ETV Bharat / state

ಮಕ್ಕಳ ವಿದ್ಯಾಭ್ಯಾಸಕ್ಕೆ ಕೂಡಿಟ್ಟ ಹಣವನ್ನು ಪಿಎಂ ಪರಿಹಾರ ನಿಧಿಗೆ ನೀಡಿದ ಶವ ಸುಡುವ ವ್ಯಕ್ತಿ...!

ಬೆಂಗಳೂರಿನ ಕಲ್ಪಳ್ಳಿಯ ಶವಾಗಾರದಲ್ಲಿ ತಮ್ಮ 10 ನೇ ವಯಸ್ಸಿನಿಂದ ಶವಗಳನ್ನು ಸುಡುವ ಕಾಯಕ ಮಾಡುತ್ತಿರುವ ಆಂತೋನಿ ಸ್ವಾಮಿ ಎಂಬುವವರು ಕೊರೊನಾ ಪೀಡಿತರಿಗೆ ನೆರವಾಗಲೆಂದು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಕೂಡಿಟ್ಟಿದ್ದ 60 ಸಾವಿರ ರೂಪಾಯಿ ಹಣವನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೀಡಿದ್ಧಾರೆ.

Antony swamy
ಆಂತೋನಿ ಸ್ವಾಮಿ
author img

By

Published : Apr 11, 2020, 6:44 PM IST

ಬೆಂಗಳೂರು: ನೈಸರ್ಗಿಕ ವಿಕೋಪ, ದೇಶಕ್ಕೆ ಕಷ್ಟಕರ ಪರಿಸ್ಥಿತಿ ಬಂದಾಗ ಸಾಮಾನ್ಯವಾಗಿ ಸೆಲಬ್ರಿಟಿಗಳು ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಲಕ್ಷಗಟ್ಟಲೆ, ಕೋಟಿಗಟ್ಟಲೆ ಹಣ ಸಹಾಯ ಮಾಡುತ್ತಾರೆ. ಆದರೆ ರುದ್ರಭೂಮಿಯಲ್ಲಿ ಶವಗಳನ್ನು ಸುಡುವ ಕಾಯಕ ಮಾಡುತ್ತಿರುವ ವ್ಯಕ್ತಿಯೊಬ್ಬರು ತಾವು ದುಡಿದಿರುವ 60 ಸಾವಿರ ರೂಪಾಯಿ ಹಣವನ್ನು ಪಿಎಂ ಪರಿಹಾರ ನಿಧಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಪಿಎಂ ಪರಿಹಾರ ನಿಧಿಗೆ ಹಣ ನೀಡಿದ ಆಂತೋನಿ ಸ್ವಾಮಿ

ಎಲ್ಲವೂ ತನಗೇ ಬೇಕು ಎಂದು ಆಸೆ ಪಡುವ ಜನರ ನಡುವೆ ಶವಗಳನ್ನು ಸುಡುವ ಮೂಲಕ ತಾವು ಕಷ್ಟ ಪಟ್ಟು ಸಂಪಾದಿಸಿದ ಹಣವನ್ನು ಈ ವ್ಯಕ್ತಿ ಕೊರೊನಾ ರೋಗಿಗಳ ಸೇವೆಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬೆಂಗಳೂರಿನ ಅತಿದೊಡ್ಡ ಸ್ಮಶಾನ ಎನಿಸಿಕೊಂಡಿರುವ ಕಲ್ಪಳ್ಳಿಯಲ್ಲಿ ಕಳೆದ 32 ವರ್ಷಗಳಿಂದ ಶವಗಳನ್ನು ಸುಡುವ ಕಾಯಕ ಮಾಡುತ್ತಿರುವ ಆಂತೋನಿ ಸ್ವಾಮಿ ಎಂಬುವವರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೂಡಿಟ್ಟ ಹಣವನ್ನು ಪಿಎಂ ಪರಿಹಾರ ನಿಧಿಗೆ ನೀಡಿದ್ದಾರೆ. ಶವಗಳನ್ನು ಸುಡುವ ಇವರ ಕಾರ್ಯಕ್ಕೆ ಸರ್ಕಾರ ತಿಂಗಳಿಗೆ 10 ಸಾವಿರ ರೂಪಾಯಿ ಗೌರವ ಧನ ನೀಡುತ್ತಿದೆ. ಈ ಹಣದಲ್ಲಿ ತಾಯಿ, ಪತ್ನಿ ಹಾಗೂ ನಾಲ್ಕು ಮಕ್ಕಳನ್ನು ಸಾಕುತ್ತಿರುವ ಆಂತೋನಿ ಸ್ವಾಮಿ ಈ ಎಲ್ಲಾ ಖರ್ಚಿನೊಂದಿಗೆ ಸ್ವಲ್ಫ ಹಣವನ್ನು ಉಳಿತಾಯ ಮಾಡಿಕೊಂಡು ಬಂದಿದ್ದರು.

ಆಂತೋನಿ ಸ್ವಾಮಿ ಅವರ ಇಬ್ಬರು ಹೆಣ್ಣು ಮಕ್ಕಳು ಪಿಯುಸಿ, ಒಬ್ಬರು 9 ನೇ ತರಗತಿ, ಒಬ್ಬ ಮಗ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ತನ್ನ ಹಿರಿಯ ಮಗಳ ಮುಂದಿನ ಶೈಕ್ಷಣಿಕ ವರ್ಷದ ವೆಚ್ಚಕ್ಕಾಗಿ ಶುಲ್ಕ ಭರಿಸಲು ಆಂತೋನಿ ಸ್ವಾಮಿ 60 ಸಾವಿರ ರೂಪಾಯಿ ಹಣವನ್ನು ಕೂಡಿಸಿಟ್ಟಿದ್ದರು. ಆದರೆ ಈಗ ದೇಶ ಸಂಕಷ್ಟದಲ್ಲಿದ್ದು ಕೊರೊನಾ ಪೀಡಿತರಿಗಾಗಿ ಏನಾದರೂ ಸಹಾಯ ಮಾಡಬೇಕೆಂಬ ಮನಸ್ಸಿನಿಂದ ಈಗ ಹಣ ದಾನ ಮಾಡಿದ್ಧಾರೆ. ಒಂದನೆ ತರಗತಿ ಮಾತ್ರ ಓದಿರುವ ಆಂತೋನಿ ಸ್ವಾಮಿ, ತಮ್ಮ ತಂದೆ ಸತ್ತ ನಂತರ ಅವರಿಂದ ಬಂದ ಕಸುಬಾದ ಶವಗಳನ್ನು ಸುಡುವ ಕಾರ್ಯ ಮಾಡುತ್ತಿದ್ಧಾರೆ. ಆದರೆ ತಮ್ಮ ಮಕ್ಕಳು ವಿದ್ಯಾವಂತರಾಗಬೇಕೆಂಬುದು ಅವರ ಆಸೆ.

ಆಂತೋನಿ ಸ್ವಾಮಿ ಪ್ರತಿನಿತ್ಯ ಕಲ್ಪಳ್ಳಿ ಶವಗಾರಕ್ಕೆ ಬರುವ 3-4 ಶವಗಳನ್ನು ಸುಡುತ್ತಾರೆ. ಸಾವಿರಾರು ಅನಾಥ ಶವಗಳಿಗೆ ಮುಕ್ತಿ ಕಲ್ಪಿಸಿರುವ ಇವರು ಕೆಲವೊಮ್ಮೆ ತಮ್ಮ ಕುಟುಂಬದ ಸಹಾಯದೊಂದಿಗೆ ಅನಾಥ ಶವಗಳಿಗೆ ಸಂಸ್ಕಾರ, ವಿಧಿ ವಿಧಾನಗಳನ್ನು ನೆರವೇರಿಸುತ್ತಾರೆ. ತಮ್ಮ ಮಕ್ಕಳು ಕುಟುಂಬದವರನ್ನು ಇಲ್ಲಿಯವರೆಗೆ ಯಾವುದೇ ದೇವಸ್ಥಾನ ಹಾಗೂ ಪ್ರವಾಸಿ ಸ್ಥಳಗಳಿಗೆ ಕರೆದುಕೊಂಡು ಹೋಗಲು ಸಾಧ್ಯವಾಗಿಲ್ಲ. ನಾವು ಶವಗಳಲ್ಲೇ ದೇವರನ್ನು ಕಾಣುತ್ತಿದ್ದೇವೆ ಎನ್ನುತ್ತಾರೆ ಇವರು. ಸರ್ಕಾರದಿಂದ ತಮಗೆ ಬರುತ್ತಿರುವ 10 ಸಾವಿರ ಗೌರವಧನದಲ್ಲಿ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ತಮ್ಮ ತಾಯಿಯ ಔಷಧಿ ಖರ್ಚು, ವಾಸಿಸುವ ಮನೆ ಬಾಡಿಗೆಗೆ 5 ಸಾವಿರ ರೂಪಾಯಿ ವ್ಯಯಿಸುತ್ತಾರೆ.

2 ವರ್ಷಗಳ ಹಿಂದೆ ರಾಜ್ಯದಲ್ಲಿ ಉಂಟಾಗಿದ್ದ ನೆರೆ ಹಾವಳಿ ಸಮಯದಲ್ಲಿ ನೆರೆ ಸಂತ್ರಸ್ತರಿಗಾಗಿ ಔಷಧಗಳನ್ನು ಖರೀದಿಸಿ ಸಹಾಯ ಹಸ್ತ ಚಾಚಿದ್ದರು. ಮಕ್ಕಳ ವಿದ್ಯಾಭ್ಯಾಸ ನಿಂತರೆ ಮುಂದಿನ ವರ್ಷ ಮುಂದುವರೆಸಬಹುದು. ಆದರೆ ದೇಶ ತೊಂದರೆಯಲ್ಲಿದ್ದಾಗ ಕೂಡಲೇ ನೆರವು ನೀಡಬೇಕು, ಎಂದು ಹೇಳುವ ಆಂತೋನಿ ಸ್ವಾಮಿಗೆ ಒಮ್ಮೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಆಸೆಯಂತೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.