ETV Bharat / state

ಕಲಾಸಿಪಾಳ್ಯ ಬಳಿ ಹೈಡ್ರಾಮಾ: ಎರಡೂ ತಂಡದ ವಿರುದ್ಧ ಎಫ್ಐಆರ್​​​​​​​​ ದಾಖಲಿಸಲು ಪೊಲೀಸರ ನಿರ್ಧಾರ

ಕೊರೊನಾ ಭೀತಿಯಿಂದಾಗಿ ಲಾಕ್​ಡೌನ್​ ಜಾರಿಯಲ್ಲಿದ್ದರೂ ಕಲಾಸಿಪಾಳ್ಯದಲ್ಲಿ ಇಂದು ಪ್ರತಿಭಟನೆ ನಡೆಸಿದ ಎರಡು ಗುಂಪಿನ ವಿರುದ್ಧ ಎಫ್​ಐಆರ್ ದಾಖಲಿಸಲು ಪೊಲೀಸರು ನಿರ್ಧಾರ ಮಾಡಿದ್ದಾರೆ.

protest
ಪ್ರತಿಭಟನೆ
author img

By

Published : May 13, 2020, 1:36 PM IST

ಬೆಂಗಳೂರು: ಕಾಲಾಸಿಪಾಳ್ಯ ಬಳಿ ಕಾರ್ಪೋರೇಟರ್ ಪತಿ‌ ಮತ್ತು ಮಗನ ಮೇಲೆ ಸೆಗಣಿ ಎರಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ಕಲಾಸಿಪಾಳ್ಯದಲ್ಲಿ ಫುಲ್ ಹೈಡ್ರಾಮಾ ನಡೆದಿದೆ. ಕಾರ್ಪೊರೇಟರ್ ಪತಿ ಧನರಾಜ್ ವಿರುದ್ಧ ಧಿಕ್ಕಾರ ಕೂಗುತ್ತಾ ಬಂದ ಮತ್ತೊಂದು ಗ್ಯಾಂಗ್ ಧನರಾಜ್ ವಿರುದ್ಧ ಪ್ರತಿಭಟನೆ ನಡೆಸಿದೆ.

ಪ್ರತಿಭಟನೆ ವೇಳೆ 119ನೇ ವಾರ್ಡ್​ನ ಕಾರ್ಪೋರೇಟರ್ ಪತಿ ಧನರಾಜ್, ಕಲಾಸಿಪಾಳ್ಯ, ಕೆ ಆರ್ ಮಾರ್ಕೆಟ್ ಬೀದಿ ಬದಿ ವ್ಯಾಪಾರಿಗಳ ಬದಕು ದುಃಸ್ಥಿತಿಯಲ್ಲಿದ್ದರೂ, ಪ್ರತಿ ಅಂಗಡಿಯಿಂದ 200 ರಿಂದ 300 ಬಡ್ಡಿಗೆ ಹಣವನ್ನು ಬಲವಂತವಾಗಿ ತೆಗೆದುಕೊಳ್ಳುತ್ತಿದ್ದಾರೆ‌. ನಿತ್ಯ ಹಫ್ತಾದಂತೆ ವಸೂಲಿ ಮಾಡುತ್ತಿದ್ದಾರೆ. ಹೀಗಾಗಿ ನಮಗೆ ಕಿರುಕುಳ ಉಂಟಾಗಿದೆ. ಇದನ್ನ ತಡೆಯದಿದ್ದಲ್ಲಿ ಸಾಮೂಹಿಕವಾಗಿ ಆತ್ಮಹತ್ಯೆ ‌ಮಾಡಿಕೊಳ್ಳುವುದಾಗಿ ಪ್ರತಿಭಟನಾಕಾರರು ಬೆದರಿಕೆ ಹಾಕಿದ್ದಾರೆ.

119ನೇ ವಾರ್ಡ್​ನ ಕಾರ್ಪೋರೇಟರ್ ಪತಿ ವಿರುದ್ಧ ಪ್ರತಿಭಟನೆ

ಅಲ್ಲದೇ ಈ ಹಿಂದೆ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ಸ್ಥಳಕ್ಕೆ ಪೊಲೀಸ್ ಆಯುಕ್ತರು ಬರುವವರೆಗೂ ಪ್ರತಿಭಟನೆ ನಿಲ್ಲಿಸಲ್ಲ ಎಂದಿದ್ದಾರೆ‌. ಸ್ಥಳದಲ್ಲಿ ಸ್ವಲ್ಪ ಮಟ್ಟಿಗೆ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಪರಿಸ್ಥಿತಿ ನಿಭಾಯಿಸಲು ಹರಸಾಹಸಪಟ್ಟಿದ್ದಾರೆ.

ಮತ್ತೊಂದೆಡೆ ಕಾರ್ಪೋರೇಟರ್ ಪತಿ ಧನರಾಜ್ ಅಂಡ್ ಗ್ಯಾಂಗ್ ಕೂಡ ಪ್ರತಿಭಟನೆ ನಡೆಸಿದೆ. ನಮಗೆ ನ್ಯಾಯ ಸಿಗುವವರೆಗೂ ಹೋಗಲ್ಲ ಎಂದು ಎರಡೂ ಗ್ಯಾಂಗ್ ಕಡೆಯವರು ಪ್ರತಿಭಟನೆ ನಡೆಸಿದಾಗ ಎರಡೂ ಕಡೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಡ್ರೋಣ್ ಮೂಲಕ ವಿಡಿಯೋ ಸೆರೆ ಹಿಡಿದು ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ.

ಹಾಗೆ ಕಾರ್ಪೋರೇಟರ್ ಪತಿ ಧನರಾಜ್ ಆಂಡ್ ಗ್ಯಾಂಗ್ ಹಾಗೂ ಧನರಾಜ್ ವಿರುದ್ಧ ಪ್ರತಿಭಟನೆ ನಡೆಸಿದವರ ಮೇಲೆ NDMA act ಅಡಿ ಎಫ್ ಐಆರ್ ದಾಖಲಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಸದ್ಯ ಲಾಕ್​​​​​ಡೌನ್​ ಇದ್ದು ಸಿಟಿಎ ಸೆಕ್ಷನ್ ಜಾರಿಯಲ್ಲಿದ್ದರೂ ಪ್ರತಿಭಟನೆ ನಡೆಸಿರುವ ಹಿನ್ನೆಲೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಹಿನ್ನೆಲೆ: ಕಲಾಸಿಪಾಳ್ಯದ ಬಳಿಯ ವಾರ್ಡ್ ಕಾರ್ಪೊರೇಟರ್ ಪ್ರತಿಭಾ ಅವರ ಪತಿ ಧನರಾಜ್ ಇಂದು ಕಲಾಸಿಪಾಳ್ಯದಲ್ಲಿ ಅಕ್ರಮವಾಗಿ ಅಂಗಡಿಗಳನ್ನ ತೆರವು ಮಾಡಲು ಮುಂದಾದಾಗ ದುಷ್ಕರ್ಮಿಗಳು ಸಗಣಿ ಎರಚಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.