ಬೆಂಗಳೂರು: ಗಣರಾಜ್ಯೋತ್ಸವ ಭದ್ರತೆ ಕುರಿತಂತೆ ಪೊಲೀಸ್ ಕಮೀಷನರ್ ಕಮಲ್ ಪಂತ್ ಅವರು ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.
ಜ.26 ರಲ್ಲಿ ಆಚರಿಸುವ ಗಣರಾಜ್ಯೋತ್ಸವದ ಮೇಲೆ ಉಗ್ರರ ಕರಿನೆರಳಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ ರಾಮನಗರದ ಶಂಕಿತನೊಬ್ಬ ನಾಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಸಭೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಓದಿ: ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಂಡರೇ ಪ್ರತ್ಯುತ್ತರಕ್ಕೆ ನಾವೂ ಸಿದ್ಧ: ಠಾಕ್ರೆಗೆ ಸಚಿವ ಜಾರಕಿಹೊಳಿ ಟಾಂಗ್
ಒಂದು ಕಡೆ ಗಣರಾಜ್ಯೋತ್ಸವ, ಮತ್ತೊಂದು ಕಡೆ ಶಂಕಿತ ನಾಪತ್ತೆಯಾಗಿದ್ದಾನೆ. ಹೀಗಾಗಿ ನಗರದ ಎಲ್ಲಾ ಕಡೆ ತೀವ್ರ ಕಚ್ಚೆಟ್ಟರ ವಹಿಸಬೇಕು ಎಂದು ತಿಳಿಸಲು ಸಭೆ ಕರೆಯಲಾಗಿತ್ತು. ಸಭೆಯಲ್ಲಿ ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರು ಹಾಗೂ ಎಲ್ಲಾ ಡಿಸಿಪಿಗಳು ಭಾಗವಹಿಸಿದ್ದರು.