ಬೆಂಗಳೂರು: ಕಾಟನ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಾಸ್ ಸ್ಟೇಯ್ಸ್ ಡೀಲಕ್ಸ್ ಲಾಡ್ಜ್ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಮಾಹಿತಿ ಮೇಲೆ ಪೊಲೀಸರು ದಾಳಿ ನಡೆಸಿ ಮನೋಜ್ ಎಂಬಾತನನ್ನು ಬಂಧಿಸಿದ್ದಾರೆ.
ಮನೋಜ್ ಎಂಬಾತ ದಂಧೆ ಮಾಡ್ತಿರುವ ಬಗ್ಗೆ ಸಿಸಿಬಿ ಹೆಚ್ಚುವರಿ ಆಯುಕ್ತರು ಹಾಗೂ ಡಿಸಿಪಿ ಅವರ ಟೀಮ್ಗೆ ಮಾಹಿತಿ ಲಭ್ಯವಾಗಿತ್ತು. ದಾಳಿ ವೇಳೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 6 ಆರೋಪಿಗಳನ್ನ ಬಂಧಿಸಿ ಏಳು ಯುವತಿಯರನ್ನ ರಕ್ಷಣೆ ಮಾಡಿದ್ದಾರೆ.
ಇನ್ನು ವಿಚಾರಣೆ ವೇಳೆ ಆರೋಪಿಗಳು ಹೊರ ರಾಜ್ಯದ ಅಮಾಯಕ ಯುವತಿಯರನ್ನ ನಗರಕ್ಕೆ ಕೆಲಸಕ್ಕೆ ಎಂದು ಕರೆತಂದು, ತದನಂತರ ಹೆಚ್ಚು ಹಣ ಹಾಗೂ ಲಾಭ ಮಾಡುವ ಆಸೆ ತೋರಿಸಿ ಮಾಂಸ ದಂಧೆಯಲ್ಲಿ ತೊಡಗಿಸ್ತಿದ್ರು. ಹಾಗೆ ಗಿರಾಕಿಗಳಿಗೆ ಯುವತಿಯರ ಫೋಟೋಗಳನ್ನ ಕಳುಹಿಸಿ, ಅಕ್ರಮವಾಗಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ರು. ಈ ಕುರಿತು ಸದ್ಯ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.