ETV Bharat / state

ಸಾಮಾಜಿಕ ಅಂತರ ಕಾಯ್ದುಕೊಂಡು ಮಾದರಿಯಾದ ವೃದ್ಧರು!

author img

By

Published : Apr 8, 2020, 4:16 PM IST

ಸರ್ಕಾರದ ಮಾಸಿಕ ಪಿಂಚಣಿ ಪಡೆಯುವ ವೃದ್ಧರು, ವಿಧವೆಯರು, ವಿಕಲಚೇತನರು ಇಂದು ಹಣ ಪಡೆಯಲೆಂದು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಬೆಂಗಳೂರಿನ ಹಲವು ಪೋಸ್ಟ್​ ಆಫೀಸ್​ ಹಾಗೂ ಬ್ಯಾಂಕ್​ಗಳ​ ಮುಂದೆ ಕಂಡು ಬಂದಿತು.

People who rushed to the post offic
ಪಿಂಚಣಿ ಪಡೆಯಲು ಅಂಚೆ ಕಚೇರಿಯತ್ತ ಮುಗಿಬಿದ್ದ ಜನರು

ಬೆಂಗಳೂರು: ನಗರದ ವಿವಿಧ ಕಡೆಗಳಲ್ಲಿ ಪಿಂಚಣಿ ಹಾಗೂ ಜನ್​ಧನ್ ಖಾತೆಯಲ್ಲಿರುವ ಹಣ ಪಡದುಕೊಳ್ಳಲು ಭಾರಿ ಸಂಖ್ಯೆಯಲ್ಲಿ ಜನ ಪೋಸ್ಟ್ ಆಫೀಸ್ ಹಾಗೂ ಬ್ಯಾಂಕ್​ಗಳತ್ತ ಆಗಮಿಸಿ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯಗಳು ಕಂಡು ಬಂದವು.

ಬನಶಂಕರಿ ಮೊದಲನೇ ಹಂತದ ಪೋಸ್ಟ್ ಆಫೀಸ್​ ಸೇರಿದಂತೆ, ನಗರದ ವಿವಿಧೆಡೆ ನಾಗರಿಕರು ಗುಂಪುಗೂಡಿದ್ದು ಗೋಚರಿಸಿತು. ಸರ್ಕಾರದ ವತಿಯಿಂದ ಸಿಗುವ ಸೌಲಭ್ಯ ವಿತರಣೆ ಪಡೆಯುವವರು ಒಂದೆಡೆ ಇದ್ದರೆ, ಇನ್ನೊಂದೆಡೆ ಕೇಂದ್ರ ಸರ್ಕಾರ ಜನ್​​ಧನ್ ಖಾತೆ ಹೊಂದಿದವರಿಗೆ ತಲಾ 500 ರೂ. ಮೊತ್ತವನ್ನು ಖಾತೆಗೆ ಜಮಾ ಮಾಡಿದೆ. ಇದನ್ನು ಕೂಡ ತೆಗೆದುಕೊಳ್ಳಲು ಜನ ಆತುರಾತುರವಾಗಿ ಬ್ಯಾಂಕ್ ಹಾಗೂ ಪೋಸ್ಟ್​ ಆಫೀಸ್​ಗಳತ್ತ ಧಾವಿಸಿದ್ದು ಕಂಡು ಬಂತು.

ಸರ್ಕಾರದ ಮಾಸಿಕ ಪಿಂಚಣಿ ಪಡೆಯುವ ವೃದ್ಧರು, ವಿಧವೆಯರು, ವಿಕಲಚೇತನರು ಕೂಡ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಸರತಿ ಸಾಲಿನಲ್ಲಿ ನಿಲ್ಲುವ ಮೂಲಕ ಇತರರಿಗೆ ಮಾದರಿಯಾದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.