ETV Bharat / state

ಆತ ಟಾಯ್ಲೆಟ್​​ಗೆ ಹೋಗಿ ಬರುವಷ್ಟರಲ್ಲಿ ಸೃಷ್ಟಿಯಾಯ್ತು ಬಾಂಬ್ ಕಥೆ, ತಡವಾಗಿದ್ದಕ್ಕೆ ಏನೆಲ್ಲಾ ಅನಾಹುತವಾಯ್ತು! - ಬೆಂಗಳೂರಿನ ರಸ್ತೆಯಲ್ಲಿ ಸೂಟ್​ಕೇಸ್ ಪತ್ತೆ ಪ್ರಕರಣ ಸುದ್ದಿ

ವ್ಯಕ್ತಿಯೋರ್ವ ಟಾಯ್ಲೆಟ್​ಗೆ ಹೋಗುವಾಗ ಶೌಚಾಲಯದ ಹೊರಗಡೆ ಇರಿಸಿಹೋಗಿದ್ದ ಸೂಟ್​ಕೇಸ್​​ ಕಂಡು ಸಾರ್ವಜನಿಕರು ಭಯಭೀತರಾದ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

ಸೂಟ್​ಕೇಸ್​​
author img

By

Published : Nov 4, 2019, 11:24 PM IST

ಬೆಂಗಳೂರು: ಜನನಿಬಿಡ ಪ್ರದೇಶದಲ್ಲಿ ಕಂಡುಬಂದ ಸೂಟ್​ಕೇಸ್​ ಕಂಡು ಜನರು ಆತಂಕಗೊಂಡ ಘಟನೆ ಮಾಗಡಿ ರೋಡ್ ಪೊಲೀಸ್ ಠಾಣೆಯ ಪೊಲೀಸ್ ಚೌಕಿ ಬಳಿ ನಡೆದಿದೆ.

ಅಪರಿಚಿತ ಸೂಟ್​​​ಕೇಸ್ ಕಂಡ ಸಾರ್ವಜನಿಕರು ಬಾಂಬ್ ಇರುವುದೆಂದು ಭಾವಿಸಿ ಆತಂಕಕ್ಕೆ ಒಳಗಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಆಲರ್ಟ್ ಅದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದರು. ಅಲ್ಲದೆ ಶ್ವಾನದಳವೂ ಬಂದು ತಪಾಸಣೆ ನಡೆಸಿತು. ಈ ಬೆಳವಣಿಗೆ ಮಧ್ಯೆ ತಮಿಳುನಾಡು ಮೂಲದ ರವಿ ಎಂಬುವರು ಬಂದು ಪೊಲೀಸರಿಗೆ ಸೂಟ್ ಕೇಸ್ ನನ್ನದು. ಸೂಟ್​​​ಕೇಸ್​​ನಲ್ಲಿ ಬಾಂಬ್ ಹಾಗೂ ಇತರ ಯಾವುದೇ ಅನುಮಾನಾಸ್ಪದ ವಸ್ತು ಇಲ್ಲ ಎಂದಿದ್ದಾನೆ. ಇದನ್ನು ಕೇಳಿದ ಎಲ್ಲರೂ ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.

ಟಾಯ್ಲೆಟ್​​​ಗೆ ಹೋಗಿ ಬರುವಷ್ಟರಲ್ಲಿ ಸೃಷ್ಟಿಯಾಯ್ತು ಬಾಂಬ್ ಕಥೆ:

ತಮಿಳುನಾಡಿನ‌ ಮೂಲದ ರವಿ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದು, ಮಾಗಡಿ ರೋಡ್​​ ಬಳಿ ತೆರಳಿದ್ದ. ಸೂಟ್​​ಕೇಸ್​​ನ್ನು ಪ್ರಸನ್ನ ಥಿಯೇಟರ್ ಮುಂದಿದ್ದ ಪೊಲೀಸ್ ಚೌಕಿ ಬಳಿ ಇಟ್ಟು ಸಮೀಪದಲ್ಲಿರುವ ಸುಲಭ ಶೌಚಾಲಯ ಹೋಗಿದ್ದ. ಆದರೆ ಮರಳಿ ಬರೋದು ತಡವಾಗಿದ್ದರಿಂದ ಇಷ್ಟೆಲ್ಲ ಅವಾಂತರ ಸೃಷ್ಟಿಯಾಗಿತ್ತು.

Intro:Body:ಟಾಯ್ಲೆಟ್ ಗೆ ಹೋಗಿ ಬರುವಷ್ಟರಲ್ಲಿ ಸೃಷ್ಟಿಯಾದ ಒಂದು‌ ಬಾಂಬ್ ಕಥೆ:

ಬೆಂಗಳೂರು: ಸಾವಿರಾರು ಜನರು ಒಡಾಡುವ ನಡು ರಸ್ತೆಯಲ್ಲಿ ಅನಾಮಿಕ ಸೂಟ್ ಕೇಸ್ ಪತ್ತೆಯಾದರೆ ಒಂದು ಕ್ಷಣ ಎಲ್ಲರ ಮನಸ್ಸಲ್ಲಿ ಬರೋದೇ ಬಾಂಬ್ ಇರಬಹುದೇನು ಅಂತಾ..‌ಇಲ್ಲಿ ಆಗಿದ್ದು ಅದೇ.. ದಿನಕ್ಕೆ ಲಕ್ಷಾಂತರ ಜನರು ಒಡಾಡುವ ಪ್ರದೇಶದಲ್ಲಿ ರಸ್ತೆ ಬದಿ ಅನುಮಾಸ್ಪಾದ ಸೂಟ್ ಕೇಸ್ ಪತ್ತೆಯಾಗಿದ್ದರಿಂದ ಕೆಲಕ್ಷಣಗಳ ಅಲ್ಲಿ ಆತಂಕ ಮೋಡ ಕವಿದಿತ್ತು..
ಮಾಗಡಿ ರೋಡ್ ಪೊಲೀಸ್ ಠಾಣೆಯ ಪೊಲೀಸ್ ಚೌಕಿ ಬಳಿ ಇಂದು ಸಂಜೆ ಅಪರಿಚಿತ ಸೂಟ್ ಕೇಸ್ ಪತ್ತೆಯಾಗುತ್ತಿದ್ದಂತೆ ಸಾರ್ವಜನಿಕರು ಬಾಂಬ್ ಇರುವುದೆಂದು ಭಾವಿಸಿ ಆತಂಕಕ್ಕೆ ಒಳಗಾಗಿ ಗಾಬರಿಂದಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಆಲರ್ಟ್ ಅದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ತದ ನಂತರ ಶ್ವಾನದಳಕ್ಕೆ ಮಾಹಿತಿ ನೀಡುತ್ತಿದ್ದಂತೆ ಅವರು ಸಹ ಕೆಲವೇ ನಿಮಿಷಗಳಲ್ಲಿ ಬಂದು ತಪಾಸಣೆ ನಡೆಸಿದರು.
ಈ ಬೆಳವಣಿಗೆ ಮಧ್ಯೆ ತಮಿಳುನಾಡು ಮೂಲದ ರವಿ ಎಂಬುವರು ಬಂದು ಪೊಲೀಸರಿಗೆ ಸೂಟ್ ಕೇಸ್ ನನ್ನದು. ಸೂಟ್ ಕೇಸ್ ನಲ್ಲಿ ಬಾಂಬ್ ಸೇರಿದಂತೆ ಯಾವುದೇ ಅನುಮಾನಾಸ್ಪದ ವಸ್ತುಗಳು ಇಲ್ಲ ಎಂದಿದ್ದಾನೆ.. ಇದನ್ನು ಕೇಳಿದ ಪೊಲೀಸರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ..

ಟಾಯ್ಲೆಟ್ ಗೆ ಹೋಗಿ ಬರುವಷ್ಟರಲ್ಲಿ ಸೃಷ್ಟಿಯಾದ ಬಾಂಬ್ ಕಥೆ

ತಮಿಳುನಾಡಿನ‌ ಮೂಲದ ರವಿ ನಿರುದ್ಯೋಗಿಯಾಗಿದ್ದು ಕೆಲಸ ಸಿಗುವ ಆಶಾಗೋಪುರದಿಂದ ಇಂದು ಬಟ್ಟೆ -ಬರೆ ಸಮೇತ ಮಾಗಡಿ ರೋಡ್ ಗೆ ಬಂದಿದ್ದಾರೆ. ಸೂಟ್ ಕೇಸ್ ಹಿಡಿದು ಪ್ರಸನ್ನ ಥಿಯೇಟರ್ ಮುಂದಿದ್ದ ಪೊಲೀಸ್ ಚೌಕಿ ಬಳಿ ಸೂಟ್ ಕೇಟ್ ಇಟ್ಟು ಸಮೀಪದಲ್ಲಿರುವ ಸುಲಭ ಶೌಚಾಲಯ ಹೋಗಿದ್ದಾನೆ. ಅಲ್ಲಿ ಬಹಳ‌ ಜನ ಇದಿದ್ದರಿಂದ ಮರಳಿ ಬರೋದು ತಡವಾಗಿದ್ದರಿಂದ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಯಿತು ಪೊಲೀಸರ ಮುಂದೆ ಸಮಜಾಯಿಷಿ ನೀಡಿದ್ದಾನೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.