ETV Bharat / state

ಚುನಾವಣಾ ಅಕ್ರಮ : ರಾಜ್ಯದಲ್ಲಿ 22 ಕೋಟಿ ರೂ. ನಗದು, 23 ಕೆಜಿ ಚಿನ್ನ ವಶಕ್ಕೆ - C Vigil Application

ಚುನಾವಣೆ ಘೋಷಣೆ ಆದಾಗಿನಿಂದ ರಾಜ್ಯದಲ್ಲಿ ಕುರುಡು ಕಾಂಚಾಣ ಸದ್ದು ಮಾಡುತ್ತಿದೆ. ಎಲ್ಲಾ ಕಡೆ ಜಾಗೃತ ದಳದವರು ಹದ್ದಿನ ಕಣ್ಣಿಟ್ಟಿದ್ದು, ಕೋಟ್ಯಂತರ ನಗದು, ಮತ್ತು ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಅದರ ಮಾಹಿತಿ ಇಲ್ಲಿದೆ..

ನಗದು ಹಾಗೂ ಚಿನ್ನ ವಶ
ನಗದು ಹಾಗೂ ಚಿನ್ನ ವಶ
author img

By

Published : Apr 5, 2023, 6:21 PM IST

ಬೆಂಗಳೂರು : ಚುನಾವಣೆಯ ವಿವಿಧ ಜಾಗೃತ ದಳಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಮಾದರಿ ನೀತಿ ಸಂಹಿತೆ, ಚುನಾವಣಾ ವೆಚ್ಚ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲಂಘಿಸಿರುವ ಕುರಿತು ಮಾರ್ಚ್ 29 ರಿಂದ ಇಲ್ಲಿಯವರೆಗೆ ನಗದು, ಚಿನ್ನಾಭರಣ ಸೇರಿದಂತೆ ಈ ಕೆಳಗಿನ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಸೇರಿ ಒಟ್ಟು 22,75,42,568 ರೂ. ನಗದು ವಶಪಡಿಸಿಕೊಂಡಿವೆ. ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್‌ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಸೇರಿ 24,45,85,370 ಮೌಲ್ಯದ 3,61,235 ಲೀಟರ್ ಮದ್ಯ ವಶಪಡಿಸಿಕೊಂಡಿವೆ. ಅದೇ ರೀತಿ 56,03,810 ಮೌಲ್ಯದ 101.34 ಕೆ.ಜಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿವೆ.

ವಿವಿಧ ಮಾದರಿಯ ವಾಹನಗಳ ವಶ : ಅಬಕಾರಿ ಇಲಾಖೆಯು 687 ಗಂಭೀರ ಪ್ರಕರಣಗಳನ್ನು ಹಾಗೂ ಮದ್ಯದ ಪರವಾನಿಗೆ ಉಲ್ಲಂಘಿಸಿದ 427 ಪ್ರಕರಣಗಳು, 16 ಎನ್‌ಡಿಪಿಎಸ್ ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ 15 (ಎ) ಅನ್ವಯ ಒಟ್ಟು 1,560 ಪ್ರಕರಣಗಳನ್ನು ದಾಖಲಿಸಿವೆ ಮತ್ತು 357 ವಿವಿಧ ಮಾದರಿಯ ವಾಹನಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು ಸೇರಿ 8,71,97,033 ರೂ. ಮೌಲ್ಯದ 23.088 ಕೆಜಿ ಚಿನ್ನ, 84,27,980 ರೂ. ಮೌಲ್ಯದ 121.628 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಂಡಿವೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಅದೇ ರೀತಿ 12,02,60,706 ರೂ. ಮೌಲ್ಯದ ಉಚಿತ ಕೊಡುಗೆ ಉಡುಗೊರೆ ವಸ್ತುಗಳನ್ನು ವಶಪಡಿಸಿಕೊಂಡಿವೆ. ನಗದು, ಮದ್ಯ, ಮಾದಕ ದ್ರವ್ಯ, ಅಮೂಲ್ಯ ಲೋಹ ಮತ್ತು ಉಡುಗೊರೆ ವಸ್ತುಗಳನ್ನು ವಶಪಡಿಸಿಕೊಂಡಿರುವ ವಿಚಕ್ಷಣ ದಳ, ಸ್ಥಿರ ಕಣ್ಣಾವಲು ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು 526 ಪ್ರಥಮ ತನಿಖಾ ವರದಿ (FIR) ದಾಖಲಿಸಿದ್ದಾರೆ.

ಚುನಾವಣೆ ಘೋಷಣೆಯಾದ ದಿನಾಂಕದಿಂದ ಇಲ್ಲಿಯವರೆಗೆ ಒಟ್ಟಾರೆ 43,052 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ. 10 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 11 ಶಸ್ತ್ರಾಸ್ತ್ರಗಳ ಪರವಾನಿಗೆ ರದ್ದುಪಡಿಸಲಾಗಿದೆ. ಸಿಆ‌ರ್​ಪಿಸಿ ಕಾಯ್ದೆಯಡಿ 1,902 ಪ್ರಕರಣಗಳನ್ನು ದಾಖಲಿಸಲಾಗಿದೆ. ಅವುಗಳಲ್ಲಿ 2,735 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. 4,087 ಜಾಮೀನು ರಹಿತ ವಾರೆಂಟ್‌ಗಳನ್ನು ಜಾರಿಗೊಳಿಸಲಾಗಿದೆ. ಎಲ್ಲಾ ತಂಡಗಳು ಒಟ್ಟು ರೂ. 69,36,17,467 ಮೌಲ್ಯದ ನಗದು ಸೇರಿದಂತೆ ಮದ್ಯ, ಮಾದಕ ದ್ರವ್ಯ ಇತ್ಯಾದಿ ವಸ್ತುಗಳನ್ನು ವಶಪಡಿಸಿಕೊಂಡಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ವಿಶೇಷ ವರದಿ : ವಿಚಕ್ಷಣ ದಳವು ಬೆಳಗಾವಿ ಜಿಲ್ಲೆಯ ಬೆಳಗಾವಿ ಗ್ರಾಮಾಂತರ ವಿಧಾನಸಭೆ ಕ್ಷೇತ್ರದಲ್ಲಿ 2,00,00,000 ರೂ.ಗಳ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಅಧಿಕಾರಿಗಳು ತುಮಕೂರು ಜಿಲ್ಲೆಯ ತುಮಕೂರು ಗ್ರಾಮಾಂತರ ವಿಧಾನಸಭೆ ಕ್ಷೇತ್ರದಲ್ಲಿ 56,00,000 ರೂ.ಗಳ ನಗದನ್ನು ವಶಪಡಿಸಿಕೊಂಡಿದ್ದಾರೆ. ಸ್ಥಿರ ಕಣ್ಗಾವಲು ತಂಡವು ದಾವಣಗೆರೆ ಜಿಲ್ಲೆಯ ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ 32,32,008 ರೂ.ಗಳ ನಗದನ್ನು ವಶಪಡಿಸಿಕೊಂಡಿದೆ.

ಆದಾಯ ತೆರಿಗೆ ಇಲಾಖೆಯು ಬೀದರ್ ಜಿಲ್ಲೆಯ ಹುಮನಾಬಾದ್ ವಿಧಾನಸಭೆ ಕ್ಷೇತ್ರದಲ್ಲಿ 1,72,48,400 ಗಳ ನಗದನ್ನು ವಶಪಡಿಸಿಕೊಂಡಿದೆ. ಅಬಕಾರಿ ಇಲಾಖೆಯು 2,07,18,347 ಮೌಲ್ಯದ 32,946 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ವಿಧಾನಸಭೆ ಕ್ಷೇತ್ರದಲ್ಲಿ ಪೊಲೀಸ್ ಅಧಿಕಾರಿಗಳು 21,25,300 ರೂ. ಮೌಲ್ಯದ 395.70 ಗ್ರಾಂ ಬಂಗಾರ, 19,08,420 ರೂ. ಮೌಲ್ಯದ 20.065 ಕೆ.ಜಿ ಬೆಳ್ಳಿಯನ್ನು ವಶಪಡಿಸಿಕೊಂಡಿವೆ.

ಸಾರ್ವಜನಿಕ ಕುಂದುಕೊರತೆಗಳ ಇತ್ಯರ್ಥ: ಮತದಾರರ ಸಹಾಯವಾಣಿ ಮೂಲಕ ಸ್ವೀಕರಿಸಲಾದ 1,655 ಕರೆಗಳಲ್ಲಿ 1,525 ಸಾರ್ವಜನಿಕರು ಮಾಹಿತಿ ಕೋರಿದ್ದಾರೆ. 3 ಜನರು ಪ್ರತಿಕ್ರಿಯೆ (ಫೀಡ್‌ಬ್ಯಾಕ್) ನೀಡಿದ್ದಾರೆ. 6 ಜನರು ಸಲಹೆಗಳನ್ನು ನೀಡಿದ್ದಾರೆ ಮತ್ತು 22 ಜನರು ದೂರುಗಳನ್ನು ದಾಖಲಿಸಿದ್ದಾರೆ. ಸ್ವೀಕರಿಸಿದ ಎಲ್ಲಾ 1,655 ಕರೆಗಳ ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. ಇದಲ್ಲದೇ ಎನ್‌ಜಿರ್‌ಎಸ್‌ ಪೋರ್ಟ್‌ನಲ್ಲಿ 1,870 ದೂರುಗಳನ್ನು ನಾಗರಿಕರು ಇತ್ಯರ್ಥಪಡಿಸಲಾಗಿದೆ. ಇವುಗಳಲ್ಲಿ 1,621 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ.

ಸಿ-ವಿಜಿಲ್ : ಸಿ ವಿಜಿಲ್ ಅಪ್ಲಿಕೇಷನ್ ಮೂಲಕ 640 ದೂರು ಸ್ವೀಕರಿಸಲಾಗಿದ್ದು, ಅವುಗಳಲ್ಲಿ 296 ಪರವಾನಿಗೆ ಇಲ್ಲದ ಪೋಸ್ಟರ್/ಬ್ಯಾನರ್ ಅಂಟಿಸಿದ ಪ್ರಕರಣಗಳು, 18 ಹಣ ಹಂಚಿಕೆ ಪ್ರಕರಣಗಳು, 03 ಪಾವತಿಸಿದ ಸುದ್ದಿ ಪ್ರಕರಣಗಳು, 14 ಉಡುಗೊರೆ ಕೂಪನ್ ಹಂಚಿಕೆ ಪ್ರಕರಣಗಳು, ಮದ್ಯ ಹಂಚಿಕೆ 9. ಆಸ್ತಿ ಹಾನಿಗೊಳಿಸಿದ 05, ಪರವಾನಿಗೆ ಇಲ್ಲದ ವಾಹನ ಅಥವಾ ಬೆಂಗಾವಲು ಪಡೆ 14 ಪ್ರಕರಣಗಳು ಸೇರಿದಂತೆ ಈ ಪೈಕಿ 362 ದೂರುಗಳು ನಿಜವೆಂದು ಕಂಡುಬಂದಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

ವಿವಿಧ ಮಾಧ್ಯಮಗಳ ಮೂಲಕ ದೂರುಗಳನ್ನು ಸ್ವೀಕರಿಸಲಾಗಿದ್ದು, ಇಮೇಲ್ 79 ಮತ್ತು ಪತ್ರಗಳ ಮೂಲಕ 75, ಸುದ್ದಿಪತ್ರಿಕೆಗಳಿಂದ 9, ಟಿ.ವಿ ಚಾನಲ್‌ಗಳಿಂದ 21 ಮತ್ತು ಸಾಮಾಜಿಕ ಜಾಲತಾಣಗಳಿಂದ 30 ಸೇರಿದಂತೆ ಒಟ್ಟು 214 ದೂರುಗಳು ಬಂದಿದ್ದು, 98 ದೂರುಗಳನ್ನು ವಿಲೇವಾರಿ ಮಾಡಲಾಗಿದೆ.

307 ಅರ್ಜಿಗಳನ್ನು ತಿರಸ್ಕರಿಸಲಾಗಿದೆ : ಸುವಿಧಾ ಅಡಿಯಲ್ಲಿ ವಿವಿಧ ಅನುಮತಿಯನ್ನು ಕೋರಿ ಇದುವರೆಗೆ ಒಟ್ಟು 1,091 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅದರಲ್ಲಿ 547 ಅರ್ಜಿಗಳಿಗೆ ಅನುಮತಿ ನೀಡಲಾಗಿದ್ದು, 307 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಅವುಗಳಲ್ಲಿ 10 ಅರ್ಜಿಗಳು ಪ್ರಗತಿಯಲ್ಲಿವೆ. 212 ಬಾಕಿ ಉಳಿದಿದ್ದು, 15 ಅರ್ಜಿಗಳು ರದ್ದಾಗಿವೆ.

ಇದನ್ನೂ ಓದಿ : ಚುನಾವಣೆ ವೇಳೆ ಅಕ್ರಮ ನಿಯಂತ್ರಣಕ್ಕಾಗಿ ಸುವಿಧಾ, ಸಿ - ವಿಸಿಲ್ ತಂತ್ರಾಂಶ ಬಳಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.