ETV Bharat / state

ಜಾಗತೀಕರಣದಿಂದ ಹಸಿರು ಪರಿಸರ ಕಣ್ಮರೆ : ಕಮಾಂಡಿಂಗ್ ಮೇಜರ್ ಜನರಲ್ ಜೆ ವಿ ಪ್ರಸಾದ್ - ಭಾರತೀಯ ಸೇನಾಪಡೆ, ರೀಫಾರೆಸ್ಟ್ ಇಂಡಿಯಾ ಹಾಗೂ ಪೆರ್ನಾಡ್ ರಿಕಾರ್ಡ್ ಇಂಡಿಯಾ ಸಹಭಾಗಿತ್ವದಲ್ಲಿ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ವನ ಮಹೋತ್ಸವ ಕಾರ್ಯಕ್ರಮ ನೆರವೇರಿತು.

ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಸಂರಕ್ಷಣ್ ಎನ್ನುವ ಕಾರ್ಯಕ್ರಮದ ಅಡಿಯಲ್ಲಿ 1300 ಸಸಿಗಳನ್ನು ನೆಡಲಾಗಿದೆ, ಈ ಯೋಜನೆ ಮೂಲಕ ಕುಡಿಯುವ ನೀರು, ನೈರ್ಮಲ್ಯ, ಶಿಕ್ಷಣ, ಯುವಜನ ಉದ್ಯೋಗ ಹಾಗೂ ಪ್ರಾಥಮಿಕ ಆರೋಗ್ಯ ಶುಶ್ರೂಷೆಯತ್ತ ಹೆಚ್ಚು ಗಮನ ಹರಿಸಲಾಗುವುದು..

Planting 1,300 saplings at Army Public School
ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಸಂರಕ್ಷಣ್ ಎನ್ನುವ ಕಾರ್ಯಕ್ರಮದ ಅಡಿಯಲ್ಲಿ 1300 ಸಸಿಗಳನ್ನು ನೆಡಲಾಯಿತು
author img

By

Published : Feb 28, 2022, 7:30 PM IST

ಬೆಂಗಳೂರು : ಭಾರತೀಯ ಸೇನಾಪಡೆ, ರೀಫಾರೆಸ್ಟ್ ಇಂಡಿಯಾ ಹಾಗೂ ಪೆರ್ನಾಡ್ ರಿಕಾರ್ಡ್ ಇಂಡಿಯಾ ಸಹಭಾಗಿತ್ವದಲ್ಲಿ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ವನ ಮಹೋತ್ಸವದ ಅಂಗವಾಗಿ 1300 ಸಸಿಗಳನ್ನು ನೆಡಲಾಯಿತು.

ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಸಂರಕ್ಷಣ್ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಕಮಾಂಡಿಂಗ್ ಮೇಜರ್ ಜನರಲ್ ಜೆ.ವಿ. ಪ್ರಸಾದ್, ಸೇನಾ ಶಾಲೆಗಳಲ್ಲಿ ಪರಿಸರವನ್ನು ಉತ್ತೇಜಿಸುವ ಹಾಗೂ ಇನ್ನಷ್ಟು ಮರಗಳನ್ನು ಬೆಳೆಸುವ ಉದ್ದೇಶದಿಂದ ಇಂದು ಈಗಾಗಲೇ 4 ರಿಂದ 6 ಅಡಿ ಉದ್ದ ಬೆಳೆದಿರುವ ಒಂದು ವರ್ಷ ವಯಸ್ಸಿನ 1,300 ಸಸಿಗಳನ್ನು ನೆಡಲಾಗಿದೆ. ಈ ರೀತಿಯ ಸಸಿಗಳು ಶೇ.90ರಷ್ಟು ಉಳಿಯುವ ಆಶಯವಿದೆ ಎಂದರು.

ಜಾಗತೀಕರಣದ ಬಳಿಕ ಹಸಿರುಮಯ ಪರಿಸರ ಕಣ್ಮರೆಯಾಗುತ್ತಿದೆ. ಹೀಗಾಗಿ, ಪೆರ್ನಾಡ್ ರೆಕಾರ್ಡ್ ಸಹಭಾಗಿತ್ವದಲ್ಲಿ ಆರ್ಮಿ ಶಾಲೆಯಲ್ಲಿ ಈ ಸಸಿಗಳನ್ನು ನೆಡಲು ಉತ್ಸಾಹ ತೋರಿದ್ದು, ಶ್ಲಾಘನೀಯ.

ಪ್ರತಿ ಶಾಲೆಗಳಿಗೆ ಖಾಸಗಿ ಸಂಸ್ಥೆಗಳು ಸ್ವಯಂ ಪ್ರೇರಿತರಾಗಿ ಸಸಿ ನೆಡುವುದರಿಂದ ಎಲ್ಲೆಡೆ ಹಸಿರುಮಯವಾಗಿರಲಿದೆ. ಇದು ಮುಂದಿನ ಪೀಳಿಗೆಗೆ ಮರಗಳ ಬಗ್ಗೆ ಜಾಗೃತಿ ಮೂಡಿಸಿದಂತೆ ಆಗಲಿದೆ ಎಂದರು.

ಪೆರ್ನಾಡ್ ರೆಕಾರ್ಡ್ ಇಂಡಿಯಾದ ಸಿಎಸ್‌ಆರ್ ಮುಖ್ಯಸ್ಥ ಶಶಿಧರ್ ವೇಂಪಲ್ ಮಾತನಾಡಿ, ನಮ್ಮ ಸಂಸ್ಥೆ ಸಾಮಾಜಿಕ ಕಳಕಳಿಯಿಂದ ಸಿಎಸ್‌ಆರ್ ಫಂಡ್‌ನಲ್ಲಿ ಸಸಿ ನೆಡುವ ಕೆಲಸ ಮಾಡುತ್ತಿದ್ದೇವೆ. ಇದು ಅತ್ಯಂತ ಸಂತೃಪ್ತಿ ನೀಡುತ್ತಿದೆ. ಇದಷ್ಟೇ ಅಲ್ಲ, ಇತರೆ ಕಾರ್ಯಗಳನ್ನೂ ಮಾಡುತ್ತಿದ್ದೇವೆ.

ಕುಡಿಯುವ ನೀರು, ನೈರ್ಮಲ್ಯ, ಶಿಕ್ಷಣ, ಯುವಜನ, ಉದ್ಯೋಗ ಹಾಗೂ ಪ್ರಾಥಮಿಕ ಆರೋಗ್ಯ ಶುಶ್ರೂಷೆಯತ್ತ ಹೆಚ್ಚು ಕೆಲಸ ಮಾಡುತ್ತಿದೆ. ಇದರ ಭಾಗವಾಗಿ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಸಂರಕ್ಷಣ್ ಎನ್ನುವ ಕಾರ್ಯಕ್ರಮದ ಅಡಿಯಲ್ಲಿ 1300 ಸಸಿಗಳನ್ನು ನೆಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಸಿ ನೆಡುವ ಆಶಯವಿದೆ ಎಂದರು.

ಇದನ್ನೂ ಓದಿ: ಚಾಮರಾಜನಗರ ಆಸ್ಪತ್ರೆ ಆಕ್ಸಿಜನ್ ದುರ್ಘಟನೆ- ಇನ್ನೂ ದೊರಕದ ನ್ಯಾಯ: ರಾಜ್ಯಪಾಲರ ಭೇಟಿಯಾದ ಮೃತರ ಕುಟುಂಬ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.