ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ಹೆಚ್ಚಾಗ್ತಿರುವ ಕಾರಣ ಸೀಲ್ ಡೌನ್ ಆದ ಐದು ಪ್ರದೇಶಗಳಲ್ಲಿ ಖುದ್ದಾಗಿ ಹೆಚ್ಚುವರಿ ಆಯುಕ್ತ ಸೌಮೇಂದ್ರ ಮುಖರ್ಜಿ ಹಾಗೂ ಮೂವರು ಡಿಸಿಪಿಗಳು ಭದ್ರತೆ ಕೈಗೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಹಾಗೆಯೇ ಕೊರೊನಾ ಸೋಂಕು ದಿನೇ ದಿನೆ ಪೊಲೀಸರಲ್ಲಿ ಹಾಗೂ ಆರೋಪಿಗಳಲ್ಲಿ ಹೆಚ್ಚಾಗ್ತಿದ್ದು, ಸದ್ಯ ಕೊರೊನಾ ವಾರ್ ರೂಂ ಅಂಕಿ-ಅಂಶಗಳ ಪ್ರಕಾರ ಕೊರೊನಾ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಾಗುತ್ತಿದೆ. ಸದ್ಯ ಕೆಳ ಹಂತದ ಪೊಲೀಸ್ ಸಿಬ್ಬಂದಿ ಆರೋಗ್ಯದ ಬಗ್ಗೆ ಗಮನಹರಿಸಬೇಕು. ಕೆಲವು ಪೊಲೀಸ್ ಠಾಣೆಗಳ ಪೊಲೀಸ್ ಸಿಬ್ಬಂದಿ ಆರೋಪಿಗಳನ್ನ ಕರೆ ತರುವಾಗ, ಹಾಗೇ ಸೀಲ್ ಡೌನ್ ಏರಿಯಾದಲ್ಲಿ ಓಡಾಟ ಮಾಡುವಾಗ ಮಾಸ್ಕ್, ಗ್ಲೌಸ್ ಹಾಕದೆ ಕೆಲಸ ಮಾಡ್ತಿರುವ ವಿಚಾರ ತಿಳಿದು ಬಂದಿದೆ. ಆದರೆ ಪ್ರತಿ ಸಿಬ್ಬಂದಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದರು.
ಕೊರೊನಾ ಸೋಂಕು ಪೊಲೀಸರಲ್ಲಿ ಪತ್ತೆಯಾದ್ರೂ ಸದ್ಯ ಯಾರೂ ಭಯ ಪಡದೆ ಕೆಲಸ ಮಾಡ್ತಿದ್ದಾರೆ. ಯಾರೂ ಭಯ ಪಡುವ ಅಗತ್ಯವಿಲ್ಲ. ಸೀಲ್ ಡೌನ್ ಏರಿಯಾಗಳಾದ ಸಿದ್ದಾಪುರ, ವಿ.ವಿ.ಪುರಂ, ಚಿಕ್ಕಪೇಟೆ, ಕೆ.ಆರ್ ಮಾರುಕಟ್ಟೆ, ಕಲಾಸಿಪಾಳ್ಯಕ್ಕೆ ನಾನು ಭೇಟಿ ನೀಡುತ್ತೇನೆ. ಯಾರೂ ಕೆಲಸ ನಿರ್ವಹಿಸುವ ವೇಳೆ ಹೆದರುವ ಅವಶ್ಯಕತೆಯಿಲ್ಲ. ಮುಂಜಾಗ್ರತಾ ಕ್ರಮ ತೆಗೆದುಕೊಂಡು ಕೆಲಸ ಮಾಡಿ. ಕೊರೊನಾ ಇದ್ರೂ ಪೊಲೀಸರು ನಾವು ಕುಗ್ಗಲ್ಲ. ನಾಳೆ ನಾನು ಸೀಲ್ ಡೌನ್ ಏರಿಯಾಗಳಿಗೆ ತೆರಳಿ ಭದ್ರತೆ ಪರಿಶೀಲಿಸುತ್ತೇನೆ ಎಂದಿದ್ದಾರೆ.