ಬೆಂಗಳೂರು :ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆ ಮತ್ತು ಉತ್ತಮ ಆಮ್ಲಜನಕ ಸಿಗಲಿ ಎಂಬ ಸದುದ್ದೇಶದಿಂದ ಹೆಸರಘಟ್ಟದ ಖಾಸಗಿ ಆಸ್ಪತ್ರೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಶೇಷ ಎಂದರೆ ಕೋವಿಡ್ ಸೋಂಕಿನಿಂದ ಬಳಲಿ ಆಮ್ಲಜನಕದ ನೆರವಿನಿಂದ ಗುಣಮುಖರಾದವರು ಗಿಡ ನೆಟ್ಟಿದ್ದಾರೆ.
ಕೋವಿಡ್ ಮಹಾಮಾರಿಯಿಂದ ಇದೀಗ ಪ್ರಾಣವಾಯುವಿನ ಮಹತ್ವದ ಅರಿವಾಗಿದ್ದು, ನಾವು ಇನ್ನಷ್ಟು ಗಿಡಗಳನ್ನು ನೆಟ್ಟು ಸೂಕ್ತ ರೀತಿಯಲ್ಲಿ ಪರಿಸರ ಸಂರಕ್ಷಿಸಬೇಕು. ಎಲ್ಲರ ಸಹಕಾರದಿಂದ ಮಾತ್ರ ಪರಿಸರ ಉಳಿಸಲು ಸಾಧ್ಯ ಎಂದು ಸೋಂಕಿನಿಂದ ಗುಣಮುಖರಾದವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ವಿಶ್ವ ಪರಿಸರ ದಿನ: ಖಾಸಗಿ ಆಸ್ಪತ್ರೆಯಲ್ಲಿ ಗಿಡ ನೆಟ್ಟು ನಿಸರ್ಗ ಸಂರಕ್ಷಣೆ ಶಪಥ ಮಾಡಿದ ಕೋವಿಡ್ ಗೆದ್ದವರು
ಕೊರೊನಾ ಮಹಾಮಾರಿ ಬಂದ ನಂತರ ಜನತೆಗೆ ಪ್ರಾಣವಾಯುವಿನ ಮಹತ್ವದ ಬಗ್ಗೆ ಅರಿವು ಮೂಡಿದೆ. ಹೀಗಾಗಿ ಜನರಿಗೆ ಗಿಡ ನೆಡುವುದರ ಜರೂರತ್ತಿನ ಬಗ್ಗೆ ತಿಳಿವಳಿಕೆ ಮೂಡಿದ್ದು, ಇಂದು ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಹೆಸರಘಟ್ಟದ ಖಾಸಗಿ ಆಸ್ಪತ್ರೆ ವತಿಯಿಂದ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕೊರೊನಾ ಸೋಂಕಿನಿಂದ ಗುಣಮುಖರಾದವರು ಗಿಡ ನೆಟ್ಟಿದ್ದಾರೆ.