ಬೆಂಗಳೂರು: ಮಗು ಹುಟ್ಟಿದ ಮೊದಲ 7 ದಿನಗಳು ತಾಯಿಯ ಹಾಲು ಅತ್ಯಂತ ಮಹತ್ವದ್ದು. ಈ ಅವಧಿಯ ಹಾಲನ್ನು ಗೋಲ್ಡನ್ ಮಿಲ್ಕ್ ಎನ್ನಲಾಗುತ್ತದೆ ಎಂದು ಮಕ್ಕಳ ತಜ್ಞ ಡಾ. ಆದರ್ಶ್ ತಿಳಿಸಿದರು. ಇಂದಿನಿಂದ ಒಂದು ವಾರಗಳ ಕಾಲ ವಿಶ್ವದೆಲ್ಲೆಡೆ ವಿಶ್ವ ಸ್ತನ್ಯಪಾನ ಸಪ್ತಾಹವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ತನ್ಯಪಾನ ಮಾಡುವುದರ ಮಹತ್ವ ಏನು? ಎಂಬುವುದರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವು ನಗರದ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ನಡೆಯಿತು.
ಈ ವೇಳೆ ಮಾತನಾಡಿದ ಡಾ. ಆದರ್ಶ್ ಸ್ತನ್ಯಪಾನದ ಮಹತ್ವದ ಜೊತೆಗೆ 'ಹ್ಯೂಮನ್ ಮಿಲ್ಕ್ ಬ್ಯಾಂಕ್' ಮತ್ತು ಮಿಲ್ಕ್ ಬ್ಯಾಂಕ್ ಗೆ ಹಾಲು ದಾನಮಾಡುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ರಾಜರಾಜೇಶ್ವರಿ ಆಸ್ಪತ್ರೆ ಮುಂದಾಗಿದೆ. ಕಳೆದ 5 ವರ್ಷದಿಂದ ಮಿಲ್ಕ್ ಬ್ಯಾಂಕ್ನಲ್ಲಿ ಹಾಲನ್ನು ಶೇಖರಿಸಿ ಅಗತ್ಯ ಇರುವಂತವರಿಗೆ ಅದನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ 'ಹ್ಯೂಮನ್ ಮಿಲ್ಕ್ ಬ್ಯಾಂಕ್' ಸಹ ಇದೆ. ಇಲ್ಲಿ ತಾಯಿಯ ಎದೆಹಾಲನ್ನು ಸಂಗ್ರಹಿಸಿ ಒಂದು ದಿನ ಫ್ರಿಜ್ನಲ್ಲಿ ಇರಿಸಿ ನಂತರ ಅದನ್ನು ಪರೀಕ್ಷೆಗೆ ಕಳುಹಿಸಿ ಇದು ಮಗುವಿಗೆ ನೀಡಲು ಯೋಗ್ಯ ಎಂದು ಪರೀಕ್ಷಾ ವರದಿಬಂದ ನಂತರ ಅಗತ್ಯವಿರುವ ಶಿಶುವಿಗೆ ನೀಡಲಾಗುತ್ತದೆ. ಅಷ್ಟೇ ಅಲ್ಲದೇ ಬೇರೆ ಆಸ್ಪತ್ರೆಯಲ್ಲಿ ಇರುವಂತಹ ತಾಯಂದಿರು ಕೂಡ ಮಿಲ್ಕ್ ಬ್ಯಾಂಕ್ಗೆ ಹಾಲನ್ನು ದಾನ ಮಾಡಲು ಆಸ್ಪತ್ರೆ ಅವಕಾಶ ನೀಡುತ್ತಿದೆ ಎಂದು ಮಾಹಿತಿ ನೀಡಿದರು.
6ರಿಂದ 8 ತಿಂಗಳುಗಳ ಕಾಲ ಹಾಲು ಉಪಯೋಗಿಸಲು ಅವಕಾಶ: ಒಮ್ಮೆ ಸಂಗ್ರಹಿಸಿದ ಹಾಲನ್ನು 6ರಿಂದ 8 ತಿಂಗಳುಗಳ ಕಾಲ ಉಪಯೋಗಿಸಲು ಅವಕಾಶವಿದೆ. ಕಳೆದ 5 ವರ್ಷಗಳಿಂದ ಇಲ್ಲಿ ಹ್ಯೂಮನ್ ಮಿಲ್ಕ್ ಸಂಗ್ರಹಿಸಲಾಗುತ್ತಿದೆ. ತಾಯಿ ಮಗುವಿಗೆ ಹಾಲುಣಿಸಲು ಸಾಧ್ಯವಾಗದಿದ್ದಾಗ ಅದನ್ನು ಬ್ಯಾಂಕ್ನಲ್ಲಿ ಸಂಗ್ರಹಿಸಿ ಅಗತ್ಯ ಇರುವಂತಹ ಮಗುವಿಗೆ ನೀಡಲಾಗುತ್ತದೆ. ಇದರಿಂದ ತಾಯಿಯ ಹಾಲಿನಿಂದ ದೂರ ಉಳಿದ ಮಕ್ಕಳಿಗೂ ಸಹ ಉಪಯೋಗವಾಗುತ್ತದೆ ಎಂದು ತಿಳಿಸಿದರು.
ಓದಿ: ಹಂತಕರನ್ನು ಆ. 5ರೊಳಗೆ ಬಂಧಿಸದಿದ್ದಲ್ಲಿ ಸತ್ಯಾಗ್ರಹ.. ಸರ್ಕಾರಕ್ಕೆ ಕುಮಾರಸ್ವಾಮಿ ಡೆಡ್ಲೈನ್