ETV Bharat / state

ಕಲ್ಲುಗಣಿಗಾರಿಕೆ ಲೈಸೆನ್ಸ್ ರದ್ದು ಕೋರಿ ಪಿಐಎಲ್ : ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ - PIL seeking cancellation of Stone mining license news

ಸರ್ಕಾರಿ ವಕೀಲರು ವಾದಿಸಿ, ಅರ್ಜಿದಾರರು ಈಗಾಗಲೇ ಇದೇ ವಿಷಯದ ಸಂಬಂಧ ಎನ್‌ಜಿಟಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ, ಈ ಅರ್ಜಿ ಮಾನ್ಯ ಮಾಡಬಾರದು ಎಂದರು. ಇದಕ್ಕೆ ಪೀಠ, ಮೊದಲು ನೀವು ಎನ್‌ಜಿಟಿಯಲ್ಲಿ ಅರ್ಜಿ ಸಲ್ಲಿಸಿರುವುದು ಸೇರಿದಂತೆ ಎಲ್ಲ ಮಾಹಿತಿ ಒಳಗೊಂಡ ಆಕ್ಷೇಪಣೆಗಳನ್ನು ಸಲ್ಲಿಸಿ ನಂತರ ಮುಂದಿನ ವಿಚಾರಣೆ ನಡೆಸೋಣ ಎಂದು ತಿಳಿಸಿ ವಿಚಾರಣೆ ಮುಂದೂಡಿತು..

ಕಲ್ಲುಗಣಿಗಾರಿಕೆ ಲೈಸೆನ್ಸ್ ರದ್ದು
ಕಲ್ಲುಗಣಿಗಾರಿಕೆ ಲೈಸೆನ್ಸ್ ರದ್ದು
author img

By

Published : Oct 19, 2021, 3:18 PM IST

ಬೆಂಗಳೂರು : ಕಾರ್ಕಳ ತಾಲೂಕಿನ ಉಪ್ಪರಿಗೆ ಮನೆ, ಶಿವಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಕುರಿತು ಸಲ್ಲಿಸಿರುವ ಪಿಐಎಲ್ ಸಂಬಂಧ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ.

ಭೋಜಶೆಟ್ಟಿ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ಸಿಜೆ ರಿತುರಾಜ್ ಅವಸ್ಥಿ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಾದಿಸಿದ ವಿಕ್ರಂ ಹುಯಿಲ್ಗೋಳ್, ಕರ್ನಾಟಕ ಕಲ್ಲು ಗಣಿಗಾರಿಕೆ ನಿಯಂತ್ರಣ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿ ಮೂಕಾಂಬಿಕಾ ಸ್ಟೋನ್ ಕ್ರಷರ್ಸ್​ನ ವ್ಯವಸ್ಥಾಪಕ ಪಾಲುದಾರರಾದ ಪ್ರಸನ್ನಶೆಟ್ಟಿ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಇದರಿಂದ ಸುತ್ತಮುತ್ತಲ ಗ್ರಾಮಸ್ಥರಿಗೆ ತೀವ್ರ ತೊಂದರೆ ಆಗುತ್ತಿದೆ. ಆ ಬಗ್ಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದರು.

ಅಲ್ಲದೆ, ನಿಯಮಗಳನ್ನು ಗಾಳಿಗೆ ತೂರಿ ವ್ಯಾಪಕ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿರುವುದು ಅರ್ಜಿದಾರರಿಗೆ ಸಂವಿಧಾನದ ಕಲಂ 21ರಡಿ ಲಭ್ಯವಿರುವ ಆರೋಗ್ಯ ಹಕ್ಕಿಗೆ ತೊಂದರೆ ಆಗಿದೆ. ಹಿಂದೆ ನಿಯಮಗಳನ್ನು ಉಲ್ಲಂಘಿಸಿದ್ದ ಆರೋಪವಿದ್ದರೂ ಸಹ ಮತ್ತೆ ಲೈಸನ್ಸ್ ನವೀಕರಣ ಮಾಡಲಾಗಿದೆ. ಹಾಗಾಗಿ, ನವೀಕರಣ ಮಾಡಿರುವ ಪರವಾನಿಗೆ ರದ್ದುಗೊಳಿಸಬೇಕು ಎಂದು ಕೋರಿದರು.

ಸರ್ಕಾರಿ ವಕೀಲರು ವಾದಿಸಿ, ಅರ್ಜಿದಾರರು ಈಗಾಗಲೇ ಇದೇ ವಿಷಯದ ಸಂಬಂಧ ಎನ್‌ಜಿಟಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ, ಈ ಅರ್ಜಿ ಮಾನ್ಯ ಮಾಡಬಾರದು ಎಂದರು. ಇದಕ್ಕೆ ಪೀಠ, ಮೊದಲು ನೀವು ಎನ್‌ಜಿಟಿಯಲ್ಲಿ ಅರ್ಜಿ ಸಲ್ಲಿಸಿರುವುದು ಸೇರಿದಂತೆ ಎಲ್ಲ ಮಾಹಿತಿ ಒಳಗೊಂಡ ಆಕ್ಷೇಪಣೆಗಳನ್ನು ಸಲ್ಲಿಸಿ ನಂತರ ಮುಂದಿನ ವಿಚಾರಣೆ ನಡೆಸೋಣ ಎಂದು ತಿಳಿಸಿ ವಿಚಾರಣೆ ಮುಂದೂಡಿತು.

ಅರ್ಜಿದಾರರು, ನಿಯಮದ ಪ್ರಕಾರ ಕಲ್ಲು ಗಣಿಗಾರಿಕೆ ಘಟಕ ಗ್ರಾಮದಿಂದ 500 ಮೀಟರ್ ದೂರದಲ್ಲಿರಬೇಕು. ಆದರೆ, ಘಟಕ 500 ಮೀಟರ್‌ನೊಳಗೆ ಇದೆ. ಜೊತೆಗೆ ಘಟಕ ಯಾವ ಷರತ್ತುಗಳನ್ನೂ ಪಾಲನೆ ಮಾಡುತ್ತಿಲ್ಲ. ಕಲ್ಲು ಗಣಿಗಾರಿಕೆ ನಿಯಮಗಳನ್ನು ಉಲ್ಲಂಘಿಸುತ್ತಿದೆ. ಆದರೂ ಸರ್ಕಾರ ಅದರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.