ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಬಜೆಟ್ನಲ್ಲಿ ಘೋಷಿಸಿದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಶೇ. 3ರಷ್ಟು ಮಾರಾಟ ತೆರಿಗೆ ಹೆಚ್ಚಳ ಪ್ರಸ್ತಾಪ ನಾಳೆಯಿಂದ ಜಾರಿಗೆ ಬರಲಿದೆ. ನಾಳೆಯಿಂದ 2020-21 ಆರ್ಥಿಕ ವರ್ಷ ಆರಂಭವಾಗಲಿದ್ದು, ಬಜೆಟ್ನಲ್ಲಿ ಘೋಷಿಸಿದಂತೆ ಮಾರಾಟ ತೆರಿಗೆ ಹೆಚ್ಚಳ ಜಾರಿಯಾಗಲಿದೆ.
ಮಾರಾಟ ತೆರಿಗೆ ಹೆಚ್ಚಳ ನಿಟ್ಟಿನಲ್ಲಿ ಈಗಾಗಲೇ ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ದರ ನಾಳೆಯಿಂದ ಕನಿಷ್ಠ 1.63 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ.
ಪರಿಷ್ಕೃತ ಮಾರಾಟ ತೆರಿಗೆ ಪ್ರಕಾರ ಪೆಟ್ರೋಲ್ ಮೇಲಿನ ತೆರಿಗೆ 32%ರಿಂದ 35%ಕ್ಕೆ ಏರಿಕೆಯಾಗಲಿದೆ. ಡೀಸೆಲ್ ಮೇಲಿನ ಮಾರಾಟ ತೆರಿಗೆ 21%ರಿಂದ 24%ಕ್ಕೆ ಹೆಚ್ಚಳವಾಗಲಿದೆ. ಅದರಂತೆ ಪೆಟ್ರೋಲ್ ಮತ್ತು ಡೀಸೆಲ್ ದರ ಸುಮಾರು 1.63 ರೂ. ಏರಿಕೆಯಾಗುವ ನಿರೀಕ್ಷೆ ಇದೆ.