ಬೆಂಗಳೂರು: ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ ಸರ್ಕಾರ ಶಾಕ್ ನೀಡಿದೆ. ಮತ್ತೊಮ್ಮೆ ಪೆಟ್ರೋಲ್, ಡೀಸೆಲ್ ಸೇರಿದಂತೆ ಅಡುಗೆ ಅನಿಲದ ಬೆಲೆಯನ್ನು ಏರಿಕೆ ಮಾಡಿದೆ. ಗೃಹ ಬಳಕೆ ಎಲ್ಪಿಜಿ ಸಿಲಿಂಡರ್ ದರದಲ್ಲಿ ಸುಮಾರು 50 ರೂ. ಏರಿಕೆಯಾಗಿದೆ. ಈ ಮೂಲಕ 14.2 ಕೆಜಿ ಸಿಲಿಂಡರ್ ಬೆಲೆ 902.50 ಪೈಸೆಯಿಂದ 949.50 ರೂ.ಗೆ ಹೆಚ್ಚಳವಾಗಿದೆ. ಇಂದಿನಿಂದಲೇ ಈ ದರ ಜಾರಿಯಾಗಲಿದೆ.
ಇತ್ತ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿಯೂ ಏರಿಕೆ ಮಾಡಲಾಗಿದೆ. ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ 101.42 ಪೈಸೆ ಮತ್ತು ಡೀಸೆಲ್ ಬೆಲೆ 85.80 ಪೈಸೆ ತಲುಪಿದೆ. ಈ ಮೂಲಕ ಡೀಸೆಲ್ ಮೇಲೆ 0.79 ಪೈಸೆ, ಪೆಟ್ರೋಲ್ ಮೇಲೆ 0.84 ಪೈಸೆ ಹೆಚ್ಚಳವಾದಂತಾಗಿದೆ.
ಯುದ್ಧದ ಎಫ್ಟೆಕ್ಟ್: ಯುಕ್ರೇನ್-ರಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲೂ ತೈಲ ಬೆಲೆ ಏರಿಕೆಯಾಗಿದೆ.
ಗ್ರಾಹಕರು ಕಂಗಾಲು: ಪಂಚರಾಜ್ಯ ಚುನಾವಣೆ ಬಳಿಕ ಇಂಧನ ಬೆಲೆ ಏರಿಕೆಯಾಗಬಹುದೆಂದು ನಿರೀಕ್ಷಿಸಲಾಗಿತ್ತು.ಅದರಂತೆಯೇ ಇಂಧನಗಳ ಬೆಲೆ ಹೆಚ್ಚಳಯಾಗಿದ್ದು, ಗ್ರಾಹಕರಿಗೆ ಗಾಯದ ಮೇಲೆ ತುಪ್ಪ ಸುರಿದಂತಾಗಿದೆ.
ಪೆಟ್ರೋಲ್- ಡೀಸೆಲ್ ದರದ ಪಟ್ಟಿ
ಹಳೆ ದರ | ಹೊಸ ದರ | |
ಡೀಸೆಲ್ | 85.01 | 85.80 |
ಗ್ರೀನ್ ಡೀಸೆಲ್ | 88.50 | 89.79 |
ಪೆಟ್ರೋಲ್ | 100.58 | 101.42 |
ಸ್ಪೀಡ್ ಪೆಟ್ರೋಲ್ | 104.99 | 105.83 |