ಬೆಂಗಳೂರು: ನಗರದ ಕೋರಮಂಗಲದಲ್ಲಿನ ಸ್ಪಾ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, 6 ಯುವತಿಯರನ್ನು ರಕ್ಷಿಸಿದ್ದಾರೆ.
ಕೋರಮಂಗಲದಲ್ಲಿನ ಜಾಕ್ ಸೆಲೂನ್ ಆ್ಯಂಡ್ ವೆಲ್ನೆಸ್ ಸ್ಪಾನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಕಲೆಹಾಕಿದ ಬೆಂಗಳೂರು ನಗರ ಅಪರಾಧ ವಿಭಾಗದ ಪೊಲೀಸರು, ಸ್ಪಾನಲ್ಲಿದ್ದ 6 ಯುವತಿಯರನ್ನು ರಕ್ಷಿಸಿದ್ದು, ಸ್ಪಾ ವ್ಯವಸ್ಥಾಪಕನನ್ನು ವಶಕ್ಕೆ ಪಡೆದಿದ್ದಾರೆ.
ಸ್ಪಾ ಮಾಲೀಕ ಅರವಿಂದ್ ಪರಾರಿಯಾಗಿದ್ದು, ಮಾಲೀಕನ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಈ ಬಗ್ಗೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.