ETV Bharat / state

ಲಸಿಕೆ ಮೊರೆ ಹೋಗುತ್ತಿರುವ ಜನತೆ... ಎರಡನೇ ಡೋಸ್​ಗಾಗಿ ಪರದಾಟ

ಕೋವಿಡ್​ ಎರಡನೇ ಅಲೆ ಅತಿ ವೇಗವಾಗಿ ಉಲ್ಭಣಗೊಂಡಿದೆ. ಲಾಕ್​ಡೌನ್​​, ಕಟ್ಟುನಿಟ್ಟಿನ ಕ್ರಮಗಳಿಂದ ಇದೀಗ ಸೋಂಕಿತರ ಪ್ರಮಾಣ ಇಳಿಕೆಯಾಗುತ್ತಿದ್ದರೂ ಸಹ ಸಂಪೂರ್ಣ ನಿಯಂತ್ರಣಕ್ಕೆ ಬರೋವರಗೂ ಏನೂ ಹೇಳುವಂತಿಲ್ಲ.

people facing some problems regarding vaccination process
ಲಸಿಕೆ ಮೊರೆ ಹೋಗುತ್ತಿರುವ ಜನತೆ - ಎರಡನೇ ಡೋಸ್​ಗಾಗಿ ಪರದಾಟ
author img

By

Published : May 29, 2021, 1:26 PM IST

ಬೆಂಗಳೂರು/ಬೆಳಗಾವಿ/ವಿಜಯಪುರ: ದೇಶದೆಲ್ಲೆಡೆ ಮಹಾಮಾರಿ ಸೋಂಕು ಹೊಸ ಸ್ವರೂಪದಲ್ಲಿ ಅತ್ಯಂತ ವೇಗವಾಗಿ ಹಬ್ಬಿ ಜನರ ನಿದ್ದೆಗೆಡಿಸಿದೆ. ಲಾಕ್​ಡೌನ್​​ನಿಂದ ಸೋಂಕು ಪ್ರಕರಣಗಳು ಇಳಿಕೆಯಾಗುತ್ತಿದ್ದರೂ ಸಮಸ್ಯೆ ಸಂಪೂರ್ಣ ಸರಿಯಾಗೋ ತನಕ ಜನ್ರಿಗೆ ಕೊರೊನಾ ಕಾಟ ತಪ್ಪಿದ್ದಲ್ಲ. ಕೋವಿಡ್​ ಎರಡನೇ ಅಲೆ ಆರ್ಭಟಕ್ಕೆ ಬೆಚ್ಚಿಬಿದ್ದಿರುವ ಜನ ಲಸಿಕೆ ಮೊರೆ ಹೋಗುತ್ತಿದ್ದು, ಇದರಲ್ಲೂ ಹಲವು ಗೊಂದಲಗಳು ಸೃಷ್ಟಿಯಾಗಿವೆ. ಲಸಿಕೆಯ ಮೊದಲ ಡೋಸ್​ ಪಡೆದವರಿಗೆ ಎರಡನೇ ಡೋಸ್​​ನ ಮೆಸೇಜ್ ಬರದೇ ಪರದಾಡುತ್ತಿದ್ದಾರೆ.

ಲಸಿಕೆ ಮೊರೆ ಹೋಗುತ್ತಿರುವ ಜನತೆ - ಎರಡನೇ ಡೋಸ್​ಗಾಗಿ ಪರದಾಟ

ಬೆಂಗಳೂರಿನಲ್ಲಿ 3 ಸಾವಿರಕ್ಕೂ ಅಧಿಕ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತಿದ್ದು, ಲಸಿಕೆಯ ಕೊರತೆಯೇ ಲಸಿಕಾಭಿಯಾನಕ್ಕೆ ಅಡ್ಡಿಯಾಗಿದೆ. ದತ್ತಾಂಶ ಅಪ್ಲೋಡ್​ ಮಾಡುವುದರಲ್ಲಿಯೂ ಕೆಲ ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ. ಆದರೂ ಆರೋಗ್ಯ ಇಲಾಖೆ ಕಾರ್ಯಕರ್ತರು ತಾಳ್ಮೆಯಿಂದ ಕೆಲಸ ಮಾಡುತ್ತಿದ್ದಾರೆ.

ಬೆಳಗಾವಿಯಲ್ಲಿ ಲಸಿಕಾಕರಣದ ಆರಂಭದಲ್ಲಿ ಮಾಹಿತಿ ಅಪ್ಲೋಡ್ ಮಾಡುವಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯಿಂದ ಮೊದಲ ಡೋಸ್​ ಪಡೆದವರು ಎರಡನೇ ಡೋಸ್​ಗೆ ಮೆಸೇಜ್​ ಬರದೇ ಪರದಾಡಿದ್ದರು. ಜನಾಕ್ರೋಶಕ್ಕೆ ಮಣಿದ ಜಿಲ್ಲಾಡಳಿತ, ಮೊದಲ ಡೋಸ್​​ ಪಡೆದವರಿಗೆ ಮೆಸೇಜ್​ ಬರಲಿ, ಬಿಡಲಿ ಎರಡನೇ ಡೋಸ್​ ನೀಡಲು ಮುಂದಾಯ್ತು. ಇದೀಗ ಕೇಂದ್ರ ಸರ್ಕಾರವೇ ಕೋವಿನ್ ವೆಬ್​ಸೈಟ್​​ ಅಭಿವೃದ್ಧಿಪಡಿಸಿದ್ದು, 18 ವರ್ಷ ಮೇಲ್ಪಟ್ಟವರು ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಬೇಕಿದೆ.

ವಿಜಯಪುರ ಜಿಲ್ಲೆಯಲ್ಲಿ ಮಹಾಮಾರಿ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ರೂ ಸಹ ಲಸಿಕೆ ಕುರಿತು ಗೊಂದಲ ಮುಂದುವರೆದಿದೆ. ಸಾಕಷ್ಟು ಮಂದಿಗೆ ಎರಡನೇ ಲಸಿಕೆ ದಿನ ಬಂದಿದ್ದರೂ ಕೂಡ ಮೆಸೇಜ್ ಮಾತ್ರ ಬರದೇ ಪರದಾಡುವಂತಾಗಿದೆ. ಈ ಸಂಬಂಧ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿದೆ.

ಇದೀಗ 18ರಿಂದ 44 ವರ್ಷ ವಯೋಮಾನದವರು ಕೋವಿನ್​ ವೆಬ್​ಸೈಟ್​ ಮೂಲಕ ಲಸಿಕೆಗಾಗಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕಿದೆ. ಬಳಿಕ ಲಸಿಕೆ ಪಡೆಯುವ ಸ್ಥಳ, ದಿನಾಂಕದ ಕುರಿತು ಮೆಸೇಜ್​ ಬರಲಿದ್ದು, ಆ ಪ್ರಕಾರವಾಗಿ ಲಸಿಕೆ ಪಡೆಯಬಹುದಾಗಿದೆ. ಆದ್ರೆ ರಾಜ್ಯದಲ್ಲಿ ಲಸಿಕೆ ಕೊರತೆ ಇರೋದೊಂತು ಸತ್ಯ. 45 ವರ್ಷ ಮೇಲ್ಟಟ್ಟವರಿಗೆ, 18 ವರ್ಷ ಮೇಲ್ಪಟ್ಟ ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಆದ್ಯತೆ ನೀಡಿ ಲಸಿಕೆ ಹಾಕಲಾಗುತ್ತಿದೆ.

ಲಸಿಕೆ ಪಡೆಯುವವರ ದತ್ತಾಂಶ ಅಪ್ಲೋಡ್​ ಮಾಡುವಲ್ಲಿ ಕಂಡುಬಂದ ಸಮಸ್ಯೆ ಪರಿಹರಿಸುವ ಕೆಲಸ ಆಗುತ್ತಿದೆ. ಲಸಿಕಾ ಕೇಂದ್ರದಲ್ಲೇ ರಿಜಿಸ್ಟರ್​, ಲಸಿಕೆ ಪಡೆಯುವವರಿಗೆ ಒಟಿಪಿ ನಂಬರ್​​ ಹೀಗೆ ಸುಧಾರಣಾ ಕ್ರಮಗಳನ್ನು ತರುತ್ತಾ ಜನ್ರ ಸಮಸ್ಯೆಯನ್ನು ಸರ್ಕಾರ ನಿವಾರಿಸುತ್ತಿದೆ ಎಂದರೆ ತಪ್ಪಾಗಲಾರದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.