ETV Bharat / state

ಬಳ್ಳಾರಿಗೆ ’ಗಾಲಿ’ ಹೋಗಬಹುದು: ಜನಾರ್ದನ ರೆಡ್ಡಿಗೆ ಕೊನೆಗೂ ಸಿಕ್ತು ಸುಪ್ರೀಂ ಪರ್ಮಿಷನ್​..! - ಸುಪ್ರೀಂಕೋರ್ಟ್

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್​ನಿಂದ​​ ಸ್ವಲ್ಪ ರಿಲೀಫ್​ ಸಿಕ್ಕಿದೆ. ಬಳ್ಳಾರಿ, ಆಂಧ್ರಪ್ರದೇಶದ ಕಡಪ, ಅನಂತಪುರಕ್ಕೆ ಹೋಗಲು ಅನುಮತಿ ನೀಡಿರುವ ನ್ಯಾಯಾಲಯ ಕೆಲವು ಷರತ್ತುಗಳನ್ನೂ ವಿಧಿಸಿದೆ.

Permission for Janardhan Reddy for go to Bellary

author img

By

Published : Aug 19, 2021, 4:10 PM IST

Updated : Aug 19, 2021, 4:50 PM IST

ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ಹೋಗಲು ಕೊನೆಗೂ ಸುಪ್ರೀಂಕೋರ್ಟ್​ ಅನುಮತಿ ನೀಡಿದೆ. ಆದರೆ ಬಳ್ಳಾರಿಗೆ ಹೋಗಲು ನ್ಯಾಯಾಲಯ ಕೆಲವು ಷರತ್ತುಗಳನ್ನು ವಿಧಿಸಿದೆ. ಆಂಧ್ರಪ್ರದೇಶದ ಕಡಪ ಮತ್ತು ಅನಂತಪುರಕ್ಕೂ ಹೋಗಲು ಸುಪ್ರೀಂಕೋರ್ಟ್​​ ಪರ್ಮಿಷನ್​ ಕೊಟ್ಟಿದೆ.

ಆದರೆ ಯಾವಾಗ ಹೋಗುತ್ತೇನೆ ಎಂದು ಮೊದಲೇ ಅಲ್ಲಿನ ಎಸ್​​ಪಿಗೆ ಮಾಹಿತಿ ನೀಡಬೇಕು. ಹಾಗೆಯೇ ಅಲ್ಲಿಂದ ವಾಪಸ್​ ಬರುವಾಗಲೂ ಕೂಡ ಎಸ್​​ಪಿಗೆ ಮಾಹಿತಿ ನೀಡಬೇಕು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ. ಈ ಮೂಲಕ ರೆಡ್ಡಿ ಅವರಿಗೆ ಈ ಮೊದಲು ವಿಧಿಸಿದ್ದ ಜಾಮೀನು ಷರತ್ತುಗಳನ್ನು ಸುಪ್ರೀಂಕೋರ್ಟ್​​ ಸಡಿಲಗೊಳಿಸಿದೆ.

ಜಾಮೀನು ಷರತ್ತುಗಳನ್ನು ಸಡಿಲಗೊಳಿಸುವಂತೆ ಕೋರಿ ಸುಪ್ರೀಂಗೆ ಅವರು ಅರ್ಜಿ ಸಲ್ಲಿಸಿದ್ದರು. ಈ ತಿಂಗಳ 13 ರಂದು ಈ ಸಂಬಂಧ ವಿಚಾರಣೆ ನಡೆಸಲಾಗಿತ್ತು. ಆ ವೇಳೆ ಸಿಬಿಐ, ಯಾವುದೇ ಕಾರಣಕ್ಕೂ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿಗೆ ಭೇಟಿ ನೀಡಲು ಅವಕಾಶ ಕೊಡಬಾರದೆಂದು ವಾದಿಸಿತ್ತು.

ಒಂದು ವೇಳೆ ಜನಾರ್ದನ ರೆಡ್ಡಿಗೆ ಬಳ್ಳಾರಿ ಪ್ರವೇಶಕ್ಕೆ ಅನುಮತಿ ಕೊಟ್ಟರೆ ಸಾಕ್ಷ್ಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಅಲ್ಲದೆ, ಸಾಕ್ಷಿದಾರರಿಗೂ ತೊಂದರೆಯಾಗುವ ಸಾಧ್ಯತೆಯಿದೆ ಎಂದು ಸುಪ್ರೀಂಕೋರ್ಟ್​ಗೆ ಸಿಬಿಐ ತಿಳಿಸಿತ್ತು. ಕೆಲ ದಿನಗಳ ಹಿಂದಷ್ಟೇ, ಬಳ್ಳಾರಿಗೆ ಎಂಟು ವಾರಗಳ ಕಾಲ ಪ್ರವೇಶ ಅನುಮತಿ ಕೋರಿ ಗಾಲಿ ಜನಾರ್ದನ ರೆಡ್ಡಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಆ ಸಂಬಂಧ ಸಿಬಿಐ ಪರ ವಾದ ಮಂಡಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಮಾಧ್ವಿ ದಿವಾನ್, ಆರೋಪಿ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆಯಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ. ಯಾವುದೇ ಕಾರಣಕ್ಕೂ ಅವರಿಗೆ ಬಳ್ಳಾರಿಗೆ ತೆರಳಲು ಅನುಮತಿ ನೀಡಬಾರದು, ಜತೆಗೆ ಜಾಮೀನು ಷರತ್ತುಗಳನ್ನು ಸಡಿಲಗೊಳಿಸಬಾರದು. ಒಂದು ವೇಳೆ ಅವರನ್ನು ಬಳ್ಳಾರಿಗೆ ತೆರಳಲು ಅವಕಾಶ ನೀಡಿದರೆ, ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಸುಪ್ರೀಂ ಗಮನಕ್ಕೆ ತಂದಿದ್ದರು.

Last Updated : Aug 19, 2021, 4:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.