ETV Bharat / state

ಲಾಕಪ್ ಡೆತ್ ಊಹಾಪೋಹಕ್ಕೆ ತೆರೆ.. ವ್ಯಕ್ತಿ ಸಾವಿಗೆ ಕಾರಣ ಬಹಿರಂಗ, ಮೂವರ ಬಂಧನ - ಲಾಕಪ್ ಡೆತ್ ಊಹಾಪೋಹಕ್ಕೆ ತೆರೆ

ಜಾರ್ಖಂಡ್ ಮೂಲದ ಮೃತ ಸಂಜಯ್ ಮೃತಪಟ್ಟಿದ್ದ ಅವರ ಸಾವಿಗೆ ಪೊಲೀಸರೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದರು. ಪೊಲೀಸರು ಸಿಸಿಟಿವಿ ದೃಶ್ಯವನ್ನಾಧರಿಸಿ ಸಂಜಯ್ ಮೇಲೆ ಹಲ್ಲೆ ಮಾಡಿದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

lockup-death-speculation-by-the-police
ಲಾಕಪ್ ಡೆತ್ ಊಹಾಪೋಹಕ್ಕೆ ತೆರೆ ಎಳೆದ ಪೊಲೀಸರು
author img

By

Published : Oct 8, 2022, 6:43 AM IST

ಬೆಂಗಳೂರು: ಮಕ್ಕಳ‌ ಕಳ್ಳ ಎಂದು ಭಾವಿಸಿ ಸಾರ್ವಜನಿಕರಿಂದ ಥಳಿತಕ್ಕೊಳಗಾಗಿದ್ದ ಜಾರ್ಖಂಡ್ ಮೂಲದ ವ್ಯಕ್ತಿಯ ಅಸಹಜ ಸಾವು ಪ್ರಕರಣಕ್ಕೆ ತಿರುವು ಸಿಕ್ಕಿದ್ದು ತನಿಖೆ ನಡೆಸಿದಾಗ ಹಲ್ಲೆಯಿಂದ ಸಾವನ್ನಪ್ಪಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿ ಮೂವರು ಆರೋಪಿಗಳನ್ನು ಕೆ.ಆರ್. ಪುರಂ ಪೊಲೀಸರು ಬಂಧಿಸಿದ್ದಾರೆ.

ವಿಜಿನಾಪುರ ನಿವಾಸಿಯಾಗಿರುವ ಪಾರ್ಥಿಬನ್, ಫಯಾಜ್ ಪಾಷ ಹಾಗೂ ಸಯ್ಯದ್ ಖಾಜಾ ಸೇರಿ ಮೂವರನ್ನು ಬಂಧಿಸಲಾಗಿದ್ದು, ಇನ್ನುಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾರ್ಖಂಡ್ ಮೂಲದ ಮೃತ ಸಂಜಯ್ ಕಳೆದ ಎರಡು ವರ್ಷಗಳಿಂದ ರಾಮಮೂರ್ತಿನಗರದಲ್ಲಿ ವಾಸವಾಗಿದ್ದು ಕೆ.ಆರ್. ಪುರಂ ದೇವಸಂದ್ರ ಬಳಿ ಮೇಸ್ತ್ರಿ ಶಿವಣ್ಣ ಎಂಬುವರ ಬಳಿ ಗಾರೆ ಕೆಲಸ ಮಾಡಿಕೊಂಡಿದ್ದ. ಕಳೆದ ತಿಂಗಳು 23 ರಂದು ರಾಮಮೂರ್ತಿನಗರದಲ್ಲಿ ಅನುಮಾನಸ್ಪಾದವಾಗಿ ಓಡಾಡುತ್ತಿರುವುದಾಗಿ‌ ಸಂಜಯ್​ನ ವರ್ತನೆ ಕಂಡು ಮಕ್ಕಳ ಕಳ್ಳ ಎಂದು ಭಾವಿಸಿ ಸಾರ್ವಜನಿಕರು ಹಲ್ಲೆ ನಡೆಸಿದ್ದರು.‌ ಬಳಿಕ 112ಗೆ ಕರೆ‌ಮಾಡಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಸ್ಥಳಕ್ಕೆ ಆಗಮಿಸಿದ ಹೊಯಳ್ಸ ಸಿಬ್ಬಂದಿ ಸಂಜಯ್ ನನ್ನ ಠಾಣೆಗೆ‌ ಕರೆದೊಯ್ದಿದ್ದರು. ಠಾಣೆಯ ಪ್ರವೇಶದ್ವಾರದಲ್ಲೇ ಕೆಲಕ್ಷಣ‌ ವಿಚಾರಣೆ‌ ನಡೆಸಿದ ಪೊಲೀಸರು ತಮ್ಮ ಮೇಲೆ ಹಲ್ಲೆ ಮಾಡಿದವರ ವಿರುದ್ಧ ದೂರು ನೀಡಲು ನಿರಾಕರಿಸಿ ಸಂಜಯ್ ತೆರಳಿದ್ದ. ಈತನ ಚಲನವಲನ ಠಾಣೆಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಲಾಕಪ್ ಡೆತ್ ಊಹಾಪೋಹಕ್ಕೆ ತೆರೆ ಎಳೆದ ಪೊಲೀಸರು

ಮಾರನೇ ದಿನ ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಐಟಿಐ ಕಾಲೋನಿ ಬಳಿ ಶವವಾಗಿ ಸಂಜಯ್ ಪತ್ತೆಯಾಗಿದ್ದ. ಈ ಬೆಳವಣಿಗೆ‌‌ ಕಂಡು‌‌ ಪೊಲೀಸರೇ ಲಾಕಪ್‌ ಡೆತ್ ಮಾಡಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದರು. ಇದು ಸಾಕಷ್ಟು ಅನುಮಾನಗಳಿಗೆ ಎಡೆ‌ಮಾಡಿಕೊಟ್ಟಿತ್ತು. ಮತ್ತೊಂದೆಡೆ ಸೆ.24 ರಂದು ಅಪರಿತನ ಶವ ಪತ್ತೆ ಹಿನ್ನೆಲೆಯಲ್ಲಿ ಅಸಹಜ ಸಾವು ಎಂದು‌ ಪ್ರಕರಣ ದಾಖಲಿಸಿಕೊಂಡಿದ್ದ ಕೆ.ಆರ್‌.ಪುರಂ ಪೊಲೀಸರು ತನಿಖೆ ನಡೆಸಿದಾಗ ‌ಮೃತನ ವಿವರ ಕಲೆ‌ ಹಾಕಿದ್ದಾರೆ.

ಜಾರ್ಖಂಡ್​ನಲ್ಲಿರುವ ಪತ್ನಿಗೆ ಗಂಡ ಮೃತಪಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದರು.‌ ಆದರೆ ಪತ್ನಿಯು ಬೆಂಗಳೂರಿಗೆ ಬರಲು ಸಾಧ್ಯವಿಲ್ಲ. ಮುಂದಿನ ಕಾನೂನು ಕ್ರಮ‌‌ ಜರುಗಿಸಿ ಎಂದು ಲಿಖಿತ ರೂಪದಲ್ಲಿ ಪತ್ರ ಬರೆದ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ 10 ದಿನಗಳ ಬಳಿಕ ಪೊಲೀಸರೇ ಅಂತ್ಯ ಸಂಸ್ಕಾರ ನೇರವೇರಿಸಿದ್ದರು.

ಮರಣೋತ್ತರ ಪರೀಕ್ಷೆಯಲ್ಲಿ ತೀವ್ರ ಗಾಯದಿಂದ ಸಂಜಯ್ ಮೃತಪಟ್ಟಿರುವ ಬಗ್ಗೆ ವರದಿ ಹಿನ್ನೆಲೆಯಲ್ಲಿ ತನಿಖೆ ಕೈಗೆತ್ತಿಕೊಂಡ ಪೊಲೀಸರು ಹಲ್ಲೆ ನಡೆದ ಜಾಗದಲ್ಲಿ ಸೆರೆಯಾಗಿದ್ದ ಸಿಸಿಟಿವಿ ದೃಶ್ಯಾವಳಿ ವಶಕ್ಕೆ‌ ಪಡೆದು ಪರಿಶೀಲಿಸಿದ್ದಾರೆ. ಅದರಂತೆ ಹಲ್ಲೆ ನಡೆಸಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ‌ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ‌ ಗಿರೀಶ್ ತಿಳಿಸಿದ್ದಾರೆ.

ರಾಮಮೂರ್ತಿನಗರ ಪೊಲೀಸರ‌ ಮೇಲೆ ಲಾಕಪ್ ಡೆತ್ ಆರೋಪ ತಳ್ಳಿ ಹಾಕಿರುವ ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾಶಂಕರ್ ಗುಳೇದ್, ಕಳೆದ‌ ತಿಂಗಳು 23 ರಂದು ಸಾರ್ವಜನಿಕರು ಕರೆ‌ ಮಾಡಿ ದೂರು ಹಿನ್ನೆಲೆಯಲ್ಲಿ ಸ್ಥಳೀಯರಿಂದ ಹಲ್ಲೆಗೊಳಗಾಗಿದ್ದ ಸಂಜಯ್ ನನ್ನ ಪೊಲೀಸ್ ಠಾಣೆಗೆ ಹೊಯ್ಸಳ ಸಿಬ್ಬಂದಿ ಕರೆತಂದಿದ್ದರು. ಈ ವೇಳೆ‌ ಹಲ್ಲೆಕೋರರ ವಿರುದ್ಧ ದೂರು ನೀಡದೆ ಊರಿಗೆ ತೆರಳುವುದಾಗಿ ಹೇಳಿದ್ದ. ಹೀಗಾಗಿ ಆತನನ್ನು ಬಿಟ್ಟುಕಳುಹಿಸಲಾಗಿತ್ತು. ಆತ ಠಾಣೆಗೆ ಬಂದು ಹೋಗಿರುವ ಸಿಸಿಟಿವಿ ದೃಶ್ಯಾವಳಿ ಸೆರೆಯಾಗಿದೆ. ಪೊಲೀಸರ ಮೇಲೆ ಬಂದಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು‌ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಚರಂಡಿ ವಿಷಯವಾಗಿ ಜಗಳ: ಸಿನಿಮೀಯ ಶೈಲಿಯಲ್ಲಿ ಮಹಿಳೆಯ ಮೇಲೆ ಕತ್ತಿಯಿಂದ ದಾಳಿ.. ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.