ETV Bharat / state

7ನೇ ವೇತನ ಆಯೋಗ ಕಾರ್ಯನಿರ್ವಹಿಸಲು ಸ್ಥಳ ನಿಗದಿ

ಏಳನೇ ವೇತನ ಆಯೋಗ ಜಾರಿಯಲ್ಲಿರುವವರೆಗೆ ಸರ್ಕಾರಿ ಕಚೇರಿಯನ್ನು ಬಳಸಬಹುದು. ಲೋಕೋಪಯೋಗಿ ಇಲಾಖೆ ನಿಗದಿಪಡಿಸುವ ಬಾಡಿಗೆ ದರವನ್ನು ಆಯೋಗ ಪಾವತಿಸಬೇಕು ಎಂದು ರಾಜ್ಯ ಸರ್ಕಾರ ಆದೇಶದಲ್ಲಿ ತಿಳಿಸಿದೆ.

Vidhanasoudha
ವಿಧಾನ ಸೌಧ
author img

By

Published : Dec 4, 2022, 6:39 AM IST

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸುವ ಸಂಬಂಧ ರಚನೆ ಮಾಡಿರುವ ಏಳನೇ ವೇತನ ಆಯೋಗ ಕಾರ್ಯನಿರ್ವಹಿಸಲು ಔಷಧ ನಿಯಂತ್ರಕರ ಹಳೆಯ ಕಚೇರಿ ಜಾಗದಲ್ಲಿ ಸ್ಥಳ ನೀಡಿ ಸರ್ಕಾರ ಆದೇಶಿಸಿದೆ.

ಔಷಧ ನಿಯಂತ್ರಕರ ಹಳೆಯ ಕಚೇರಿ ಕಟ್ಟಡದ ಮೂರನೇ ಮಹಡಿಯಲ್ಲಿ ಲಭ್ಯಲಿರುವ 2,500 ಚದರ ಅಡಿ, ಕಾರಿಡಾರ್ ಹಾಗೂ ಕೊಠಡಿಗಳನ್ನು ತಾತ್ಕಾಲಿಕವಾಗಿ ಕಾರ್ಯನಿರ್ವಹಿಸಲು ವೇತನ ಆಯೋಗಕ್ಕೆ ಒದಗಿಸುವಂತೆ ತಿಳಿಸಲಾಗಿದೆ. ಆಯೋಗ ಜಾರಿಯಲ್ಲಿರುವವರೆಗೆ ಈ ಕಚೇರಿಯನ್ನು ಬಳಸಬಹುದು. ಲೋಕೋಪಯೋಗಿ ಇಲಾಖೆ ನಿಗದಿಪಡಿಸುವ ಬಾಡಿಗೆ ದರವನ್ನು ಪಾವತಿಸಬೇಕು ಎಂದು ಸೂಚಿಸಲಾಗಿದೆ.

ವೇತನ ಆಯೋಗ ಸುಗಮವಾಗಿ ಕಾರ್ಯನಿರ್ವಹಿಸಲು ಒಂದು ಸಭಾಂಗಣ ಕೊಠಡಿ, ಪ್ರೇಕ್ಷಕರ ಕೊಠಡಿ ಮತ್ತು ಆರು ಕೊಠಡಿಗಳ ಅವಶ್ಯಕತೆ ಇದೆ. ಹೀಗಾಗಿ ಇವೆಲ್ಲವನ್ನು ಒಳಗೊಂಡ ಸುಸಜ್ಜಿತವಾದ ಕಟ್ಟಡ ಮತ್ತು ಇತರೆ ಮೂಲಸೌಕರ್ಯಗಳನ್ನು ಒದಗಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಇದನ್ನೂ ಓದಿ: 2023ನೇ ಸಾಲಿನಲ್ಲಿ 19 ಸಾರ್ವತ್ರಿಕ ರಜೆ, 17 ಪರಿಮಿತ ರಜಾದಿನ ಘೋಷಿಸಿ ಸರ್ಕಾರ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.