ETV Bharat / state

ಭೂಸುಧಾರಣೆ ಕಾಯ್ದೆ ತಿದ್ದಪಡಿಗೆ 2ನೇ ಬಾರಿಗೆ ತಂದಿರುವ ಸುಗ್ರೀವಾಜ್ಞೆಯನ್ನೂ ಪ್ರಶ್ನಿಸಿ ಪಿಐಎಲ್ - land acquisition act was amended

ಸರ್ಕಾರ ಕಳೆದ ಜುಲೈನಲ್ಲಿ ಕರ್ನಾಟಕ ಭೂ ಸುಧಾರಣಾ ಕಾಯ್ದೆ-1961 ಕ್ಕೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ಕಾಯ್ದೆಯ ಸೆಕ್ಷನ್ 79 ಎ, ಬಿ, ಸಿ ಹಾಗೂ 80ನ್ನು ತೆಗೆದು ಹಾಕಿತ್ತು. ಅಲ್ಲದೇ ಸೆಕ್ಷನ 79ರ ಅಡಿ ಉಲ್ಲಂಘನೆಯಾಗಿದ್ದ ಪ್ರಕರಣಗಳನ್ನು 1974ರಿಂದ ಪೂರ್ವಾನ್ವಯ ಆಗುವಂತೆ ಕೈಬಿಡುವಂತೆ ಅಧಿಸೂಚನೆ ಹೊರಡಿಸಿತ್ತು.

High court
ಹೈಕೋರ್ಟ್
author img

By

Published : Nov 9, 2020, 9:15 PM IST

ಬೆಂಗಳೂರು : ಭೂ ಸುಧಾರಣಾ ಕಾಯ್ದೆಗೆ ತಿದ್ದಪಡಿ ತಂದಿರುವ ರಾಜ್ಯ ಸರ್ಕಾರ ತನ್ನ ನಿಲುವನ್ನು ಉಳಿಸಿಕೊಳ್ಳಲು 2ನೇ ಬಾರಿಗೆ ಸುಗ್ರೀವಾಜ್ಞೆ ಹೊರಡಿಸಿರುವ ಕ್ರಮವನ್ನೂ ಪ್ರಶ್ನಿಸಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಸುಗ್ರೀವಾಜ್ಞೆ ಪ್ರಶ್ನಿಸಿ ಈ ಹಿಂದೆ ಅರ್ಜಿ ಸಲ್ಲಿಸಿದ್ದ ಮೂಲ ಅರ್ಜಿದಾರ ನಾಗರಾಜ ಹೊಂಗಲ್ ಅವರು ಎರಡನೇ ಬಾರಿಗೆ ತಿದ್ದುಪಡಿಗೆ ತಂದಿರುವ ಸುಗ್ರೀವಾಜ್ಞೆ ತಂದಿರುವ ಕ್ರಮವನ್ನು ಪ್ರಶ್ನಿಸಿದ್ದಾರೆ. ಸರ್ಕಾರ ಸುಗ್ರೀವಾಜ್ಞೆಯನ್ನು ಮತ್ತೆ ಜಾರಿಗೆ ತಂದ ಬೆನ್ನಲ್ಲೇ ಅರ್ಜಿದಾರರು ತಮ್ಮ ಅರ್ಜಿಯನ್ನು ತಿದ್ದುಪಡಿ ಮಾಡಿ ಮತ್ತೆ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಓಕಾ ನೇತೃತ್ವದ ವಿಭಾಗೀಯ ಪೀಠ ಅರ್ಜಿಗೆ ಡಿ.1 ರೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಸರ್ಕಾರ ಕಳೆದ ಜುಲೈನಲ್ಲಿ ಕರ್ನಾಟಕ ಭೂ ಸುಧಾರಣಾ ಕಾಯ್ದೆ-1961 ಕ್ಕೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ಕಾಯ್ದೆಯ ಸೆಕ್ಷನ್ 79 ಎ, ಬಿ, ಸಿ ಹಾಗೂ 80ನ್ನು ತೆಗೆದು ಹಾಕಿತ್ತು. ಅಲ್ಲದೇ ಸೆಕ್ಷನ 79ರ ಅಡಿ ಉಲ್ಲಂಘನೆಯಾಗಿದ್ದ ಪ್ರಕರಣಗಳನ್ನು 1974ರಿಂದ ಪೂರ್ವಾನ್ವಯ ಆಗುವಂತೆ ಕೈಬಿಡುವಂತೆ ಅಧಿಸೂಚನೆ ಹೊರಡಿಸಿತ್ತು.

ಭೂ ಖರೀದಿ ಮಿತಿ ನಿಗದಿಗೊಳಿಸುವ ಸೆಕ್ಷನ್ 63ರನ್ನು ಮುಂಚಿನಂತೆಯೇ ಉಳಿಸಿಕೊಂಡಿದ್ದ ಸರ್ಕಾರ, 2 ನೇ ಬಾರಿ ಜಾರಿಗೊಳಿಸಿರುವ ಸುಗ್ರೀವಾಜ್ಞೆಯಲ್ಲೂ ಖಾಸಗಿ ಕಂಪೆನಿಗಳು, ಟ್ರಸ್ಟ್​ಗಳು ಖರೀದಿಸುವ ಜಮೀನಿನ ಪ್ರಮಾಣಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಇದು ಪರೋಕ್ಷವಾಗಿ ಜಮೀನು ಕಬಳಿಕೆಯನ್ನು ಉತ್ತೇಜಿಸುತ್ತದೆ ಎಂದು ಆರೋಪಿಸಿರುವ ಅರ್ಜಿದಾರರು, ತಿದ್ದುಪಡಿ ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದಾರೆ.

ಇವರಷ್ಟೇ ಅಲ್ಲದೇ, ಸುಗ್ರೀವಾಜ್ಞೆ ಪ್ರಶ್ನಿಸಿ ಇನ್ನೂ 7 ಮಂದಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಪ್ರಕರಣದಲ್ಲಿ ಮುಂದುವರೆಯಲು ಇಚ್ಚಿಸುವ ಅರ್ಜಿದಾರರು ತಮ್ಮ ಅರ್ಜಿಗಳನ್ನು ತಿದ್ದುಪಡಿ ಮಾಡಿ ಸಲ್ಲಿಸಲು ಅನುಮತಿ ನೀಡಿದೆ. ಅರ್ಜಿದಾರ ನಾಗರಾಜ್ ಹೊಂಗಲ್ ಪರ ನ್ಯಾಯವಾದಿಗಳಾದ ಶಂಕರ್ ಭಟ್ ಹಾಗೂ ರವೀಂದ್ರ ಡಿ.ಕೆ. ಅವರು ವಕಾಲತ್ತು ವಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.