ETV Bharat / state

ಮನೆಯೇ ಮಂತ್ರಾಲಯ.. ಬೆಂಗಳೂರಲ್ಲಿ ಬಹುತೇಕ ಸೋಂಕಿತರಿಗೆ ಹೋಂ ಐಸೋಲೇಷನ್

author img

By

Published : Apr 26, 2021, 5:02 PM IST

ಬೆಂಗಳೂರಿನಲ್ಲಿ ಕೊರೊನಾ 2ನೇ ಅಲೆಯ ಪ್ರಭಾವಕ್ಕೆ ಬೇಸತ್ತಿರುವ ಜನ ಆಸ್ಪತ್ರೆಯ ಬದಲು ಹೋಂ ಐಸೋಲೇಷನ್ ಮೊರೆ ಹೋಗಿದ್ದಾರೆ.

people-going-to-home-isolation-in-bengalore
ಹೋಂ ಐಸೋಲೇಷನ್

ಬೆಂಗಳೂರು: ನಗರದಲ್ಲಿ ಕೊರೊನಾ 2ನೇ ಅಲೆಯ ಪ್ರಭಾವ ಕೈ ಮೀರಿ ಹೋಗಿದೆ. ಈ ನಡುವೆ ಸೋಂಕಿತರಿಗೆ ಅಗತ್ಯ ಚಿಕಿತ್ಸೆ, ಬೆಡ್​ಗಳು ಸಿಗುತ್ತವೆ ಎಂಬ ವಿಶ್ವಾಸವೂ ಕಡಿಮೆಯಾಗಿದೆ. ಒಂದು ವೇಳೆ ಚಿಕಿತ್ಸೆ ಸಿಕ್ಕರೂ ಪ್ರಾಣ ಉಳಿಯುತ್ತದೆ ಎಂಬ ನಂಬಿಕೆಯಂತೂ ಜನರಲ್ಲಿ ಉಳಿದಿಲ್ಲ. ಹೀಗಾಗಿ ನಗರದ ಜನ ಮನೆಯೇ ಮಂತ್ರಾಲಯ ಅಂತ ತಿಳಿದು, ಕಡಿಮೆ ರೋಗ ಲಕ್ಷಣ ಇರುವವರು ಹೋಂ ಐಸೋಲೇಷನ್ ಮೊರೆ ಹೋಗುತ್ತಿದ್ದಾರೆ.‌ ಕಳೆದ 7 ದಿನಗಳ ಅಂಕಿ-ಅಂಶ ನೋಡಿದರೆ ಶೇ. 90 ರಷ್ಟು ಸೋಂಕಿತರು ಆಸ್ಪತ್ರೆ ಬದಲು ಮನೆಯನ್ನೇ ಆಯ್ಕೆ ಮಾಡಿದ್ದಾರೆ.

ವಲಯವಾರು ಹೋಂ ಐಸೋಲೇಷನ್ ಪ್ರಮಾಣ

ವಲಯಸೋಂಕಿತರ ಸಂಖ್ಯೆಶೇಕಡಾವಾರು
ಬೊಮ್ಮನಹಳ್ಳಿ ವಲಯ 16,44595.29%
ದಾಸರಹಳ್ಳಿ ವಲಯ 4,07,19696.88%
ಪೂರ್ವ ವಲಯ 17,05295.34%
ಮಹದೇವಪುರ ವಲಯ 14,01095.86%
ಆರ್ ಆರ್ ನಗರ 9,86192.61%
ದಕ್ಷಿಣ ವಲಯ 17,08194.58%
ಪಶ್ಚಿಮ ವಲಯ 12,849 91.69%
ಯಲಹಂಕ ವಲಯ 9,289 93.89%

ಹೋಂ ಐಸೋಲೇಷನ್ ಮಾನದಂಡಗಳೇನು?

ಮನೆಯಲ್ಲೇ ಪ್ರತ್ಯೇಕ ಕೋಣೆ ಹಾಗೂ ಶೌಚಾಲಯವಿರಬೇಕು.
ಸೋಂಕಿನ ಲಕ್ಷಣ ಕಡಿಮೆ ಇರುವವರು, ಲಕ್ಷಣ ಇಲ್ಲದವರು.
ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಅಂದರೆ ಸ್ಯಾಚುರೇಷನ್, ಪಲ್ಸ್ ಆಕ್ಸಿಮೀಟರ್ ವರದಿ 93ಕ್ಕಿಂತಲೂ ಹೆಚ್ಚಿರಬೇಕು.
ಒಂದು ವೇಳೆ ಇದು ಕಡಿಮೆಯಾದರೆ ಆಸ್ಪತ್ರೆಗೆ ತೆರಳಬೇಕು.
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಕ್ರಮ, ಲಘು ವ್ಯಾಯಾಮ ಮಾಡಬೇಕು.

ಹೋಂ ಐಸೋಲೇಷನ್ ಹೇಗೆ ಇರುತ್ತೆ?

ಸೋಂಕು ದೃಢಪಟ್ಟವರಿಗೆ ಬಿಬಿಎಂಪಿ ವಾರ್ ರೂಂ ನಿಂದ ಫೋನ್ ಕಾಲ್ ಮೂಲಕ ಆರೋಗ್ಯ ವಿಚಾರಿಸುತ್ತಾರೆ. ಹೋಂ ಐಸೋಲೇಷನ್ ಗೆ ಒಪ್ಪಿದ್ದರೆ ಆರೋಗ್ಯ ಸಹಾಯಕರ ತಂಡ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಮಾನದಂಡದಂತೆ ಎಲ್ಲ ಅನುಕೂಲ ಇದ್ದರೆ ಅನುಮತಿಯನ್ನ ನೀಡುತ್ತಾರೆ. ಒಂದು ವೇಳೆ ಪ್ರತ್ಯೇಕ ರೂಮ್​, ಬಾತ್ ರೂಮ್​ ಇಲ್ಲದೇ ಇದ್ದರೆ ಕೋವಿಡ್ ಕೇರ್ ಸೆಂಟರ್​ಗೆ ಶಿಫಾರಸು ಮಾಡುತ್ತಾರೆ. ಹೋಂ ಐಸೋಲೇಷನ್ ಇರೋರಿಗೆ 10 ದಿನಗಳಿಗೆ ವಿಟಮಿನ್ ಸಿ ಮತ್ತು ಜಿಂಕ್ ಮಾತ್ರೆ ನೀಡಿ, ಏನೆಲ್ಲಾ ಮಾಡಬೇಕು ಎಂಬುದರ ಕುರಿತು ಮಾಹಿತಿ ನೀಡುತ್ತಾರೆ.

ಓದಿ: ಸೋಂಕಿತ ಶವಗಳ ಅಂತ್ಯಸಂಸ್ಕಾರ ಮಾಡಿ ಮಾದರಿಯಾದ ಮುಸ್ಲಿಂ ಯುವಕರ ತಂಡ.. ಇದು ಭಾವೈಕ್ಯತೆಯ ಪ್ರತೀಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.