ETV Bharat / state

ವಿಚಾರಣೆ ವೇಳೆ ಖಾಕಿಗೇ ಚಳ್ಳೆಹಣ್ಣು ತಿನ್ನಿಸಿದ್ದ ಶ್ರೀಕಿ.. Bitcoin Account​​ ಕಂಡ ಪೊಲೀಸರಿಗೆ ಶಾಕ್ - ಆರೋಪಿ ಶ್ರೀಕೃಷ್ಣ ಡಿಜಿಟಲ್‌ ಬಿಟ್ ಕಾಯಿನ್ ಅಕೌಂಟ್ ತನಿಖೆ

ಬಿಟ್ ಕಾಯಿನ್ ವಹಿವಾಟಿನಿಂದ ಆರೋಪಿ ಶ್ರೀಕಿಯಿಂದ (Bitcoin accused) ಲಾಭ ಪಡೆದವರು ಒಂದು ಕಡೆಯಾದರೆ, ನಷ್ಟ ಅನುಭವಿಸಿದವರೂ ಕೂಡ ಹಲವರಿದ್ದಾರೆ. ಪೋಕರ್ ಗೇಮ್, ಪ್ರಿ ಕ್ಲೈಮಿಂಗ್, ವೆಬ್‌ಸೈಟ್, ಸೋಷಿಯಲ್ ಮೀಡಿಯಾ ಆನ್‌ಲೈನ್ ಗೇಮ್​ಗಳನ್ನು ಹ್ಯಾಕ್ (game hack) ಮಾಡಿ ಸ್ನೇಹಿತರಿಗೆ ಕೋಟಿ ಕೋಟಿ ಹಣ ಗಳಿಸಿಕೊಟ್ಟಿದ್ದ ಶ್ರೀಕಿ ಹಲವರಿಗೆ ಬಿಟ್ ಕಾಯಿನ್ ಕೊಟ್ಟಿರುವ ಬಗ್ಗೆ ಮಾಹಿತಿಯಿದೆ.

police investigation on  Bitcoin fraud case
ಬಿಟ್ ಕಾಯಿನ್ ಪ್ರಕರಣ
author img

By

Published : Nov 13, 2021, 5:05 PM IST

Updated : Nov 13, 2021, 5:31 PM IST

ಬೆಂಗಳೂರು: ರಾಜ್ಯದಲ್ಲಿ ಬಿಟ್ ಕಾಯಿನ್ ಪ್ರಕರಣ (Bitcoin case) ಭಾರಿ ಚರ್ಚೆಯಾಗುತ್ತಿರುವಾಗಲೇ, ವಂಚನೆ ಜಾಲದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (Bitcoin case accused) ವಿಚಾರಣೆ ವೇಳೆ‌ ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿರುವುದು ಬೆಳಕಿಗೆ ಬಂದಿದೆ.

ಸರ್ಕಾರಿ ಹಾಗೂ ಖಾಸಗಿ ವೆಬ್​​ಸೈಟ್ ಹ್ಯಾಕ್ (website hack) ಮಾಡಿ ಕೋಟ್ಯಂತರ ರೂ. ವಂಚಿಸಿ ಡ್ರಗ್ಸ್ ಪ್ರಕರಣದಲ್ಲಿ (drugs case) ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಶ್ರೀಕಿಯು ಖಾಕಿ ಪಡೆಯನ್ನೇ ಯಾಮಾರಿಸುವ ನೈಪುಣ್ಯ ತೋರಿದ್ದ. ಡ್ರಗ್ಸ್ ಕೇಸ್ ವಿಚಾರಣೆ ವೇಳೆ ಶ್ರೀಕಿ ಬಿಟ್ ಕಾಯಿನ್ ದಂಧೆಯಲ್ಲಿ(Bitcoin fraud case) ಭಾಗಿಯಾಗಿರುವುದು ತಿಳಿದುಬಂದಿತ್ತು.

ಶ್ರೀಕಿಯ ಡಿಜಿಟಲ್‌ ಬಿಟ್ ಕಾಯಿನ್ ಅಕೌಂಟ್ ಪರಿಶೀಲಿಸಿದಾಗ 9 ಕೋಟಿ ರೂಪಾಯಿ ಮೌಲ್ಯದ 31 ಬಿಟ್ ಕಾಯಿನ್ ಪತ್ತೆ ಹಚ್ಚಿರುವುದಾಗಿ ಸಿಸಿಬಿ ಪೊಲೀಸರು ಮಾಧ್ಯಮಗಳು ಹಾಗೂ ಕೋರ್ಟ್​​ಗಳ ಮುಂದೆ ತಿಳಿಸಿದ್ದರು. ಬಳಿಕ ರಿಕವರಿ ಪ್ರಕ್ರಿಯೆಗೆ ಸಿಸಿಬಿ ಮುಂದಾಗಿತ್ತು. ಮೂರು ದಿನಗಳ ಬಳಿಕ ನುರಿತ ಸೈಬರ್ ಅಧಿಕಾರಿ ಸಮೇತ ಡಿಜಿಟಲ್ ರಿಕವರಿಗೆ ತಯಾರಿ ನಡೆದಿತ್ತು. ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಸೈನ್ಸ್​ನ ಸೈಬರ್ ತಜ್ಞರು ಹಾಗೂ ವಾಣಿಜ್ಯ ಇಲಾಖೆಯ ಹೆಚ್ಚುವರಿ ಡೈರೆಕ್ಟರ್​ವೊಬ್ಬರು ಸೇರಿದಂತೆ ನುರಿತರಿಂದ ಪ್ರಕ್ರಿಯೆ ಶುರುವಾಗಿತ್ತು.

ಡಿಜಿಟಲ್ ಕರೆನ್ಸಿ ಕಂಡು ಪೊಲೀಸರು ದಂಗು:

ಈ ಹಂತದಲ್ಲಿ ಆರೋಪಿ ಶ್ರೀಕಿಗೆ (Bitcoin accused shrikrishna) ಬಿಟ್ ಕಾಯಿನ್ ಖಾತೆ ತೆರೆಯುವಂತೆ ಸೂಚಿಸಿದಾಗ ನಾನಾ ಸಬೂಬು ಹೇಳಿ ಮೂರು ದಿನಗಳ ಕಾಲ ಆಟವಾಡಿಸಿದ್ದನಂತೆ. ಬಳಿಕ ತನಿಖಾಧಿಕಾರಿಗಳ ತಾಕೀತಿನಂತೆ ಕೊನೆಗೂ ಬಿಟ್ ಕಾಯಿನ್ ಖಾತೆ ತೆರೆದಿದ್ದಾನೆ. ಖಾತೆಯಲ್ಲಿ 31 ಬಿಟ್ ಕಾಯಿನ್ ಬದಲಿಗೆ 186 ಬಿಟ್ ಕಾಯಿನ್ ಇರುವುದನ್ನು ಕಂಡ ಪೊಲೀಸರು ಶಾಕ್​ ಆಗಿದ್ದಾರೆ.

ಅಕೌಂಟ್ ಹೋಲ್ಡರ್​​ ಜೈಲಿನಲ್ಲಿದ್ದರೂ ಉಳಿದ ಬಿಟ್ ಕಾಯಿನ್​ಗಳು ಎಲ್ಲಿಂದ ಬಂತು? ಖಾತೆಗೆ (Bitcoin account) ಹಣ ಬಂದಿದ್ದು ಹೇಗೆ? ಬೇರೆ ಯಾರಾದರೂ ಹಾಕಿದ್ದಾರಾ? ಎಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ವೇಳೆ ಶ್ರೀಕೃಷ್ಣನ ಮತ್ತೊಂದು ಅವತಾರ ಬಯಲಾಗಿದ್ದು, ಆತ ತನ್ನ ಖಾತೆ ಬದಲಿಗೆ ಟ್ರೇಡ್ ಎಕ್ಸ್ ಚೇಂಜ್ ಅಕೌಂಟ್ ತೋರಿಸಿ ಯಾಮಾರಿಸಿದ್ದ ಎನ್ನಲಾಗ್ತಿದೆ. ಯಾರದ್ದೋ ಅಕೌಂಟ್​​ ಹ್ಯಾಕ್ ಮಾಡಿ ಅದು ತನ್ನದು ಎಂದಿದ್ದ. ಶ್ರೀಕೃಷ್ಣನ ಹೇಳಿಕೆಗಳ ಬಳಿಕ ಆದ ಪ್ರಕ್ರಿಯೆಗಳ ಕುರಿತಂತೆ ಪೊಲೀಸರು ಕೊರ್ಟ್​ಗೆ ಮಾಹಿತಿ ಸಲ್ಲಿಸಿದ್ದರು.

ಚಿನ್ನದ ಮೊಟ್ಟೆಯಂತಿದ್ದ ಶ್ರೀಕಿ:

ಬಿಟ್ ಕಾಯಿನ್ ವಹಿವಾಟಿನಿಂದ ಶ್ರೀಕಿಯಿಂದ ಲಾಭ ಪಡೆದವರು ಒಂದು ಕಡೆಯಾದರೆ, ನಷ್ಟ ಅನುಭವಿಸಿದವರೂ ಕೂಡ ಹಲವರಿದ್ದಾರೆ. ಪೋಕರ್ ಗೇಮ್, ಪ್ರಿ ಕ್ಲೈಮಿಂಗ್, ವೆಬ್‌ಸೈಟ್, ಸೋಷಿಯಲ್ ಮೀಡಿಯಾ ಆನ್‌ಲೈನ್ ಗೇಮ್​ಗಳನ್ನು ಹ್ಯಾಕ್ ಮಾಡಿ ಸ್ನೇಹಿತರಿಗೆ ಕೋಟಿ ಕೋಟಿ ಹಣ ಗಳಿಸಿಕೊಟ್ಟಿದ್ದ ಶ್ರೀಕಿ ಹಲವರಿಗೆ ಬಿಟ್ ಕಾಯಿನ್ (Bitcoin scam) ಕೊಟ್ಟಿರುವ ಬಗ್ಗೆ ಮಾಹಿತಿಯಿದೆ. ಶ್ರೀಕಿ ಚಾಲಾಕಿತನಕ್ಕೆ ಸೋತಿದ್ದ ಸ್ನೇಹಿತರು ಲಕ್ಷ ಲಕ್ಷ ಹಣವನ್ನ ಆತನ ಮೇಲೆ ಹೂಡಿಕೆ ಮಾಡಿದ್ದರು. ಆದರೆ ಕೊನೆ ಕೊನೆಯಲ್ಲಿ ಆತ ಯಾರಿಗೂ ಲಾಭ ಮಾಡಿಕೊಡಲಾಗದ ಪರಿಸ್ಥಿತಿ ತಲುಪಿದ್ದನಂತೆ.

ಇದನ್ನೂ ಓದಿ: Bitcoin Scam : 'ತನಿಖಾವಧಿಯಲ್ಲಿ ನನ್ನ ಮಗನಿಗೆ ಡ್ರಗ್ಸ್​ ನೀಡಿದ್ದಾರೆ'.. ಪೊಲೀಸರ ವಿರುದ್ಧ 'ಶ್ರೀಕಿ' ತಂದೆ ಆರೋಪ

ಕೆಂಪೇಗೌಡನಗರ ಪೊಲೀಸರಿಂದ ಬಂಧಿತರಾಗಿದ್ದ ಸುನೀಶ್ ಹೆಗಡೆ, ಪ್ರಸಿಧ್​ ಶೆಟ್ಟಿ, ಸುಜಯ್ ರಾಜ್, ಉಮರ್ ನಲಪಾಡ್ ಅವರು ಆರೋಪಿ ಶ್ರೀಕಿಯನ್ನ ಚಿನ್ನದ ಮೊಟ್ಟೆ ಇಡುವ ಕೋಳಿ ಎಂದು ಭಾವಿಸಿದ್ದರು. ಶ್ರೀಕಿಗೆ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ತಿಂಗಳುಗಟ್ಟಲೇ ರೂಮ್, ಊಟ ತಿಂಡಿ ವ್ಯವಸ್ಥೆ ಮಾಡಿಸುತ್ತಿದ್ದರು ಎನ್ನಲಾಗ್ತಿದೆ.

ಐಷಾರಾಮಿ ಲೈಫ್​:

ಒಂದು ದಿನಕ್ಕೆ 30 ಸಾವಿರ ರೂಪಾಯಿ ಖರ್ಚು, ಶ್ರೀಕಿಯ (Bitcoin accused Krishna) ದಿನ ನಿತ್ಯದ ಖರ್ಚುಗಳನ್ನ ನೋಡಿಕೊಳ್ಳುತ್ತಿದ್ದರು. ಸಾಲದ್ದಕ್ಕೆ ಐಷಾರಾಮಿ ಪ್ರವಾಸಕ್ಕೆ ಪ್ರೈವೇಟ್ ಜೆಟ್ ಎಲ್ಲವೂ ಈತನಿಗೆ ಸದಾ ಸಿದ್ಧವಿರುವಂತೆ ನೋಡಿಕೊಂಡಿದ್ದರು. ಆದರೆ ಕೊನೆಯಲ್ಲಿ ಇವನಿಂದ ಏನೂ ಲಾಭವಾಗದಿದ್ದಾಗ ಸ್ನೇಹಿತರೇ ತಿರುಗಿಬಿದ್ದಿದ್ದರು ಎಂಬ ಮಾಹಿತಿ ಸಿಕ್ಕಿದೆ.

ಬಿಟ್ ಕಾಯಿನ್ ವ್ಯವಹಾರದಲ್ಲಿ ಆರಂಭದಲ್ಲಿ ಸಹಚರ ರಾಬಿನ್ ಖಂಡೆವಾಲಾ ಖಾತೆಯಿಂದ ಆತ ಹೇಳಿದವರಿಗೆ 5 ಕೋಟಿ ರೂ. ಹಣ ವರ್ಗಾವಣೆ ಮಾಡಿದ್ದ ಶ್ರೀಕಿ ಕೊನೆ ಕೊನೆಗೆ ಹಿಂದೇಟು ಹಾಕುತ್ತಿದ್ದ. ಯಾವುದೇ ಲಾಭ ತಂದುಕೊಡದ ಶ್ರೀಕಿಗೆ ಸ್ನೇಹಿತರೇ ಗೂಸಾ ಕೊಟ್ಟಿದ್ದರು. ಬಿಟ್‌ ಕಾಯಿನ್​ಗಾಗಿ ಗಲಾಟೆ ಮಾಡಿಕೊಂಡಿದ್ದ ಸುನೀಶ್ ಹೆಗಡೆ ಹಾಗೂ ಶ್ರೀಕಿ, ಸಂಜಯ್‌ ನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಬಡಿದಾಡಿಕೊಂಡಿದ್ದರು ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: ಪುನೀತ್ ಸ್ಫೂರ್ತಿ: ದೇಹದಾನದ ವಾಗ್ದಾನ ಮಾಡಿದ್ರು ಕಾಫಿ ನಾಡಿನ ದಂಪತಿ

Last Updated : Nov 13, 2021, 5:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.