ಬೆಂಗಳೂರು: ಶಾಲಾ ಆವರಣದ 100 ಮೀಟರ್ ಆಸು ಪಾಸಿನಲ್ಲಿ ಸಿಗರೇಟ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ನಗರದ ಪಶ್ಚಿಮ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ. ಹಾಗೆಯೇ, 17 ಎಫ್ಐಆರ್ ದಾಖಲಿಸಿಕೊಂಡು 52,750 ರೂ. ದಂಡ ವಸೂಲಿ ಮಾಡಿದ್ದಾರೆ.
ಇಂದು ಶಾಲೆ ಆರಂಭವಾಗಿದ್ದರಿಂದ ಪಶ್ಚಿಮ ವಿಭಾಗದಲ್ಲಿರುವ ಶಾಲೆಗಳ ಸಮೀಪದ ಅಂಗಡಿಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಆ ವೇಳೆ, ಸಿಗರೇಟ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಚಾಮರಾಜಪೇಟೆಯ 10, ಉಪ್ಪಾರ್‌ಪೇಟೆ 35, ಕಲಾಸಿಪಾಳ್ಯ 15, ಆರ್.ಆರ್‌ನಗರ 59, ಕೆಂಗೇರಿ 25, ಜ್ಞಾನಭಾರತಿ ಠಾಣಾ ವ್ಯಾಪ್ತಿಯ 20 ಸೇರಿ ಒಟ್ಟು 304 ಪ್ರಕರಣ ದಾಖಲಿಸಿ ಸ್ಥಳದಲ್ಲಿಯೇ ದಂಡ ವಿಧಿಸಿದರು.
ಓದಿ: ತುಮಕೂರಲ್ಲಿ ದೇವೇಗೌಡರನ್ನು ಸೋಲಿಸಲು ಕಾಂಗ್ರೆಸ್ ಜೊತೆ ಚಿತಾವಣೆ ಮಾಡಿದ್ದೇ ಶಾಸಕ ಶ್ರೀನಿವಾಸ್: ಹೆಚ್ಡಿಕೆ