ETV Bharat / state

Covid 3rd Wave ನಿಯಂತ್ರಣಕ್ಕೆ ಫನಾ ಕಾರ್ಯತಂತ್ರ! - ಫನ ತಜ್ಞರ ತಂಡ

ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಕ್ಕೆ ಖಾಸಗಿ ಆಸ್ಪತ್ರೆಗಳ ವೈದ್ಯರೂ ಸಾಥ್ ನೀಡಿದ್ದಾರೆ. ತಮ್ಮದೇ ಒಂದು ತಂಡ ರಚಿಸಿ ವೈರಸ್ ನಿಯಂತ್ರಣಕ್ಕೆ ಮುಂದಾಗಿದ್ದಾರೆ.

ಫನಾ
ಫನಾ
author img

By

Published : Jul 16, 2021, 9:26 AM IST

ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್ ಮೂರನೇ ಅಲೆ ತಡೆಯುವ ನಿಟ್ಟಿನಲ್ಲಿ ಫನ (ಪ್ರೈವೇಟ್ ಹಾಸ್ಪಿಟಲ್ಸ್ ಅಂಡ್ ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್) ಕಾರ್ಯೋನ್ಮುಖವಾಗಿದೆ. ಪ್ರಕರಣಗಳ ಸಂಖ್ಯೆಯು ಕಡಿಮೆಯಾಗಿರುವಾಗ ಬಹು - ವಿಧಗಳ ಕಾರ್ಯತಂತ್ರದ ಅನುಷ್ಠಾನ ಯೋಜಿಸಿದೆ.

ಫನಾ ತಂಡ ರಚನೆ

ಆರೋಗ್ಯ ಸೇವೆಯ ಮುಂಚೂಣಿಯಲ್ಲಿರುವ ಡಾ. ಹೇಮಾ ದಿವಾಕರ್ ಕೋವಿಡ್ ಫನ ತಜ್ಞರ ತಂಡದ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಫನ ಸಂಸ್ಥೆ ಲಸಿಕೆಯ ಪ್ರತಿಪಾದನೆ, ಸಂಶೋಧನೆ - ಸಂಪರ್ಕಿತ ದತ್ತಾಂಶಗಳ ದಾಖಲೀಕರಣ ಮತ್ತು ಆರೋಗ್ಯಸೇವಾ ಕಾರ್ಯಕರ್ತರ ಪರಿಣಾಮಕಾರಿ ತರಬೇತಿ ರಾಜ್ಯದ ಖಾಸಗಿ ಆಸ್ಪತ್ರೆಗಳಿಗೆ ಒದಗಿಸುತ್ತಿದೆ.
ಡಾ. ಹೇಮಾರ ನೇತೃತ್ವದ ತಜ್ಞರ ತಂಡವನ್ನು ಜುಲೈ 9 ರಂದು ರಚಿಸಲಾಗಿದ್ದು, ಫನ ಪದಾಧಿಕಾರಿಗಳ ವೈರಾಲಜಿ, ಎಪಿಡಮಿಯೋಲಜಿಸ್ಟ್ ಮತ್ತು ಪುನಾಲಜಿಸ್ಟ್ ಹಾಗೂ ಮಕ್ಕಳ ತಜ್ಞರು ಸಮಗ್ರ ಸಹಯೋಗ ಹೊಂದಿದೆ.

ಸರ್ಕಾರದ ಜತೆ ಖಾಸಗಿ ವಲಯದ ಪಾತ್ರವೂ ಮುಖ್ಯ

ಈ ನಿಟ್ಟಿನಲ್ಲಿ ನಮ್ಮ ಜೊತೆ ಮಾತನಾಡಿದ ಫನ ತಜ್ಞರ ತಂಡದ ಅಧ್ಯಕ್ಷೆ ಡಾ.ಹೇಮಾ ದಿವಾಕರ್ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ ಸಮಯದಲ್ಲಿ ಅಗತ್ಯವಾದ, ಕ್ರಿಯಾತ್ಮಕ ಮತ್ತು ಉಪಯುಕ್ತ ಕ್ರಮಗಳನ್ನು ತೆಗೆದುಕೊಳ್ಳುವುದಾಗಿದೆ. ಸಾಂಕ್ರಾಮಿಕ ನಿಯಂತ್ರಣದಲ್ಲಿ ಸರ್ಕಾರ ಕೈಗೊಂಡ ಕ್ರಮಗಳೊಂದಿಗೆ ಖಾಸಗಿ ವಲಯದ ಪಾತ್ರವೂ ಬಹಳ ಮುಖ್ಯವಾಗಿದೆ.

ಪ್ರಕರಣಗಳ ಸಂಖ್ಯೆ ಕಡಿಮೆ ಇರುವಾಗ ಮುಂದಿನ ಅಲೆಯನ್ನು ಹಿಮ್ಮೆಟ್ಟಿಸಲು ಸಿದ್ಧವಾಗುವ ಅಗತ್ಯವಿದೆ. ಆದ್ದರಿಂದ ನಾವು ತುರ್ತು ಇಲ್ಲದ ಅವಧಿಯನ್ನು ಪ್ರಕ್ರಿಯೆಗಳನ್ನು ಪ್ರಾರಂಭಿಸುವ ಮತ್ತು ಕ್ರಮ ಕೈಗೊಳ್ಳುವ ಮೂಲಕ ಸನ್ನದ್ಧರಾಗಿರಬೇಕು ಎಂದು ಅಭಿಪ್ರಾಯಪಟ್ಟರು.

ಉಪಕ್ರಮ ಅನುಸರಿಸುವ ಅಗತ್ಯವಿದೆ

ಲಸಿಕೆಗಳ ಪಾತ್ರ ಕುರಿತು ಫನ ಅಧ್ಯಕ್ಷ ಡಾ.ಹೆಚ್.ಎಂ.ಪ್ರಸನ್ನ ಮಾತನಾಡಿ, ಆಸ್ಪತ್ರೆಗಳು ನಗರಗಳು ಮತ್ತು ಪಟ್ಟಣಗಳಲ್ಲಿ ಲಸಿಕೆ ನೀಡಿಕೆ ಉಪಕ್ರಮಗಳನ್ನು ಅನುಸರಿಸುವ ಅಗತ್ಯವಿದೆ. ಈ ಮಾದರಿಯನ್ನು ಮೊದಲ ಹಂತದ ಲಸಿಕೆ ನೀಡಿಕೆಯಲ್ಲಿ ಅನುಸರಿಸಲಾಗಿತ್ತು ಮತ್ತು ಫಲಿತಾಂಶಗಳು ಪರಿಣಾಮಕಾರಿಯಾಗಿದ್ದವು.

ನಿರ್ದಿಷ್ಟ ಆಸ್ಪತ್ರೆಗಳನ್ನು ಲಸಿಕಾ ಕೇಂದ್ರಗಳಾಗಿ ನೇಮಕ ಮಾಡಿದಾಗ ಹತ್ತಿರದ ಆಸ್ಪತ್ರೆಗಳು ಪ್ರಚಾರವನ್ನು ಕೈಗೊಳ್ಳುತ್ತವೆ. ಎಲ್ಲ ಆಸ್ಪತ್ರೆಗಳೂ ಲಸಿಕೆಯ ಹಿಂಜರಿಕೆಯನ್ನು ಒಂದೇ ಧ್ವನಿಯಲ್ಲಿ ನಿವಾರಿಸುತ್ತದೆ. ಇದರೊಂದಿಗೆ, ಕಾರ್ಪೊರೇಟ್, ಕೈಗಾರಿಕೆಗಳು ಮತ್ತು ಎಸ್‌ಎಂಇಸಿ ವಲಯಗಳು ಮತ್ತು ಸೂಚಿತ ಲಸಿಕಾ ಕೇಂದ್ರಗಳ (ಆಸ್ಪತ್ರೆಗಳು) ಸಹಯೋಗದಲ್ಲಿ ದೊಡ್ಡ ಪ್ರಮಾಣದ ಲಸಿಕೆಯ ಉಪಕ್ರಮಗಳನ್ನು ನಡೆಸಬೇಕು ಎಂದರು.

ಸುಲಭ ದತ್ತಾಂಶ ದಾಖಲೀಕರಣ ಅಗತ್ಯ

ದತ್ತಾಂಶ ದಾಖಲೀಕರಣ ವಿಧಾನವನ್ನು ಸುಸೂತ್ರಗೊಳಿಸಲು ಅಗತ್ಯವಿದೆ. ಎಲ್ಲ ಖಾಸಗಿ ಆಸ್ಪತ್ರೆಗಳು ಕೋವಿಡ್-19 ಕೇಸ್ ಶೀಟ್‌ನ ಸಾಮಾನ್ಯ ಟೆಂಪ್ಲೇಟ್ ಮತ್ತು ಬಣ್ಣ - ಸೂಚಿತ ದಾಖಲೆಯನ್ನು ಬಳಸಬೇಕು. ಈ ಕ್ರಮ ಕೋವಿಡ್-19 ಸಂಬಂಧಿತ ಮಾಹಿತಿಯನ್ನು ನಿಖರವಾಗಿ, ಭೌತಿಕವಾಗಿ ಮತ್ತು ಎಲೆಕ್ಟ್ರಾನಿಕ್ ದಾಖಲೆಗಳ ಮೂಲಕ ರಾಜ್ಯದ ನೋಡಲ್ ಕೇಂದ್ರಗಳಿಗೆ ವಿತರಿಸಲು ನೆರವಾಗುತ್ತದೆ ಎಂದರು.

ಆರಂಭದಲ್ಲೇ ಕ್ರಮ ಕೈಗೊಳ್ಳುವುದು ಸೂಕ್ತ

ಸೋಂಕುಗಳ ಹೆಚ್ಚಳವನ್ನು ಪ್ರಾರಂಭದಲ್ಲಿ ಪತ್ತೆ ಮಾಡುವುದು ಮತ್ತು ಪ್ರಾರಂಭದಲ್ಲೇ ಕ್ರಮ ಕೈಗೊಳ್ಳುವುದು ಮುಂದಿನ ಅಲೆ ಪ್ರಾರಂಭವಾಗುವ ಮುನ್ನವೇ ಅದನ್ನು ಹತ್ತಿಕ್ಕುವ ಏಕೈಕ ದಾರಿಯಾಗಿದೆ.

ನಾವು ಪ್ರಕರಣಗಳು, ಆಸ್ಪತ್ರೆ ವಾಸ, ಮರಣ, ಸೋಂಕಿನ ಪ್ರಮಾಣ, ಪ್ರತಿ ಪ್ರಕರಣದಿಂದ ಉಂಟಾದ ಹೊಸ ಸೋಂಕುಗಳು ಮತ್ತು ಸಕಾಲಿಕವಾಗಿ ಜನರ ರೋಗಕಾರಕ ಪ್ರಮುಖ ಸೂಚಕಗಳನ್ನು ನಿಖರವಾಗಿ ದಾಖಲಿಸುವ ವ್ಯವಸ್ಥೆಗಳನ್ನು ಒಂದೆಡೆ ಇರಿಸಬೇಕಾಗುತ್ತದೆ. ಇದು ಪ್ರಾರಂಭಿಕ ಪತ್ತೆಗೆ ಅತ್ಯಂತ ಮುಖ್ಯವಾಗಿದೆ ಎಂದು ಫನ ಕಾರ್ಯದರ್ಶಿ ಡಾ ವೈ.ಎಲ್.ರಾಜಶೇಖರ್ ಹೇಳಿದರು.

ಆರೋಗ್ಯ ಸೇವಾ ಕಾರ್ಯಕರ್ತರಿಗೆ ತರಬೇತಿ

ಮೂರನೆ ಅಲೆಯಲ್ಲಿ ಎಲ್ಲಾ ಆರೋಗ್ಯ ಸೇವಾ ಕಾರ್ಯಕರ್ತರಿಗೆ ಆರೈಕೆಯ ಅತ್ಯಾಧುನಿಕ ರೂಢಿಗಳು ಮತ್ತು ಮಾರ್ಗಸೂಚಿಗಳ ತರಬೇತಿ ನೀಡಲು ಸೂಚಿಸಲಾಗಿದೆ. ಮೊದಲ ಅಲೆಯಲ್ಲಿ ಕೋವಿಡ್-19 ಪ್ರಕರಣಗಳು ಮತ್ತು ಸಂಬಂಧಿಸಿದ ನಿಯಮಗಳ ಕುರಿತು ಆರೋಗ್ಯ ಸೇವಾ ಕಾರ್ಯಕರ್ತರ ವಿಸ್ತೃತ ತರಬೇತಿಯನ್ನು ರಾಜ್ಯದಲ್ಲಿ ಫನ ಕೈಗೊಂಡಿತ್ತು. ಅದೇ ರೀತಿಯಲ್ಲಿ ಆಸ್ಪತ್ರೆಗಳ ಒತ್ತಡ ಕಡಿಮೆ ಮಾಡಲು ಫನಾ, ಕೋವಿಡ್-19 ಕ್ಲಿನಿಕಲ್ ಮತ್ತು ಗೃಹ ಆರೈಕೆ ಮಾರ್ಗಸೂಚಿಗಳನ್ನು ವಿಶ್ವಾಸಾರ್ಹ ವೈದ್ಯಕೀಯ ಸಂಸ್ಥೆಗಳ ಸಹಯೋಗದಲ್ಲಿ ನಿಶ್ಚಿತ ಗುಣಮಟ್ಟ, ಸುರಕ್ಷತೆ, ಪರಿಣಾಮಕಾರಿಯಾಗಿ ಚಿಕಿತ್ಸೆಗಳನ್ನು ಅಭಿವೃದ್ಧಿ ಪಡಿಸಲು ಮತ್ತು ಸಂವಹನ ನಡೆಸುವ ಅಗತ್ಯವಿದೆ ಎಂದರು.

ನಾವು ಈ ನಂತರದ ಅಲೆಗಳಿಗೆ ಒಡ್ಡಿಕೊಳ್ಳುವ ಸಾಮರ್ಥ್ಯ ಹೊಂದಿಲ್ಲ. ಪ್ರಾರಂಭಿಕ ರೋಗಪತ್ತೆ ಮತ್ತು ಸನ್ನಡತೆಯು ವಿಸ್ತಾರವಾದ ಸಾಮಾಜಿಕ ದುಷ್ಪರಿಣಾಮಗಳನ್ನು ತಪ್ಪಿಸಲು ಮುಖ್ಯವಾಗಿದ್ದು, ಫನ ಈ ದಿಕ್ಕಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದೂ ಡಾ. ಹೇಮಾ ಪ್ರತಿಪಾದಿಸಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.