ಬೆಂಗಳೂರು: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕರವೇ ಬಣದ ಪ್ರವೀಣ್ ಶೆಟ್ಟಿ ಅವರಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಉತ್ತರ ವಿಭಾಗ ಪೊಲೀಸರು ಗೃಹ ಬಂಧನ ವಿಧಿಸಿದ್ದರು.
ತದನಂತರ ಪೊಲೀಸರ ಮುಂದೆ ಪ್ರವೀಣ್ ಶೆಟ್ಟಿ ಹೇಳಿಕೆ ಕೊಟ್ಟಿದ್ದು, ನನಗೂ ಕನ್ನಡ ಪರ ಸಂಘಟನೆಯ ಹೋರಾಟಕ್ಕೂ ಸಂಬಂಧ ಇಲ್ಲ. ನಾನು ಈ ಬಂದ್ನಲ್ಲಿ ಭಾಗಿಯಾಗಿಲ್ಲ ಎಂದು ಹೇಳಿಕೆ ಕೊಟ್ಟ ಮೇಲೆ ಗೃಹ ಬಂಧನದಿಂದ ಬಿಡುಗಡೆ ಮಾಡಿದ್ದಾರೆ.
ಕರ್ನಾಟಕ ಶ್ರಮಜೀವಿ ಕಾರ್ಮಿಕ ವೇದಿಕೆಯ ರಾಜ್ಯಾಧ್ಯಕ್ಷ ಸಂಪತ್ ಕುಮಾರ್, ಸುವರ್ಣ ಕರ್ನಾಟಕ ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷ ಮಹಾದೇವಪುರದ ರಾಘವೇಂದ್ರ ಗೌಡರನ್ನು ವಶಕ್ಕೆ ಪಡೆದಿದ್ದರು.