ಬೆಂಗಳೂರು: ನಗರದ ಕೆಲ ಪೊಲೀಸ್ ಠಾಣೆಗಳ ಟ್ವಿಟ್ಟರ್ ಖಾತೆಗಳಿಗೆ ದುಷ್ಕರ್ಮಿಗಳು ಕನ್ನ ಹಾಕಿದ್ದಾರೆ.
![police Twitter account Hack in bangalore](https://etvbharatimages.akamaized.net/etvbharat/prod-images/4882894_thumbbgl.jpg)
ಟ್ವಿಟರ್ ಖಾತೆಯಲ್ಲಿ ಏರ್ಪೊರ್ಟ್ ಪೋಸ್ಟರ್ಗಳು ಹಾಗೂ ಒಲಾ ಕಂಪನಿಯ ಜಾಹೀರಾತುಗಳು ಸೇರಿದಂತೆ ಇತರೆ ಅನವಶ್ಯಕ ವಿಚಾರಗಳನ್ನು ಪೊಸ್ಟ್ ಮಾಡಲಾಗಿದೆ. ಖಾತೆ ಹ್ಯಾಕ್ ಮಾಡಿರುವ ಬಗ್ಗೆ ಪೊಲೀಸರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಸೈಬರ್ ಕ್ರೈಂ ಪೊಲೀಸರಿಗೆ ಈ ಪ್ರಕರಣ ಇದೀಗ ತೀವ್ರ ತಲೆನೋವಾಗಿ ಪರಿಣಮಿಸಿದೆ. ಯಾಕೆಂದ್ರೆ, ಈ ಹಿಂದೆ ಕೆ.ಆರ್ ಪುರ ಪೊಲೀಸ್ ಠಾಣೆ, ಏರ್‌ಪೋರ್ಟ್ ಸಂಚಾರ ಠಾಣೆ ಹಾಗು ಶಿವಾಜಿನಗರ ಪೊಲೀಸ್ ಠಾಣೆಗಳ ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡಲಾಗಿತ್ತು. ಈ ಪ್ರಕರಣಗಳ ತನಿಖೆ ಇನ್ನೂ ನಡೆಯುತ್ತಿದೆ.