ETV Bharat / state

'ಇ-ಎಪಿಕ್​ ಕಾರ್ಡ್​ ಮತದಾನ ಹೊರತು ಬೇರಾವುದಕ್ಕೂ ಬಳಸುವಂತಿಲ್ಲ'

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಮೂಲಭೂತ ಹಕ್ಕಾದ ಮತದಾನ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಜನರೇ ಚುನಾಯಿಸಿದ ಸರ್ಕಾರದ ಪ್ರತಿನಿಧಿಗಳು ಜನರ ಆಶೋತ್ತರಗಳನ್ನು ಈಡೇರಿಸಲು ಬದ್ದವಾಗಿರಬೇಕೆಂಬುದು ಸಂವಿಧಾನದ ಆಶಯವಾಗಿದೆ...

sanjeev-kumar
ಮುಖ್ಯ ಚುನಾವಣಾಧಿಕಾರಿ ಡಾ. ಸಂಜೀವ್ ಕುಮಾರ್
author img

By

Published : Jan 25, 2021, 5:04 PM IST

ಬೆಂಗಳೂರು: ದೇಶಾದ್ಯಂತ ಇಂದು ಮತದಾರರ ದಿನಾಚರಣೆ ಆಚರಿಸಲಾಗುತ್ತಿದೆ. ಮತದಾರರಲ್ಲಿ‌ ಚುನಾವಣೆ ಹಾಗೂ ಅದರ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತಿದೆ ಎಂದು ಮುಖ್ಯ ಚುನಾವಣಾಧಿಕಾರಿ ಡಾ. ಸಂಜೀವ್ ಕುಮಾರ್ ತಿಳಿಸಿದ್ದಾರೆ.

ನಗರದ ಟೌನ್‌ಹಾಲ್‌ನಲ್ಲಿ 11ನೇ ರಾಷ್ಟ್ರೀಯ ಮತದಾರರ ದಿನಾಚರಣೆ-2021ಯನ್ನು ಆಚರಿಸಲಾಯಿತು. ಕಾರ್ಯಕ್ರಮದ ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಈ ಬಾರಿ 5 ಲಕ್ಷ ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಈಗ ರಾಜ್ಯದಲ್ಲಿ ಒಟ್ಟಾರೆ 5.21 ಕೋಟಿ ಮತದಾರರಿದ್ದಾರೆ. 80 ವರ್ಷ ದಾಟಿದ ಮತದಾರರಿಗೆ ಪೋಸ್ಟಲ್ ಬ್ಯಾಲೆಟ್ ವ್ಯವಸ್ಥೆ ಮಾಡಲಾಗಿದೆ. ಚುನಾವಣೆಯಲ್ಲಿ ಹೆಚ್ಚು ಮತದಾನವಾಗಲು ರಾಜ್ಯ ಚುನಾವಣಾ ಆಯೋಗ ಅಗತ್ಯ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಮತದಾರರ ದಿನಾಚರಣೆ ಕುರಿತು ಮುಖ್ಯ ಚುನಾವಣಾಧಿಕಾರಿ ಡಾ. ಸಂಜೀವ್ ಕುಮಾರ್ ಮಾತನಾಡಿದ್ದಾರೆ.

ಚುನಾವಣಾ ಆಯೋಗ ನೀಡುವ ಡಿಜಿಟಲ್ ಗುರುತಿನ ಚೀಟಿ (ಇ-ಎಪಿಕ್) ಕಾರ್ಡ್ ಮತದಾನ ಮಾಡಲು ಮಾತ್ರ ಸೀಮಿತವಾಗಿದ್ದು, ಮತ್ತಾವುದೇ ಬಳಕೆಗೆ ಉಪಯೋಗಿಸುವುದು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲ್ಪಡುತ್ತದೆ. ಇ-ಎಪಿಕ್ ಕಾರ್ಡ್‍ನ್ನು ಅಧಿಕೃತ ದಾಖಲೆಯಾಗಿ ಸ್ವೀಕರಿಸುತ್ತಿರುವ ಹಿನ್ನೆಲೆ ಇದರ ಹೆಸರಿನಲ್ಲೂ ವಂಚನೆಯ ಜಾಲ ತಲೆಯೆತ್ತುತ್ತಿದೆ. ಮತದಾನವನ್ನು ಹೊರತುಪಡಿಸಿ ಬೇರೆ ಯಾವ ಸ್ಥಳದಲ್ಲೂ ಇದನ್ನು ಅಧಿಕೃತ ದಾಖಲೆಯಾಗಿ ಮಾನ್ಯ ಮಾಡುವವರ ಬಗ್ಗೆ ದೂರುಗಳನ್ನು ಆಯೋಗ ಗಂಭೀರವಾಗಿ ಪರಿಗಣಿಸಲಿದೆ ಎಂದು ಎಚ್ಚರಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಮೂಲಭೂತ ಹಕ್ಕಾದ ಮತದಾನ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಜನರೇ ಚುನಾಯಿಸಿದ ಸರ್ಕಾರದ ಪ್ರತಿನಿಧಿಗಳು ಜನರ ಆಶೋತ್ತರಗಳನ್ನು ಈಡೇರಿಸಲು ಬದ್ದವಾಗಿರಬೇಕೆಂದು ಸಂವಿಧಾನದ ಆಶಯವಾಗಿದೆ. ಸಂವಿಧಾನದ ಅರಿವು, ಪ್ರಜೆಗಳ ಹೊಣೆಗಾರಿಕೆ ಮತ್ತು ಮತದಾನದ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, 18 ವರ್ಷ ತುಂಬಿದ ಪ್ರತಿಯೊಬ್ಬರನ್ನೂ ಮತದಾರರ ಪಟ್ಟಿಗೆ ಸೇರಿಸುವುದು ಆಯೋಗದ ಗುರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಮಾತನಾಡಿ, ಕಳೆದ ವಿಧಾನಸಭೆ, ಲೋಕಸಭಾ ಚುನಾವಣೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 50 ಸಾವಿರ ಸಿಬ್ಬಂದಿ ತೊಡಗಿಕೊಂಡಿದ್ದರು. ನಗರದಲ್ಲಿ 1.30 ಕೋಟಿ ಜನಸಂಖ್ಯೆಯಲ್ಲಿ 90.33 ಲಕ್ಷ ಮತದಾರರಿದ್ದಾರೆ. ಕೋವಿಡ್ ಸಂದರ್ಭದಲ್ಲೂ ಹೆಚ್ಚು ಎಚ್ಚರಿಕೆ ವಹಿಸಿದ ಪರಿಣಾಮ, ರಾಜರಾಜೇಶ್ವರಿನಗರ ವಿಧಾನಸಭೆಯ ಉಪಚುನಾವಣೆ ನಡೆಸಲು ಸಾಧ್ಯವಾಯಿತು‌ ಎಂದು ತಿಳಿಸಿದರು.

ಓದಿ: ಎಫ್​​ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಇಬ್ಬರು ಕಿಂಗ್​​ಪಿನ್​​ಗಳು ಅಂದರ್

ಕೇಂದ್ರ ಚುನಾವಣಾ ಆಯೋಗ ಸೋಮವಾರದಿಂದ ಇ-ಎಪಿಕ್ ಕಾರ್ಡ್‍ನ ಮೊಬೈಲ್ ಡಿಜಿಟಲ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಕಳೆದ ವರ್ಷ ನವೆಂಬರ್, ಡಿಸೆಂಬರ್​ನಲ್ಲಿ ಚುನಾವಣಾ ಗುರುತಿನ ಚೀಟಿ ಪಡೆಯಲು ಫಾರ್ಮ್-6 ಅರ್ಜಿ ಸಲ್ಲಿಸಿರುವವರು ಫೆ.1 ರಿಂದ ಡಿಜಿಟಲ್ ವೋಟರ್ ಐಡಿ ಪಡೆಯಬಹುದಾಗಿದೆ. ಆಯೋಗದ ವೆಬ್‍ಸೈಟ್ ಹಾಗೂ ಮತದಾರರ ಸಹಾಯವಾಣಿ ಆ್ಯಪ್ ಮೂಲಕ ವೋಟರ್ ಐಡಿಯನ್ನು ಪಿಡಿಎಫ್ ರೂಪದಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದು. ಡಿಜಿಟಲ್ ವೋಟರ್ ಐಡಿಯಲ್ಲಿ ಎರಡು ಕ್ಯುಆರ್ ಕೋಡ್‍ಗಳನ್ನು ಸಹ ಅಳವಡಿಸಲಾಗಿದ್ದು, ಎರಡರಲ್ಲೂ ಮತದಾರರಿಗೆ ಸಂಬಂಧಿಸಿದ ಮಾಹಿತಿಗಳು ದೊರೆಯಲಿವೆ. ಮುಂದೆ ನಡೆಯಲಿರುವ ಐದು ರಾಜ್ಯಗಳ ಚುನಾವಣೆಗೆ ಮುನ್ನವೇ ದೇಶಾದ್ಯಂತ ಡಿಜಿಟಲ್ ಎಪಿಕ್ ಕಾರ್ಡ್ ಲಭ್ಯವಿರುವುದಾಗಿ ಚುನಾವಣಾ ಆಯೋಗ ಘೋಷಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.