ಬೆಂಗಳೂರು: ಕೊರೊನಾ ವಾರಿಯರ್ ಆಗಿ ಕೆಲಸ ನಿರ್ವಹಣೆ ಮಾಡ್ತಿರುವ ಪೊಲೀಸರಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿರುವ ಕಾರಣ ಸದ್ಯ ಪೊಲೀಸರಲ್ಲಿ ಆತಂಕ ಶುರುವಾಗಿದೆ.
ಕೊರೊನಾ ಬಂದ ಸಂದರ್ಭದಲ್ಲಿ ಪೊಲೀಸರು ಎಲ್ಲ ಕಂಟೇನ್ಮೆಂಟ್ ಝೋನ್ಗಳಲ್ಲಿ, ಕೊರೊನಾ ಸೋಂಕಿತರು ಇರುವ ಪ್ರದೇಶಗಳಿಗೆ ತೆರಳಿ ಭದ್ರತೆ ವಹಿಸುತ್ತಾ ಇದ್ದರು. ಆದರೆ, ಸುಮಾರು 69ಕ್ಕೂ ಹೆಚ್ಚು ಪೊಲೀಸರಲ್ಲಿ ಕೊರೊನಾ ಸೋಂಕು ಪ್ರಕರಣ ಪತ್ತೆಯಾದ ಕಾರಣ ಸದ್ಯ ಪೊಲೀಸ್ ಕ್ವಾಟರ್ಸ್ಗಳಲ್ಲಿ ಒಬ್ಬರೇ ಇರಲು ನಿರ್ಧಾರ ಮಾಡಿದ್ದಾರೆ.
ನಗರದ ಬಹುತೇಕ ಕಡೆ ಪೊಲೀಸ್ ಕ್ವಾಟರ್ಸ್ಗಳಿದ್ದು, ಕುಟುಂಬಸ್ಥರ ಜೊತೆ ಪೊಲೀಸರು ವಾಸ ಮಾಡ್ತಾರೆ. ಆದರೆ ಗಲ್ಲಿ ಗಲ್ಲಿಗಳಲ್ಲಿ ಓಡಾಡುವ ಇವರೆಲ್ಲ ತಮಗೆ ಕೊರೊನಾ ಬಂದ್ರು ಪರವಾಗಿಲ್ಲ, ಕುಟುಂಬದ ಸುರಕ್ಷತೆ ದೃಷ್ಟಿಯಿಂದ ಕ್ವಾಟರ್ಸ್ಗಳಲ್ಲಿ ಒಬ್ಬರೇ ಇರಲು ನಿರ್ಧಾರ ಮಾಡಿದ್ದಾರೆ. ಹೀಗಾಗಿ ನಗರದ ಶೇ.60 ರಷ್ಟು ಪೊಲೀಸರ ಕುಟುಂಬಸ್ಥರು ಊರಿಗೆ ತೆರಳಿದ್ದಾರೆ. ಊಟ, ತಿಂಡಿಗೆ ಎಷ್ಟೇ ಕಷ್ಟ ಆದ್ರೂ ಪರವಾಗಿಲ್ಲ ಒಬ್ಬರೆ ಇರ್ತೇವೆ ಎಂದು ಹಿರಿಯಾಧಿಕಾರಿಗಳಿಗೆ ತಿಳಿಸಿದ್ದಾರೆ.
ಪೊಲೀಸ್ ಕ್ವಾಟರ್ಸ್ ಸುತ್ತ ಮೌನ:
ಕ್ವಾಟರ್ಸ್ ಅಂದ್ರೆ ಬಹುತೇಕವಾಗಿ ಪೊಲೀಸ್ ಕುಟುಂಬಸ್ಥರು ಅಕ್ಕ ಪಕ್ಕ ವಾಸ ಮಾಡ್ತಾರೆ. ಆದ್ರೆ ಕಳೆದ ಒಂದು ವಾರದಿಂದ ಕ್ವಾಟರ್ಸ್ ಸುತ್ತ ಮುತ್ತ ನೀರವ ಮೌನ ಶುರುವಾಗಿದೆ. ಬಹುತೇಕ ಮಂದಿ ಊರಿಗೆ ತೆರಳಿದ್ದಾರೆ. ಹಾಗೆ ಇಲ್ಲಿಯೇ ಉಳಿದು ಕೊಂಡವರು ಕೂಡ ತಮ್ಮ ಮಕ್ಕಳನ್ನ ಮನೆಯಿಂದ ಹೊರ ಬಿಡ್ತಿಲ್ಲ. ಕ್ವಾಟರ್ಸ್ನಲ್ಲಿ ಒಬ್ಬ ಪೊಲೀಸರಿಗೆ ಪಾಸಿಟಿವ್ ಬಂದ್ರೆ ಕ್ವಾಟರ್ಸ್ ಅಕ್ಕಪಕ್ಕ ಹಬ್ಬುವ ಸಾಧ್ಯತೆ ಇದೆ. ಒಂದೆರಡು ತಿಂಗಳು ಕಷ್ಟ ಆದರೂ ಪರವಾಗಿಲ್ಲ ಇತ್ತ ರಜೆಯೂ ಇರಲ್ಲ, ವೀಕ್ ಆಫ್ ಇಲ್ಲ ಇಂತಹುದರಲ್ಲಿ ಫ್ಯಾಮಿಲಿ ಟೈಂ ಕೊಡಲು ಆಗಲ್ಲ. ಹೀಗಾಗಿ ಯಾಕೆ ರಿಸ್ಕ್ ತಗೋಬೇಕು ಅಂತಾ ಒಬ್ಬೊಬ್ಬರೆ ಇರೋಕ್ಕೆ ನಿರ್ಧಾರ ಮಾಡಿದ್ದಾರೆ.
ಮತ್ತೊಂದೆಡೆ ಸದ್ಯ ಕ್ವಾಟರ್ಸ್ ಸುತ್ತ ಬಿಲ್ಡಿಂಗ್, ಪೊಲೀಸರ ವಾಹನಗಳಿಗೆ ಆರೋಗ್ಯಧಿಕಾರಿಗಳು ಸ್ಯಾನಿಟೈಸ್ ಮಾಡಿದ್ದಾರೆ. ಸದ್ಯ ಪೊಲೀಸರಲ್ಲಿ ಕೂಡ ಕೊರೊನಾ ಭೀತಿ ನಿರ್ಮಾಣವಾಗಿದೆ.