ETV Bharat / state

ಡೀಸೆಲ್‌ ಕಳ್ಳನ ಕಾಲಿಗೆ ಗುಂಡೇಟು - Police Firing on Diesel Thief in Anekal

ಡೀಸೆಲ್‌ ಕದಿಯಲು ಬಂದವನ ಕಾಲಿಗೆ ಪೊಲೀಸರು ಗುಂಡಿನ ದಾಳಿ ಮಾಡಿದ ಘಟನೆ ಬೆಂಗಳೂರು ಹೊರವಲಯದ ಜಿಗಣಿ ಸಮೀಪದಲ್ಲಿ ಇಂದು ಬೆಳಗ್ಗೆ ನಡೆದಿದೆ..

ಕಳ್ಳನ ಕಾಲಿಗೆ ಗುಂಡೇಟು
ಕಳ್ಳನ ಕಾಲಿಗೆ ಗುಂಡೇಟು
author img

By

Published : Mar 13, 2022, 12:40 PM IST

ಆನೇಕಲ್ : ಡೀಸೆಲ್ ಕಳ್ಳನ ಮೇಲೆ ಪೊಲೀಸರು ಗುಂಡು ಹಾರಿಸಿದ ಘಟನೆ ಆನೇಕಲ್‌ ತಾಲೂಕಿನ ಜಿಗಣಿ ಎಂಬಲ್ಲಿ ನಡೆದಿದೆ. ಶ್ರೀನಿವಾಸ್ ಅಲಿಯಾಸ್ ರಾಜು ಕಾಲಿಗೆ ಗುಂಡೇಟು ಬಿದ್ದಿದೆ.

ಬೆಂಗಳೂರಿನ ಜಿಗಣಿ ಠಾಣೆ ಇನ್ಸ್‌ಪೆಕ್ಟರ್ ಸುದರ್ಶನ್ ಅವರು ಜಿಗಣಿಯ ಡಿಎಲ್‌ಎಫ್ ಬಳಿ ಫೈರಿಂಗ್ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಮಲ್ಲೇಶ್, ಎಎಸ್​ಪಿ ಲಕ್ಷ್ಮಿ ಗಣೇಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ರಾತ್ರಿ ವೇಳೆ ರಸ್ತೆ ಬದಿ ನಿಲ್ಲಿಸಿಕೊಂಡು ಗಾಢ ನಿದ್ರೆಯಲ್ಲಿರುವವರ ಲಾರಿಗಳಲ್ಲಿ ಕಳ್ಳರು ಡೀಸೆಲ್ ಕದಿಯುತ್ತಿದ್ದರು. ಈ ಖತರ್ನಾಕ್ ಗ್ಯಾಂಗ್ ಟಾಟಾ ಸುಮೋದಲ್ಲಿ ಬಂದು ಡೀಸೆಲ್ ಕಳ್ಳತನ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಗುಂಡಿನ ದಾಳಿ ಕುರಿತು ಮಾಹಿತಿ ನೀಡಿದ ಎಎಸ್​ಪಿ ಲಕ್ಷ್ಮಿ ಗಣೇಶ್..

ಆನೇಕಲ್‌ನ ಜಿಗಣಿಯ ಕೆಇಬಿ ಸರ್ಕಲ್ ಬಳಿ ಲಾರಿಯೊಂದರಲ್ಲಿ ಡೀಸೆಲ್ ಕದಿಯುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ವೇಳೆ ಡೀಸೆಲ್ ಕಳ್ಳರು ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ.

ಈ ವೇಳೆ ಇನ್ಸ್‌ಪೆಕ್ಟರ್ ಸುದರ್ಶನ್ ಫೈರಿಂಗ್ ಮಾಡಿದ್ದು, ಓರ್ವ ಕಳ್ಳನ ಕಾಲಿಗೆ ಗುಂಡೇಟು ತಗುಲಿದೆ. ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಘಟನೆ ವೇಳೆ ಓರ್ವ ಪೊಲೀಸ್ ಕಾನ್ಸ್​ಟೇಬಲ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಉತ್ತರ ಪ್ರದೇಶ : ಸನ್ಯಾಸಿಯನ್ನು ಹತ್ಯೆಗೈದ ಮತ್ತೋರ್ವ ಸನ್ಯಾಸಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.