಟರಮಣಯ್ಯ ತಾಲೂಕು ಪಂಚಾಯತ್​ ಕಾರ್ಯ ನಿರ್ವಾಹಣಾಧಿಕಾರಿ ಮುರುಡಯ್ಯ, ತಾ.ಪಂ ಅಧ್ಯಕ್ಷ ನಾರಾಯಣಗೌಡ ಇತರೆ ಜನಪ್ರತಿನಿಧಿಗಳು ಸಾಕಷ್ಟು ಬಾರಿ ಹೇಳಿದರೂ ಪಿಡಿಒ ನೀರಿನ ಸಂಪರ್ಕ ನೀಡಿಲ್ಲವೆಂದು ಇಬ್ರಾಹಿಂ ಆರೋಪಿಸಿದ್ದಾರೆ.

ಪಿಡಿಒ ರಘು ಅವರ ಪ್ರಕಾರ ಇಬ್ರಾಹಿಂ ನಿರ್ಮಿಸಿರುವ ಮನೆಗಳು ಸರ್ಕಾರಿ ಜಾಗದಲ್ಲಿವೆ. ಆದ್ದರಿಂದ ಆ ಮನೆಗಳಿಗೆ ನೀರಿನ ಸಂಪರ್ಕ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. 1995ರಲ್ಲಿ ಇಬ್ರಾಹಿಂ ತಮ್ಮ ಜಾಗದಲ್ಲಿನ 6 ಗುಂಟೆ ಜಾಗವನ್ನು ದೇವಸ್ಥಾನದ ರಸ್ತೆಗಾಗಿ ಬಿಟ್ಟು ಕೊಟ್ಟಿದ್ದಾರೆ. ಆದರೆ ಪಿಡಿಒ 5 ಆಡಿ ಜಾಗ ಒತ್ತುವರಿ ಮಾಡಿಕೊಂಡರೆಂದು ಮನೆಗಳಿಗೆ ನೀರಿನ ಸಂಪರ್ಕ ಕೊಡದಿರುವುದು ಯಾವ ನ್ಯಾಯ ಎಂಬುದು ಇಬ್ರಾಹಿಂ ಅವರ ವಾದವಾಗಿದೆ.

ಓದಿ: ಮುದಗಲ್​ನಲ್ಲಿ ಬಿಎಸ್​ವೈ ಮಠಗಳಿಗೆ ಭೇಟಿ: ಆಲಂ ದರ್ಗಾದತ್ತ ಸುಳಿಯದ ಸಿಎಂ

ರಾಜಕೀಯ ದ್ವೇಷ:

ಕಳೆದ ಗ್ರಾ.ಪಂ. ಚುನಾವಣೆಯಲ್ಲಿ ಇಬ್ರಾಹಿಂ ಅವರ ಮಗ ಸ್ಪರ್ಧಿಸಿದ್ದರು. ಇದು ರಾಜಕೀಯ ದ್ವೇಷಕ್ಕೆ ಕಾರಣವಾಗಿದೆ. ಗ್ರಾಮದ ಇಬ್ಬರು ಗ್ರಾಮ ಪಂಚಾಯತ್​ ಸದಸ್ಯರು ನೀರಿನ ಸಂಪರ್ಕ ಕೊಡದಂತೆ ಪಿಡಿಒ ಮೇಲೆ ಒತ್ತಡ ಹಾಕಿದ್ದಾರೆಂಬ ಆರೋಪ ಸಹ ಕೇಳಿ ಬಂದಿದೆ. ಗ್ರಾಮದಲ್ಲಿನ ಕೆಲವು ಮನೆಗಳಿಗೆ ಖಾತೆಯೇ ಇಲ್ಲ. ಇಂತಹ ಮನೆಗಳಿಗೆ ನೀರಿನ ಸಂಪರ್ಕವನ್ನು ಗ್ರಾ.ಪಂ ಕೊಟ್ಟಿರುವಾಗ ಈ ಮನೆಗಳಿಗೆ ನೀರಿನ ಸಂಪರ್ಕ ಕೊಡಲು ಯಾವ ಕಾನೂನು ತೊಡಕಿದೆ ಎಂಬ ಪ್ರಶ್ನೆ ಸಹ ಗ್ರಾಮಸ್ಥರನ್ನು ಕಾಡುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.