ETV Bharat / state

ಪೊಲೀಸರಿಗೆ ತಲೆನೋವಾಯ್ತ ಒಂಟಿ ಮಹಿಳೆ ಕೊಲೆ ಪ್ರಕರಣ - ಕೊಲೆ ಪ್ರಕರಣ

18 ನಿಮಿಷದಲ್ಲಿ 72ರ ವೃದ್ಧೆಯೋರ್ವರನ್ನ ಉಸಿರುಗಟ್ಟಿಸಿ ಕೊಲೆ ಮಾಡಿ ಆರು ತಿಂಗಳಾದ್ರು ಆರೋಪಿಯನ್ನ ಪತ್ತೆಹಚ್ಚಲು ಸಾಧ್ಯವಾಗದಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಪೊಲೀಸರಿಗೆ ತಲೆನೋವಾಯ್ತ ಒಂಟಿ ಮಹಿಳೆ ಕೊಲೆ ಪ್ರಕರಣ
author img

By

Published : Aug 12, 2019, 7:00 PM IST

ಬೆಂಗಳೂರು: 18 ನಿಮಿಷದಲ್ಲಿ 72ರ ವೃದ್ಧೆಯೋರ್ವರನ್ನ ಸೀರೆಯಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ಕ್ಯಾಮರಾದಲ್ಲಿ ಶಂಕಿತ ಹಂತಕನ ಚಲನವಲನ ಸೆರೆಯಾಗಿದ್ರೂ ಕೂಡ ಆರೋಪಿ ಎಲ್ಲಿದ್ದಾನೆ ಅನ್ನೋ ಮಾಹಿತಿ ಪತ್ತೆಯಾಗದಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಹೌದು, ಕಳೆದ ಫೆಬ್ರವರಿ 5ರಂದು ದುಷ್ಕರ್ಮಿಗಳು ಒಂಟಿ ಮಹಿಳೆ ಸಂತೋಷಿ ದೇವಿ ಎಂಬುವವರನ್ನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಎಸ್.ಆರ್ ನಗರದ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಇದೇ ಏರಿಯಾದ ಅಪಾರ್ಟ್​ಮೆಂಟ್​​ವೊಂದರಲ್ಲಿ ಸಂತೋಷಿ ದೇವಿ ಒಂಟಿಯಾಗಿ ವಾಸವಾಗಿದ್ದರು.

ಇದನ್ನರಿತ ಹಂತಕರು ಕಳೆದ ಆರು ತಿಂಗಳ ಹಿಂದೆ ಆಕೆಯನ್ನು ಕೊಲೆಗೈದು ಮನೆಯಲ್ಲಿದ್ದ ಚಿನ್ನಾಭರಣ ಎಗರಿಸಿ ಎಸ್ಕೇಪ್ ಆಗಿದ್ರು. ಈ ಕೃತ್ಯ ಪಕ್ಕದ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಅದರ ಅನ್ವಯ ಆರೋಪಿ‌‌ಯು ಬೈಕ್​ನಲ್ಲಿ ಬಂದು ಕದ್ದುಮುಚ್ಚಿ ಓಡಾಡಿ‌ ಮುಖಕ್ಕೆ ಕರ್ಚೀಪ್ ಹಾಕ್ಕೊಂಡು ಸಂತೋಷಿ ಅವರ ಮನೆಗೆ ಎಂಟ್ರಿ ಕೊಟ್ಟಿದ್ದ.

ಇದನ್ನಾಧರಿಸಿ ಪೊಲೀಸರು ಶಂಕಿತ ವ್ಯಕ್ತಿಯ ಫೋಟೋವನ್ನು 3 ಸಾವಿರ ಜನರಿಗೆ ವಾಟ್ಸಪ್, ಫೇಸ್​ಬುಕ್​ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರೂ ಹಂತಕನ ಸುಳಿವು ಇನ್ನೂ ಸಿಕ್ಕಿಲ್ಲ. ಹೀಗಾಗಿ ಪೊಲೀಸರಿಗೆ ಈ ಕೇಸ್ ದೊಡ್ಡ ತಲೆನೋವಾಗಿದೆ.

Intro:18 ನಿಮಿಷದಲ್ಲಿ.
72ರ ವೃದ್ದೆಯನ್ನ ಸೀರೆಯಿಂದ ಉಸಿರುಗಟ್ಟಿಸಿ ಕೊಲೆ ಪ್ರಕರಣ
ಪೊಲೀಸರಿಗೆ ತಲೆನೋವಾಯ್ತ ಒಂಟಿ ಮಹಿಳೆ ಕೊಲೆ

ಒಂಟಿ ಮಹಿಳೆ ಸಂತೋಷಿ ದೇವಿ ಎಂಬುವವರನ್ನ ಫೆಬ್ರವರಿ 5 ರಂದು ದುಷ್ಕರ್ಮಿಗಳು ಬರ್ಬರ ಹತ್ಯೆ ಮಾಡಿದ ಪ್ರಕರಣ ಆರು ತಿಂಗಳಾದ್ರು ಆರೋಪಿಗಳನ್ನ ಪತ್ತೆಹಚ್ಚಲು ಪೊಲೀಸರಿಗೆ ತಲೆನೋವಾಗಿದೆ. ಏರಿಯಾದ ಸಿಸಿ ಕ್ಯಾಮಾರದಲ್ಲಿ ಶಂಕಿತ ಹಂತಕನ ಚಲನವಲನ ಸೆರೆಯಾಗಿದ್ರು ಕೂಡ ಆರೋಪಿ ಎಲ್ಲಿದ್ದಾನೆ ಅನ್ನೋ ಮಾಹಿತಿ ಪತ್ತೆಯಾಗಿಲ್ಲ.

ಎಸ್ ಆರ್ ನಗರದ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ ನಲ್ಲಿ ಸಂತೋಷಿ ದೇವಿ ವಾಸ ಮಾಡಿದ್ರು. ಈ ವೇಳೆ ಹಂತಕರು ಬಂದು
ಸೀರೆಯಿಂದ ಉಸಿರುಗಟ್ಟಿಸಿ 18ನಿಮಿಷದಲ್ಲಿ ಕೊಲೆ ಮಾಡಿ ಚಿನ್ನಾಭರಣ ಎಗರಿಸಿ ಎಸ್ಕೇಪ್ ಆಗಿದ್ರು. ಈ ಕೃತ್ಯ ಪಕ್ಕದ ಮನೆಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದ್ದು ಅದರಲ್ಲಿ ಆರೋಪಿ‌‌ಯು ಮಹಾ ಜೆಡ್ ಎಂ ಆರ್ ಬೈಕ್ನಲ್ಲಿ ಬಂದು ಸಿಸಿಟಿವಿ ಬಳಿ ಕದ್ದು ಮುಚ್ಚಿ ಓಡಾಡಿ‌ ಮುಖಕ್ಕೆ ಕರ್ಚೀಪ್ ಹಾಕ್ಕೊಂಡು ಸಂತೋಷಿ ಮನೆಗೆ ಎಂಟ್ರಿ ಕೊಟ್ಟಿದ್ದ.

ನಂತ್ರ ಶಂಕಿತ ವ್ಯಕ್ತಿಯ ಪೋಟೊವನ್ನ 3 ಸಾವಿರ ಜನರಿಗೆ ವಾಟ್ಸಪ್, ಪೇಸ್ಬುಕ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟರು ಹಂತಕನ ಸುಳಿವು ಇನ್ನು ಸಿಕ್ಕಿಲ್ಲ. ಹೀಗಾಗಿ ಖಾಕಿ ಪೊಲೀಸರಿಗೆ ಈ ಕೇಸ್ ದೊಡ್ಡ ತಲೆನೋವಾಗಿದೆ ಎಂದು ತಿಳಿಸಿದ್ದಾರೆ.

Body:KN_BNG_06_MURDER_7204498Conclusion:KN_BNG_06_MURDER_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.