ಬೆಂಗಳೂರು : ದರೋಡೆ, ಬೈಕ್ ಕಳ್ಳತನ ಸೇರಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಕುಖ್ಯಾತ ದರೋಡೆಕೋರ ಶಬರಿಷ್‌ನ ಗುಂಡು ಹೊಡೆದು ಬಂಧಿಸಲಾಗಿತ್ತು. ಇದರ ಬೆನ್ನಲೇ ಈಗ ಅವನ ಸಹಚರ ಇಮ್ರಾನ್‌ಗೂ ಗುಂಡು ಹಾರಿಸಿ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ಈತನ ಜೊತೆಯಲ್ಲಿದ್ದ ರಂಜಿತ್ ಎಂಬಾತನನ್ನ ಯಲಹಂಕ ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ.
ಯಲಹಂಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳ್ಳತನ, ಸುಲಿಗೆ ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು ಪೊಲೀಸರ ನಿದ್ದೆಗೆಡಿಸಿದ್ದರು. ನಿನ್ನೆಯಷ್ಟೇ ಗ್ಯಾಂಗ್‌ನ ಪ್ರಮುಖ ಆರೋಪಿ ಶಬರೀಷ್ ಎಡಗಾಲಿಗೆ ಗುಂಡು ಹೊಡೆದು ಬಂಧಿಸಲಾಗಿತ್ತು. ಈತನ ಜೊತೆಯಲ್ಲಿದ್ದ ಮತ್ತಿಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದರು.
ಇಂದು ವಿದ್ಯಾರಣ್ಯಪುರ ಠಾಣೆಯ ಕಳತೂರು ಫಾರ್ಮ್ ಬಳಿ ಆರೋಪಿಗಳ ಇರುವಿಕೆ ಬಗ್ಗೆ ಖಚಿತಿ ಮಾಹಿತಿ ಮೇರೆಗೆ ಯಲಹಂಕ ನ್ಯೂಟೌನ್ ಠಾಣೆಯ ಇನ್‌ಸ್ಪೆಕ್ಟರ್ ಅರುಣ್ ಕುಮಾರ್ ನೇತೃತ್ವದ ತಂಡ ತೆರಳಿದೆ. ಸಿಬ್ಬಂದಿ ಮಧುಕುಮಾರ್ ಬಂಧಿಸಲು ಹೋಗುತ್ತಿದ್ದಂತೆ ಆರೋಪಿಗಳು ಹಲ್ಲೆ ನಡೆಸಿ ಎಸ್ಕೇಪ್ ಆಗಲು ಮುಂದಾಗಿದ್ದಾರೆ.
ಶರಣಾಗುವಂತೆ ಗಾಳಿಯಲ್ಲಿ ಗುಂಡು ಹಾರಿಸಿದರೂ ಕೇಳದ ಆರೋಪಿ ಇಮ್ರಾನ್ ಪಾಷಾ ಕಾಲಿಗೆ ಗುಂಡು ಹಾರಿಸಿ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಜೊತೆಯಲ್ಲಿದ್ದ ಸಹಚರ ರಂಜಿತ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ : ರಾಮೋಜಿ ಫಿಲಂ ಸಿಟಿಯ ಖುಷಿಗೆ ಇನ್ನಷ್ಟು ಮೆರುಗು: ಫೆ.18ರಂದು ಗ್ರ್ಯಾಂಡ್ ಓಪನಿಂಗ್!
ಯಲಹಂಕ ರೌಡಿಶೀಟರ್ ಶಬರೀಷ್ ಹಾಗೂ ಆತನ ಸಹಚರರು ಯಲಹಂಕ ಸೇರಿದಂತೆ ನಗರದ ಈಶಾನ್ಯ ವಿಭಾಗದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ಕಳೆದ ಫೆಬ್ರುವರಿ 3 ರಂದು ಯಲಹಂಕ ಸುರಭೀ ಲೇಔಟ್‌ನಲ್ಲಿ ಎರಡು ಬ್ಲಾಕ್ ಪಲ್ಸರ್ ಬೈಕ್, ಹೊಂಡಾ ಡಿಯೋ ಕದ್ದಿದ್ದರು. ಯಲಹಂಕ ಏರ್ ಶೋ ವೇಳೆ ಬೈಕ್ ಕಳ್ಳತನ ಮಾಡಿದ್ದರು. ಈ ಬಗ್ಗೆ ಯಲಹಂಕ ಠಾಣೆಯಲ್ಲಿ ಮೂರು ಎಫ್‌ಐಆರ್ ದಾಖಲಾಗಿತ್ತು.