ETV Bharat / state

ಜಾಗದ ಹಕ್ಕುಪತ್ರ ಬೇರೆಯವರಿಗೆ ವಿತರಣೆ; ನ್ಯಾಯಕ್ಕಾಗಿ ಮೂಲ ಹಕ್ಕುಪತ್ರದಾರರಿಂದ ಆಕ್ರೋಶ - ಮೇಡಿ ಅಗ್ರಹಾರ ಗ್ರಾಮ

ಯಲಹಂಕ ತಾಲೂಕಿನ ಮೇಡಿ ಅಗ್ರಹಾರ ಗ್ರಾಮದಲ್ಲಿ ತಮ್ಮ ವಾಸಸ್ಥಳದ ಹಕ್ಕುಪತ್ರವನ್ನು ಅಧಿಕಾರಿಗಳು ಬೇರೆಯವರಿಗೆ ವಿತರಿಸಿದ್ದಾರೆ ಎಂದು ಜನರು ದೂರಿದ್ದಾರೆ.

ಯಲಹಂಕ ತಾಲೂಕಿನ ಮೇಡಿ ಅಗ್ರಹಾರ
ಯಲಹಂಕ ತಾಲೂಕಿನ ಮೇಡಿ ಅಗ್ರಹಾರ
author img

By

Published : Aug 11, 2023, 6:17 PM IST

ಜಾಗದ ಹಕ್ಕುಪತ್ರ ಬೇರೆಯವರಿಗೆ ವಿತರಣೆ ಆರೋಪ- ಪ್ರತಿಕ್ರಿಯೆಗಳು

ಯಲಹಂಕ (ಬೆಂಗಳೂರು) : ದಶಕಗಳಿಂದ ವಾಸವಿದ್ದ ಜನರ ಜಾಗದ ಹಕ್ಕುಪತ್ರವನ್ನು ಅಧಿಕಾರಿಗಳು ಮತ್ತೊಬ್ಬರಿಗೆ ವಿತರಿಸಿರುವ ಆರೋಪ ಯಲಹಂಕ ತಾಲೂಕಿನ ಮೇಡಿ ಅಗ್ರಹಾರ ಗ್ರಾಮದಲ್ಲಿ ಕೇಳಿಬಂದಿದೆ. 2006ರಲ್ಲಿ ಮನೆಯಿಲ್ಲದ ಬಡ ಜನರಿಗೆ ಅಂದಿನ ಸರ್ಕಾರ ಮೇಡಿ ಅಗ್ರಹಾರ ಗ್ರಾಮದಲ್ಲಿ 150ಕ್ಕೂ ಹೆಚ್ಚು ಸೈಟ್​ಗಳ ಹಕ್ಕುಪತ್ರ ವಿತರಣೆ ಮಾಡಿತ್ತು. ಅದರಲ್ಲಿಯೇ ಕೆಲವರು ಮನೆಗಳನ್ನೂ ಕೂಡಾ ಕಟ್ಟಿಕೊಂಡಿದ್ದರು. ಆದರೆ, ದಶಕದಿಂದ ವಾಸಿಸುತ್ತಿರುವ ನಿವಾಸಿಗಳ ಮನೆ ಹಾಗೂ ಸೈಟನ್ನು ಅಧಿಕಾರಿಗಳು ಬೇರೆಯವರ ಹೆಸರಿಗೆ ಮಂಜೂರು ಮಾಡಿದ್ದಾರೆ ಎನ್ನುವುದು ನಿವಾಸಿಗಳ ದೂರು.

2006ರಿಂದ ವಾಸವಿದ್ದ ಜಾಗಕ್ಕೆ 12 ಸಾವಿರ ರೂ ಕಟ್ಟಿ ಹಕ್ಕುಪತ್ರ ಪಡೆದಿದ್ದೇವೆ. ಇದೀಗ ಈ ಜಾಗದ ಹಕ್ಕುಪತ್ರವನ್ನು ತಹಶೀಲ್ದಾರ್​ ಮತ್ತೊಬ್ಬರಿಗೆ ನೀಡಿದ್ದಾರೆ. ಹೀಗಾಗಿ, ಕಟ್ಟಿರುವ ಮನೆ ಹಾಗೂ ಸೈಟ್ ‌ನಮ್ಮದು. ನಮಗೆ ನ್ಯಾಯ ಕೊಡಿಸಬೇಕೆಂದು ಹಕ್ಕುಪತ್ರ ಪಡೆದವರು ತಾಲೂಕು ಕಚೇರಿ ಎದುರು ಆಗಮಿಸಿ ಆಕ್ರೋಶ ಹೊರಹಾಕಿದರು.

''ಈ ಜಾಗ ಕಾಡಿನಂತಿತ್ತು. ವಾಸಿಸಲು ಯೋಗ್ಯವಾಗಿರಲಿಲ್ಲ. ಎರಡು ವರ್ಷದಲ್ಲಿ ನೀವು ಮನೆ ಕಟ್ಟಿ ಎಂದು ಹೇಳಿರಲಿಲ್ಲ. ಹದಿನೈದು ವರ್ಷ ಪರಭಾರೆ ಮಾಡಬಾರದು ಎಂದಿದ್ದರು. ಆದರೀಗ ಆರ್ಡರ್ ಆಗಿದೆ. ನೀವು ಎರಡು ವರ್ಷದಲ್ಲಿ ಮನೆ ಕಟ್ಟಬೇಕಿತ್ತು. ಮನೆಯನ್ನೂ ಕಟ್ಟಿಲ್ಲ, ಏನೂ ಇಲ್ಲ ಎಂದಿದ್ದಾರೆ. ನಾವು ಗ್ರಾಮಪಂಚಾಯತಿಗೆ ಮೂಲಸೌಕರ್ಯ ಕಲ್ಪಿಸುವಂತೆ ಅರ್ಜಿ ಸಲ್ಲಿಸಿದ್ದೆವು. 2017ರಲ್ಲಿ ಸುಮಾರು 50 ಜನ ಮನೆ ಕಟ್ಟಲು ಹೋದಾಗ, ಇಲ್ಲಿ ಶಿವರಾಮ ಕಾರಂತ ಬಡಾವಣೆ ಆಗಿದೆ. ನೀವು ಮನೆಕಟ್ಟಲು ಆಗಲ್ಲ. ಕೇಸ್​ ಆಗುತ್ತೆ ಎಂದು ಗ್ರಾಮಪಂಚಾಯ್ತಿ, ತಹಶೀಲ್ದಾರ್​ ಸೇರಿದಂತೆ ಎಲ್ಲರೂ ಭಯಪಡಿಸಿ ಓಡಿಸಿದ್ದರು. ಆದರೀಗ, ಎಲ್ಲರೂ ಸರ್ಕಾರಿ ಕೆಲಸದಲ್ಲಿದ್ದಾರೆ. ಮನೆ ಕಟ್ಟಿಕೊಂಡಿದ್ದಾರೆ. ಆದರೆ, ಖಾತೆ ಮಾಡಿಸಿಕೊಂಡಿಲ್ಲ ಎಂದು ಸುಳ್ಳು ದಾಖಲೆಗಳನ್ನು ಸೃಷ್ಠಿ ಮಾಡಿಕೊಂಡು ಡಿಸಿಯವರ ಗಮನಕ್ಕೆ ತಂದಿದ್ದಾರೆ. ಡಿಸಿ ಕಡೆಯಿಂದ ಕ್ಯಾನ್ಸಲ್ ಮಾಡಿಸಿ, ಇಡೀ 185 ಜನರಿಗೂ ಅನ್ಯಾಯ ಮಾಡಿದ್ದಾರೆ. ಮೂಲಹಕ್ಕು ಪತ್ರದಾರರಿಗೆ ಅನ್ಯಾಯವಾಗಿದೆ'' ಅಂತಾರೆ ಹಕ್ಕುಪತ್ರ ಪಡೆದಿದ್ದ ನಿವಾಸಿ ರಮೇಶ್​.

''1990ರಲ್ಲಿ ಎಸ್.ಎಂ.ಕೃಷ್ಣ ಅಧಿಕಾರವಧಿಯಲ್ಲಿ ನಮಗೆ ಈ ಸೈಟ್​ ಅಲಾಟ್​ ಆಗಿತ್ತು. ಈಗ ನಾವು ಆ ಜಾಗದಲ್ಲಿ ಮನೆ ಕಟ್ಟಿಸಿಕೊಂಡು ವಾಸವಾಗಿದ್ದೇವೆ. ನಾವೆಲ್ಲರು ದಿನಗೂಲಿಯವರು. ನಮ್ಮ ನೆರಳನ್ನು ನಮಗೆ ಕೊಡಿ" ಎಂದು ಮತ್ತೋರ್ವ ನಿವಾಸಿ ಪೂರ್ವಿ ಹೇಳಿದರು.

ತಹಶೀಲ್ದಾರ್ ಹೇಳಿದ್ದೇನು? : ಹಕ್ಕುಪತ್ರ ಬೇರೆಯವರಿಗೆ ನೀಡಿರುವ ಸಂಬಂಧ ಈಟಿವಿ ಭಾರತ್​​ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಅನಿಲ್, "ಅಂದು ಹಕ್ಕುಪತ್ರವನ್ನು ಅಕ್ರಮವಾಗಿ ಬೇರೆ ಬೇರೆಯವರಿಗೆ ನೀಡಲಾಗಿದೆ ಎಂದು ದಲಿತ ಕ್ರಿಯಾ ಸಮಿತಿ ಸದಸ್ಯರು ದೂರು ನೀಡಿದ್ದರು. ದೂರಿನನ್ವಯ ಪರಿಶೀಲನೆ ಮಾಡಲಾಗಿದೆ. ಅಕ್ರಮವಾಗಿ ಹಕ್ಕುಪತ್ರ ಪಡೆದವರದ್ದು ರದ್ದು ಮಾಡಿ, ಬೇರೆಯವರಿಗೆ ಕೊಡಲಾಗಿದೆ. ಮನೆ ಕಟ್ಟಿರೋರಿಗೆ ಯಾವುದೇ ತೊಂದರೆಯಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಗಂಗಾವತಿ ನಗರದ ಮುಖ್ಯರಸ್ತೆಗಳ ಜಾಗ ಒತ್ತುವರಿ: ಶಾಸಕ ಜಿ. ಜನಾರ್ದನ ರೆಡ್ಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.