ETV Bharat / state

ಒಬಾಮ ಭೇಟಿ ನೀಡಿದ್ದ ವೇಳೆ ದುಷ್ಕೃತ್ಯವೆಸಗಲು ಸಂಚು.. ಬಂಧಿತ ಐಎಂ ಉಗ್ರ ಹೇಳಿಕೆ - ಶಂಕಿತ ಉಗ್ರ ಜೈನುಲಬ್ದೀನ್

ಬಾಂಬ್ ಸ್ಪೋಟ ಪ್ರಕರಣವೊಂದರಲ್ಲಿ ಮುಂಬೈ ಜೈಲಿನಲ್ಲಿದ್ದ ಶಂಕಿತ ಉಗ್ರ ಝೈನಾಲುವುದ್ದೀನ್‌ನ ಸಿಸಿಬಿ ಪೊಲೀಸರು ನಗರಕ್ಕೆ ಕರೆ ತಂದಿದ್ದರು. ವಿಚಾರಣೆ ನಡೆಸಿದಾಗ ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಓಬಾಮಾ ಭಾರತ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಲಾಗಿತ್ತು ಎಂಬ ಸ್ಪೋಟಕ ವಿಷಯವನ್ನು ಬಾಯ್ಬಿಟ್ಟಿದ್ದಾನೆ. ಈ ಮೂಲಕ‌ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದಕ ಕೃತ್ಯ ಎಸಗಲು ಸಂಚು ರೂಪಿಸಲು ವೇದಿಕೆ ಸಿದ್ಧಪಡಿಸಿಕೊಂಡಿದ್ದರು ಅಂಶ ಬೆಳಕಿಗೆ ಬಂದಿದೆ.

Jainulabdeen
author img

By

Published : Sep 29, 2019, 6:24 AM IST

Updated : Sep 29, 2019, 10:54 AM IST

ಬೆಂಗಳೂರು: ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಭಾರತ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಲಾಗಿತ್ತು ಎಂಬ ಸ್ಪೋಟಕ ವಿಷಯವೊಂದು ಸಿಸಿಬಿ ತನಿಖೆಯಿಂದ ಬಹಿರಂಗವಾಗಿದೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ಬಾಂಬ್ ಸ್ಪೋಟ ಪ್ರಕರಣವೊಂದರಲ್ಲಿ ಮುಂಬೈ ಜೈಲಿನಲ್ಲಿದ್ದ ಶಂಕಿತ ಉಗ್ರ ಝೈನಾಲುವುದ್ದೀನ್‌​​ನ ಸಿಸಿಬಿ ಪೊಲೀಸರು ನಗರಕ್ಕೆ ಕರೆ ತಂದಿದ್ದರು. ವಿಚಾರಣೆ ನಡೆಸಿದಾಗ ಪೊಲೀಸರಿಗೆ ಸ್ಪೋಟಕ ವಿಷಯವನ್ನು ಬಾಯ್ಬಿಟ್ಟಿದ್ದಾನೆ. ಈ ಮೂಲಕ‌ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದಕ ಕೃತ್ಯ ಎಸಗಲು ಸಂಚು ರೂಪಿಸಲು ವೇದಿಕೆ ಸಿದ್ಧಪಡಿಸಿಕೊಂಡಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

ಸಿಸಿಬಿ ಪೊಲೀಸರ ತನಿಖೆ ವೇಳೆ ಸ್ಪೋಟಕ ಮಾಹಿತಿ ಹೊರ ಹಾಕಿದ ಶಂಕಿತ ಉಗ್ರ ಝೈನಾಲುವುದ್ದೀನ್‌..

2015ರ‌ ಜನವರಿ 26ರಂದು ಭಾರತಕ್ಕೆ ಅಮೇರಿಕಾ ಅಧ್ಯಕ್ಷ ಬರಾಕ್​ ಒಬಾಮಾ ಅವರು ಭೇಟಿ ನೀಡಿದ್ದರು.‌ ಇದೇ ದಿನ ವಿಧ್ವಂಸಕ ಕೃತ್ಯ ನಡೆಸಲು ತಯಾರಿ ನಡೆಸುವ ಮೂಲಕ ದೇಶದೆಲ್ಲೆಡೆ ಬಾಂಬ್ ಸ್ಪೋಟಿಸುವ ಯೋಜನೆ ಸಿದ್ದವಾಗಿತ್ತು. ಆದರೆ, ಜನವರಿ 08 ರಂದು ಇಂಡಿಯನ್ ಮುಜಾ ಹಿದ್ದೀನ್ ಸಂಘಟನೆಯ ಉಗ್ರನನ್ನು ಎನ್‌ಐಎ ಬಂಧಿಸಿ ಗಣರಾಜ್ಯೋತ್ಸವದ ದಿನದ ಬಾಂಬ್ ಸ್ಪೋಟ ಯೋಜನೆಯನ್ನು ನಿಷ್ಕ್ರಿಯಗೊಳಿಸಿತ್ತು ಎಂದು ಬಾಯಿಬಿಟ್ಟಿದ್ದಾನೆ.

ಇಂಡಿಯನ್ ಮುಜಾಹಿದ್ದೀನ್(ಐಎಂ) ಸಂಘಟನೆಯ ಸಕ್ರಿಯ ಕಾರ್ಯಕರ್ತನಾಗಿದ್ದ ಶಂಕಿತ ಉಗ್ರ ಝೈನಾಲುವುದ್ದೀನ್‌​​ 2014ರಲ್ಲಿ ನಡೆದ ಚರ್ಚ್ ಸ್ಟ್ರೀಟ್ ಬಾಂಬ್ ಬ್ಲಾಸ್ಟ್​ಗೆ ಭಟ್ಕಳದಿಂದ ಸ್ಪೋಟಕಗಳನ್ನ ಸರಬರಾಜು ಮಾಡಿದ್ದ.‌ ಪುಲಕೇಶಿ ನಗರದ ಸೈಯದ್ ಇಸ್ಮಾಯಿಲ್ ಅಫಾಕ್‌ ಎಂಬುವನ ಮೂಲಕ ಸ್ಪೋಟಕಗಳನ್ನು ಸೈಯದ್ ಅಫಾಕ್​ನಿಂದ ಯಾಸಿನ್ ಭಟ್ಕಳ ಕೈ ಸೇರುತ್ತಿದ್ದವು.

ಸೈಯದ್ ಇಸ್ಮಾಯಿಲ್ ಅಫಾಕ್ ವೈದ್ಯನಾಗಿದ್ದು, ಈತ ಪಾಕಿಸ್ತಾನದ ಯುವತಿ ಅಲ್ಲಾಸಾರಾ ಅಬೀರ್ ಎಂಬಾಕೆಯೊಂದಿಗೆ ವಿವಾಹವಾಗಿದ್ದನು. ಹೆಂಡತಿಯನ್ನು ಭೇಟಿ ಮಾಡುವ ನೆಪದಲ್ಲಿ ಪಾಕಿಸ್ತಾನಕ್ಕೆ ತೆರಳುತ್ತಿದ್ದ ಅಫಾಕ್, ರಿಯಾಜ್ ಭಟ್ಕಳ್ ಸಹೋದರರನ್ನು ಭೇಟಿ ಮಾಡುತ್ತಿದ್ದನಂತೆ. ಆತನ ಸೂಚನೆ ಮೇರೆಗೆ ಬೆಂಗಳೂರಿನಲ್ಲಿ ಸ್ಪೋಟಕ ಸರಬರಾಜು ಮಾಡುತ್ತಿದ್ದನು ಎನ್ನಲಾಗುತ್ತಿದೆ.

ಇನ್ನೂ 2010 ರಿಂದ 2013 ವರೆಗೂ ಸ್ಪೋಟಕ ಸಾಮಾಗ್ರಿಗಳನ್ನು ಸರಬರಾಜು ಮಾಡಿದ್ದ ಝೈನಾಲುವುದ್ದೀನ್‌​​​​​, ಈತನಿಂದ ಇಸ್ಮಾಯಿಲ್ ಅಫಾಕ್​ ಸುಧಾರಿತ ಸ್ಪೋಟಕ ಪಡೆಯುತ್ತಿದ್ದನು. ಭಯೋತ್ಪಾದಕ‌ ಕೃತ್ಯಗಳಿಗೆ ಬೇಕಾದ ಸ್ಪೋಟಕಗಳು ಪುಲಕೇಶಿ ನಗರದ ಠಾಣಾ ವ್ಯಾಪ್ತಿಯ ಕಾಕ್ಸ್ ಟೌನ್​ನ ವೈನಾಡ್ ರೆಸ್ಸಿಡೆನ್ಸಿ ಅಪಾರ್ಟ್​ಮೆಂಟ್​ನ ಪ್ಲ್ಯಾಟ್​ನಲ್ಲಿ ತಯಾರಿ ಮಾಡಿಕೊಳ್ಳುತ್ತಿದ್ದನು.‌ ಈ ಮಧ್ಯೆ ಮುಂಬೈ ಟ್ರಿಪಲ್ ಬ್ಲಾಸ್ಟ್, ಪುಣೆಯ ಜರ್ಮನ್ ಬೇಕರಿ, ಗುಜರಾಜ್, ಬಿಹಾರದ ಬೌದ್ಧ ಗಯಾ ಸ್ಪೋಟ ಹಾಗೂ ಹೈದರಾಬಾದ್ ಕಚ್ಚಾ ವಸ್ತು ಸರಬರಾಜು ಮಾಡಿದ್ದು ಇದೇ ಝೈನಾಲುವುದ್ದೀನ್‌​​​​​ ಎಂಬುದು ತನಿಖೆಯಿಂದ ತಿಳಿದು ಬಂದಿದೆ.

Intro:Body:ಬರಾಕ್ ಓಬಾಮಾ ಭೇಟಿ ವೇಳೆ ದೇಶದೆಲ್ಲೆಡೆ ವಿಧ್ವಂಸಕ ಕೃತ್ಯ ಎಸಗಲು ಸ್ಕೆಚ್: ಸಿಸಿಬಿ ಪೊಲೀಸರಿಗೆ ಬಾಯ್ಬಿಟ್ಟ ಶಂಕಿತ ಉಗ್ರ

ಬೆಂಗಳೂರು: ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಓಬಾಮಾ ಭಾರತ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಲಾಗಿತ್ತು ಎಂಬ ಅಂಶ ಸಿಸಿಬಿ ತನಿಖೆಯಿಂದ ಜಗಜ್ಹಾಹೀರು ಆಗಿದೆ.. ಕಳೆದ ಎರಡು ದಿನಗಳ ಹಿಂದೆಯಷ್ಟೇ ಬಾಂಬ್ ಸ್ಪೋಟ ಪ್ರಜರಣವೊಂದರಲ್ಲಿ ಮುಂಬೈ ಜೈಲಿನಲ್ಲಿದ್ಧ ಶಂಕಿತ ಉಗ್ರ
ಜೈನಾವುಲ್ಲಾಬುದ್ದೀನ್ ನನ್ನು ಸಿಸಿಬಿ ಪೊಲೀಸರು ನಗರಕ್ಕೆ ಕರೆತಂದ ನಡೆದ ವಿಚಾರಣಯಲ್ಲೇ ಸ್ಪೋಟಕ ವಿಷಯವನ್ನು ಬಾಯ್ಬಿಟ್ಟಿದ್ದಾನೆ. ಈ ಮೂಲಕ‌ ಅಂತರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದಕ ಕೃತ್ಯ ಎಸಗಲು ಸಂಚು ರೂಪಿಸಲು ವೇದಿಕೆ ಸಿದ್ಧಪಡಿಸಿಕೊಂಡಿದ್ದರು ಅಂಶ ಬೆಳಕಿಗೆ ಬಂದಿದೆ.
2015ರ‌ ಜ. 26 ಭಾರತಕ್ಕೆ ಅಮೇರಿಕಾ ಅಧ್ಯಕ್ಷ ಓಬಾಮಾ ಭೇಟಿ ನೀಡಿದ್ದರು.‌ ಇದೇ ದಿನ ವಿದ್ವಂಸಕ ಕೃತ್ಯ ನಡೆಸಲು ತಯಾರಿ ನಡೆಸುವ ಮೂಲಕ ದೇಶದೆಲ್ಲೆಡೆ ಬಾಂಬ್ ಬ್ಲಾಸ್ಟ್ ಗೆ ಯೋಜನೆ ಸಿದ್ದವಾಗಿತ್ತು. ಆದರೆ ಜನವರಿ 8 ರಂದು ಇಂಡಿಯನ್ ಮುಜ್ಜಾಯಿದ್ದೀನ್ ಸಂಘಟನೆಯ ಉಗ್ರನನ್ನು ಎಎನ್ ಐ ಅರೆಸ್ಟ್ ಮಾಡುವ ಮೂಲಕ ಗಣರಾಜ್ಯೋತ್ಸವದ ದಿನದ ಬಾಂಬ್ ಸ್ಪೋಟ ಯೋಜನೆ ಪ್ಲಾಪ್ ಮಾಡಿತ್ತು ಎಂದು ಬಾಯ್ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಇಂಡಿಯನ್ ಮುಜ್ಜಾಯಿವುದ್ದೀನ್ ಸಂಘಟನೆಯ ಸಕ್ರಿಯ ಕಾರ್ಯಕರ್ತನಾಗಿದ್ಧ ಶಂಕಿತ ಉಗ್ರ ಜೈನಾಲ್ಲಾಬುದ್ಧೀನ್ 2014 ರಲ್ಲಿ ನಡೆಸ ಚರ್ಚ್ ಸ್ಟ್ರೀಟ್ ಬಾಂಬ್ ಬ್ಲಾಸ್ಟ್ ಗೆ ಭಟ್ಕಳದಿಂದ ಸ್ಪೋಟಕಗಳು ಸರಬರಾಜು ಮಾಡಿದ್ದ.‌ ಪುಲಕೇಶಿ ನಗರದ ಸೈಯದ್ ಇಸ್ಮಾಯಿಲ್ ಅಫಾಕ್‌ ಮೂಲಕ ಸ್ಪೋಟಕಗಳ ಸಪ್ಲೈ
ಅಫಾಕ್ ನಿಂದ ಯಾಸಿನ್ ಭಟ್ಕಳ ಕೈ ಸೇರುತ್ತಿದ್ದವು.
ಸೈಯದ್ ಇಸ್ಮಾಯಿಲ್ ಅಫಾಕ್ ವೃತ್ತಿಯಲ್ಲಿ ಹೋಮಿಯೋಪತಿ ಡಾಕ್ಟರ್ ಆಗಿದ್ದು ಈತ ಮದುವೆಯಾಗಿದ್ದು ಪಾಕಿಸ್ತಾನದ ಯುವತಿ ಅಲ್ಲಾಸಾರಾ ಅಬೀರ್ ಎಂಬಾಕೆಯೊಂದಿಗೆ ವಿವಾಹವಾಗಿದ್ದ.‌ಹೆಂಡತಿ ಭೇಟಿ ನೆಪದಲ್ಲಿ ಪಾಕಿಸ್ತಾನಕ್ಕೆ ತೆರಳುತ್ತಿದ್ದ ಅಫಾಕ್, ರಿಯಾಜ್ ಭಟ್ಕಳ್ ಬ್ರದರ್ಸ್ ಭೇಟಿ ಮಾಡ್ತಿದ್ದ‌. ಆತನ ಸೂಚನೆ ಮೇರೆಗೆ ಬೆಂಗಳೂರಿನಲ್ಲಿ ಸ್ಪೋಟಕ ಸರಬರಾಜು
ಮಾಡುವ ಪಾತ್ರ ವಹಿಸಿದ್ದ.
ಇನ್ನೂ 2010 ರಿಂದ 2013 ವರೆಗೂ ಸ್ಪೋಟಕ ಸಪ್ಲೈ ಮಾಡಿದ್ದ ಜೈನಾವುಲ್ಲಾಬುದ್ದೀನ್ ಈತನಿಂದ ಇಸ್ಮಾಯಿಲ್ ಅಫಾಕ್ ಗೆ ಸುಧಾರಿತ ಸ್ಪೋಟಕ ಪಡೆಯುತ್ತಿದ್ದ. ಭಯೋತ್ಪಾದಕ‌ ಕೃತ್ಯಗಳಿಗೆ ಬೇಕಾಗಿದ್ಧ ಸ್ಪೋಟಕಗಳು ಪುಲಕೇಶಿನಗರದ ಠಾಣಾ ವ್ಯಾಪ್ತಿಯ ಕಾಕ್ಸ್ ಟೌನ್ ನ ವೈನಾಡ್ ರೆಸ್ಸಿಡೆನ್ಸಿ ಅಪಾರ್ಟ್ ಮೆಂಟ್ ನ ಪ್ಲ್ಯಾಟ್ ನಲ್ಲಿ ತಯಾರಿ ಮಾಡಿಕೊಳ್ಳುತ್ತಿದ್ದ.‌ ಈ ಮಧ್ಯೆ ಮುಂಬೈ ಟ್ರಿಪಲ್ ಬ್ಲಾಸ್ಟ್ , ಪುಣೆಯ ಜರ್ಮನ್ ಬೇಕರಿ ಬ್ಲಾಸ್ಟ್  
ಗುಜರಾಜ್ ಬ್ಲಾಸ್ಟ್ ,ಬಿಹಾರದ ಬೌದಗಯಾ ಬಾಂಬ್ ಸ್ಪೋಟ ಹಾಗೂ ಹೈದರಾಬಾದ್ ಬ್ಲಾಸ್ಟ್ ಗೂ ಕಚ್ಚಾ ವಸ್ತು ಸರಬರಾಜು ಮಾಡಿದ್ದು ಇದೇ ಜೈನಾವುಲ್ಲಾಬುದ್ದೀನ್ ಎಂದು ತನಿಖೆಯಿಂದ ತಿಳಿದುಬಂದಿದೆ.

Conclusion:
Last Updated : Sep 29, 2019, 10:54 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.