ETV Bharat / state

ಚಿಲುಮೆ ಸಂಸ್ಥೆ ರವಿಕುಮಾರ್ ಆಪ್ತನ ಮನೆ, ಕಚೇರಿಗಳ ಮೇಲೆ ಪೊಲೀಸ್ ದಾಳಿ - ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಆಪ್ತ ಮನೆ

ಮತದಾರರ ವೈಯಕ್ತಿಕ ಮಾಹಿತಿ ಸಂಗ್ರಹ ಆರೋಪ ಪ್ರಕರಣ ಸಂಬಂಧ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಆಪ್ತ ಮನೆ ಹಾಗೂ ಕಚೇರಿಗಳ ಮೇಲೆ ಹಲಸೂರು ಗೇಟ್ ಪೊಲೀಸರಿಂದ ದಾಳಿ ನಡೆದಿದೆ.

police-raid-on-chilume-institute-ravikumar-close-aide-house
ಚಿಲುಮೆ ಸಂಸ್ಥೆ ರವಿಕುಮಾರ್ ಆಪ್ತನ ಮನೆ, ಕಚೇರಿಗಳ ಮೇಲೆ ಪೊಲೀಸ್ ದಾಳಿ
author img

By

Published : Nov 24, 2022, 9:05 PM IST

ಬೆಂಗಳೂರು: ಮತದಾರರ ವೈಯಕ್ತಿಕ ಮಾಹಿತಿ ಸಂಗ್ರಹ ಆರೋಪ ಪ್ರಕರಣ ಸಂಬಂಧ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಆಪ್ತ ಮನೆ ಹಾಗೂ ಕಚೇರಿಗಳ ಮೇಲೆ ಹಲಸೂರು ಗೇಟ್ ಪೊಲೀಸರು ದಾಳಿ ಮಾಡಿದ್ದಾರೆ. ಅಲ್ಲದೆ, ರವಿಕುಮಾರ್ ಆಪ್ತ ಹಾಗೂ ಕಂಪ್ಯೂಟರ್ ಆಪರೇಟರ್ ಮಾರುತಿ ಎಂಬುವರ ಮನೆ ಹಾಗೂ ಮೂರು ಕಚೇರಿಗಳ ಮೇಲೆ ಇಂದು ದಾಳಿ ನಡೆಸಿದ್ದಾರೆ.‌

ಮಹದೇವಪುರ, ರಾಜಾಜಿನಗರ ಹಾಗೂ ಆರ್.ಆರ್‌.ನಗರ ಕಚೇರಿ ಹಾಗೂ ಮಾರುತಿ ಮನೆ ಸೇರಿ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿ ಎರಡು ಮೊಬೈಲ್, ಐದು ಲ್ಯಾಪ್ ಟಾಪ್, ನಕಲಿ ಗುರುತಿನ ಚೀಟಿ, ಕಾರ್ಯಾದೇಶ ಪತ್ರಗಳು ಸೇರಿ ಹಲವು ದಾಖಲಾತಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸ್​ ಮೂಲಗಳಿಂದ ತಿಳಿದು ಬಂದಿದೆ.

ಹಲವು ವರ್ಷಗಳಿಂದ ಚಿಲುಮೆ ಸಂಸ್ಥೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಮಾರುತಿ ಮಲ್ಲೇಶ್ವರ ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲದೇ ನಗರದಲ್ಲಿರುವ ಹಲವು ಕಚೇರಿಗಳೊಡನೆ ಸಮನ್ವಯ ಸಾಧಿಸುತ್ತಿದ್ದ‌. ಈ ಸಂಬಂಧ ಪೊಲೀಸರು ದಾಳಿ ನಡೆಸಿದಾಗ ಆರೋಪಿ ಮಾರುತಿ ನಾಪತ್ತೆಯಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಆತನ ಮನೆಯವರಿಗೆ ನೊಟೀಸ್ ಜಾರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಐವರು ಆರೋಪಿಗಳು, ಅಧಿಕಾರಿಗಳು ಸೇರಿ‌ ಸುಮಾರು 100 ಮಂದಿಯನ್ನು ಈವರೆಗೆ ವಿಚಾರಣೆ ನಡೆಸಲಾಗಿದೆ‌. ತನಿಖೆಗೆ ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆ. ಆರೋಪಿಗಳಿಂದ ಸುಮಾರು 250 ನಕಲಿ ಬಿಎಲ್‌ಓ ಕಾರ್ಡ್ ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮತದಾರರ ವೈಯಕ್ತಿಕ ಮಾಹಿತಿಯನ್ನ ಡಿಜಿಟಲ್ ಸಮೀಕ್ಷಾ ಆ್ಯಪ್​ಗೆ ಸೇರ್ಪಡೆಗೊಳಿಸಲು ಆರೋಪಿಗಳೆಲ್ಲರೂ ಅಂಗನವಾಡಿ, ಶಿಕ್ಷಕರು ಹಾಗೂ ಡಿ ದರ್ಜೆ ಸಿಬ್ಬಂದಿ ಸೇರಿ ಹಲವರಿಗೆ ರವಿಕುಮಾರ್ ಬಿಎಲ್‌ಓ ಕಾರ್ಡ್ ವಿತರಣೆ ಮಾಡಿದ್ದ. ಇದಕ್ಕಾಗಿ ಒಂದು ಮನೆಗೆ ಇಂತಿಷ್ಟು ಪ್ರಮಾಣದಲ್ಲಿ ಸರ್ವೇ ರಿಪೋರ್ಟ್ ಪಡೆಯುವವರು ರವಿಕುಮಾರ್​​ಗೆ ಹಣ ಪಾವತಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ‌.

ನಕಲಿ ಬಿಎಲ್ಓ ಅಧಿಕಾರಿಗಳು ಕಳೆದ‌‌ ಮೂರು ತಿಂಗಳಿಂದ ಸರ್ವೇ ಕಾರ್ಯ ಕೈಗೊಂಡಿರಲಿಲ್ಲ. 2016ರಿಂದಲೂ ಮತದಾರರ ವೈಯಕ್ತಿಕ ಮಾಹಿತಿ ದುರ್ಬಳಕೆ‌ ಮಾಡಿಕೊಂಡಿದ್ದರು. ಮೂರು ತಿಂಗಳ ಹಿಂದೆ ಆರ್.ಆರ್‌.ನಗರ ಠಾಣಾ ವ್ಯಾಪ್ತಿಯಲ್ಲಿ ಫೇಕ್ ಬಿಎಲ್‌ಓ ಕಾರ್ಡ್ ಬಳಸಿ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ‌ ಬಂದಿದ್ದರೂ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದರು‌ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಮತದಾರರ ಮಾಹಿತಿ ಅಕ್ರಮ ಸಂಗ್ರಹ ಆರೋಪ: ಚಿಲುಮೆ ಮುಖ್ಯಸ್ಥನ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.