ETV Bharat / state

ನಿಮ್ಮ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಪ್ರತಿಭಟನೆ ಕೈಬಿಡಿ: ಡಿಸಿಎಂ ಸವದಿ - bangalore protest updates

ಸದ್ಯ ಕೋವಿಡ್​​ನಿಂದ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಆರ್ಥಿಕ ಸಂಕಷ್ಟ ಎದುರಾಗಿರುವ ಇಂತಹ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳಬೇಕಿದ್ದು, ಈ ಕೂಡಲೇ ಎಲ್ಲವೂ ಸಾಧ್ಯವಿಲ್ಲ. ನಿಮ್ಮ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಪ್ರತಿಭಟನೆ ಕೈಬಿಡಿ ಎಂದು ಮುಷ್ಕರನಿರತ ಸಾರಿಗೆ ಸಿಬ್ಬಂದಿಗೆ ಡಿಸಿಎಂ ಲಕ್ಷ್ಮಣ ಸವದಿ ಮನವಿ ಮಾಡಿದ್ದಾರೆ.

dcm lakshmana savadi
ಡಿಸಿಎಂ ಲಕ್ಷ್ಮಣ ಸವದಿ
author img

By

Published : Dec 11, 2020, 11:09 AM IST

ಬೆಂಗಳೂರು: ಸಾರಿಗೆ ಸಿಬ್ಬಂದಿ ಬೇಡಿಕೆ ಈಡೇರಿಕೆಯು ಸರ್ಕಾರಕ್ಕೆ ಒಂದು ದೊಡ್ಡ ಸವಾಲಾಗಿದ್ದು, ತಕ್ಷಣಕ್ಕೆ ಈ ಬಗ್ಗೆ ನಿರ್ಧಾರ ಮಾಡಲು ಸಾಧ್ಯವಿಲ್ಲ. ಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳಬೇಕು. ನಿಮ್ಮ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಪ್ರತಿಭಟನೆ ಕೈಬಿಡಿ ಎಂದು ಮುಷ್ಕರನಿರತ ಸಾರಿಗೆ ಸಿಬ್ಬಂದಿಗೆ ಸಾರಿಗೆ ಸಚಿವರೂ ಆಗಿರುವ ಲಕ್ಷ್ಮಣ ಸವದಿ ಮನವಿ ಮಾಡಿದ್ದಾರೆ.

ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಇಂದು ಅಧಿಕಾರಿಗಳ ಸಭೆ ನಡೆಸುತ್ತೇನೆ. ಬಳಿಕ ನೌಕರರ ಜೊತೆಯಲ್ಲಿಯೂ ಸಭೆ ನಡೆಸಿ ಮಾತಾಡುತ್ತೇನೆ. ಸಭೆಯಲ್ಲಿ ಬೇಡಿಕೆ ಈಡೇರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಈ ಸುದ್ದಿಯನ್ನೂ ಓದಿ: ಮೆಜೆಸ್ಟಿಕ್ ನಿಲ್ದಾಣಕ್ಕೆ ಬಾರದ ಬಸ್​ಗಳು: ಪ್ರಯಾಣಿಕರ ಪರದಾಟ

ಸದ್ಯ ಕೋವಿಡ್​​ನಿಂದ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಆರ್ಥಿಕ ಸಂಕಷ್ಟ ಎದುರಾಗಿರುವ ಇಂತಹ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಜನರಿಗೆ ತೊಂದರೆ ಕೊಡೋದು ಬೇಡ, ಪ್ರತಿಭಟನೆ ಕೈ ಬಿಟ್ಟು, ಬೇಡಿಕೆ ಬಗ್ಗೆ ಕುಳಿತು ಚರ್ಚೆ ಮಾಡೋಣ ಎಂದು ತಿಳಿಸಿದರು. ಒಂದು ನಿಗಮದ ಬೇಡಿಕೆ ಈಡೇರಿಸಿದರೆ ಎಲ್ಲಾ 4 ನಿಗಮದಿಂದ ಇದೇ ಒತ್ತಾಯ ಕೇಳಿಬರುತ್ತದೆ. ಹಾಗಾಗಿ ಇದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ ಎಂದರು.

ನಾನು ನಿನ್ನೆ ಸದನದಲ್ಲಿ ಇದ್ದ ಕಾರಣ ಪ್ರತಿಭಟನಾ ಸ್ಥಳಕ್ಕೆ ಹೋಗಲು ಆಗಿರಲಿಲ್ಲ. ಪ್ರತಿಭಟನೆ ನಿಯಂತ್ರಿಸಲು ಹಾಗು ಮುಂದಿನ ಅನಾಹುತ ತಪ್ಪಿಸಲು ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ, ನಂತರ ಅವರನ್ನು ಬಿಡುಗಡೆ ಮಾಡಿದ್ದಾರೆ. ಇಂದು ಅವರ ಜೊತೆ ಚರ್ಚೆ ಮಾಡುತ್ತೇನೆ ಎಂದರು.

ಈ ಸುದ್ದಿಯನ್ನೂ ಓದಿ: ಬೇಡಿಕೆ ಆಲಿಸಲು ಸಿದ್ಧ, ಮುಷ್ಕರ ನಿಲ್ಲಿಸುವಂತೆ ಸಾರಿಗೆ ನೌಕರರಿಗೆ ಡಿಸಿಎಂ ಸವದಿ ಮನವಿ

ಸಾರಿಗೆ ನೌಕರರ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ಸಮಸ್ಯೆ ಆಗಲಿದೆ. ಕೋವಿಡ್ ಸಂದರ್ಭದಲ್ಲಿ ಎರಡು ತಿಂಗಳು ಬಂದ್ ಇತ್ತು, ಆ ವೇಳೆ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಆಗಿದೆ. ಈಗಲೂ ಸಾರ್ವಜನಿಕರಿಗೆ ಸ್ವಲ್ಪ ಸಮಸ್ಯೆ ಆಗುತ್ತದೆ, ಆದರೆ ಸಾರ್ವಜನಿಕರೂ ನಮ್ಮ ಜೊತೆ ಕೈ ಜೋಡಿಸಬೇಕು. ಏಕ ಕಾಲದಲ್ಲಿ ಎಲ್ಲವನ್ನೂ ಮಾಡಲು ಆಗಲ್ಲ. ಬದಲಿ ವ್ಯವಸ್ಥೆ ಮಾಡುತ್ತೇವೆ ಎಂದು ಸವದಿ ಜನರಿಗೂ ಮನವಿ ಮಾಡಿದರು.

ಕೊರೊನಾ ಸಂದರ್ಭದಲ್ಲಿ ಸಾರಿಗೆ ನೌಕರರರಿಗೆ ನಾಲ್ಕು ತಿಂಗಳು ಸಂಬಳ ನೀಡಿದ್ದೇವೆ. ಬೇರೆ ರಾಜ್ಯಗಳಲ್ಲಿ ಸಂಬಳ ನೀಡಿಲ್ಲ. ಸಿಎಂ ಜೊತೆ ಚರ್ಚೆ ಮಾಡಿ ನಮ್ಮ ನೌಕರರಿಗೆ ಸಂಬಳ ಕೊಡಿಸಿದ್ದೇವೆ. ಇದನ್ನು ನಮ್ಮ ನೌಕರರು ತಿಳಿದುಕೊಳ್ಳಬೇಕು, ಸರ್ಕಾರ ನಿಮ್ಮ ಜೊತೆ ಇದೆ. ಹಾಗಾಗಿ ಧರಣಿ ವಾಪಸ್ ಪಡೆಯಿರಿ ಎಂದು ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.