ಬೆಂಗಳೂರು : ನಗರದಲ್ಲಿ ಮಳೆರಾಯನ ಆರ್ಭಟದಿಂದ ಸಿಲಿಕಾನ್ ಸಿಟಿ ಮಂದಿ ತತ್ತರಿಸಿದ್ದಾರೆ. ಅದ್ರಲ್ಲೂ ಭಾರಿ ಗುಡುಗು ಸಹಿತ ಮಳೆರಾಯನ ಆರ್ಭಟ ಜೋರಾಗಿದೆ. ನಗರದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬ ಸಾವನಪ್ಪಿದ್ದರೆ, ಮತ್ತೊಬ್ಬ ಗಾಯಗೊಂಡ ಘಟನೆ ನೈಸ್ ರೋಡ್‌ನಲ್ಲಿ ನಡೆದಿದೆ.
ತಿಪ್ಪೇಸ್ವಾಮಿ ಎಂಬುವರು (46) ಮೃತ ವ್ಯಕ್ತಿ. ತಿಪ್ಪೇಸ್ವಾಮಿ ಮಗ ಚಿದಾನಂದನಿಗೂ ಸಿಡಲು ತಾಗಿದೆ. ಆದರೆ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಚಿದಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಂದೆ, ಮಗ ಚಿಕ್ಕಗೊಲ್ಲರಹಟ್ಟಿಯಲ್ಲಿರುವ ಸಂಬಂಧಿಕರ ಮನೆಗೆ ಹೋಗಿ ವಾಪಸ್ ಟಿ.ದಾಸರಹಳ್ಳಿಯಲ್ಲಿರುವ ತಮ್ಮ ಮನೆಗೆ ಬರುತ್ತಿರುವಾಗ ಈ ಘಟನೆ ನಡೆದಿದೆ. ತಂದೆ-ಮಗ ಮಳೆ ಬಂದ ಕಾರಣ ನೈಸ್ ರೋಡ್‌ನಲ್ಲಿರುವ ಮರದ ಕೆಳಗೆ ನಿಂತಿದ್ದರು. ಈ ಸಂದರ್ಭದಲ್ಲಿ ಸಿಡಿಲು ಬಡಿದಿದೆ. ಇವರು ಮೂಲತಃ ತುಮಕೂರಿನವರು. ಬೆಂಗಳೂರಿನಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ರು.
ಕಳೆದ ಹಲವು ದಿನಗಳಿಂದ ಚಂಡ ಮಾರುತದಿಂದಾಗಿ ನಗರದಲ್ಲಿ ದಿನವಿಡೀ ಮಳೆ ಸುರಿಯುತ್ತಿದೆ. ಇನ್ನು, ಮಳೆಯಷ್ಟೆ ಅಲ್ಲ ಗುಡುಗು, ಮಿಂಚು ಸಹಿತ ಮಳೆಯ ಅಬ್ಬರಿಸುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ಹಾಗೂ ನಗರದ ಬಹುತೇಕ ಪ್ರದೇಶಗಳಲ್ಲಿ ಹವಮಾನ ಇಲಾಖೆಯಿಂದ ಯಲ್ಲೋ ಅಲರ್ಟ್ ನೀಡಲಾಗಿದೆ.