ಬೆಂಗಳೂರು: ಮೆಜೆಸ್ಟಿಕ್ ಮೆಟ್ರೋ ರೈಲು ನಿಲ್ದಾಣದ ಮುಂದೆ ಜನಸಾಗರವೇ ನೆರೆದಿರುವ ದೃಶ್ಯ ಇಂದು ಬೆಳಗ್ಗೆ ಕಂಡು ಬಂದಿದೆ. ಎರಡು ಸಾಲಿನಲ್ಲಿ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಂತಿದ್ದರು.
ಬೆಳಗ್ಗೆ 7 ಗಂಟೆಗೆ ಆರಂಭವಾಗುವ ಮೆಟ್ರೋ ರೈಲಿಗೆ 5 ಗಂಟೆಯಿಂದಲೇ ಜನರು ಕಾದು ಕುಳಿತಿದ್ದರು. ಬಿಎಂಟಿಸಿ ಬಸ್ಗಳಿಲ್ಲದ ಕಾರಣ ಮೆಟ್ರೋಗೆ ಪ್ರಯಾಣಿಕರು ಮುಗಿಬಿದ್ದಿದ್ದಾರೆ. ನಿನ್ನೆಗೆ ಹೋಲಿಸಿದರೆ ಮೆಜೆಸ್ಟಿಕ್ನಲ್ಲಿ ಇಂದು ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದೆ.
ಹಬ್ಬಕ್ಕೆ ಊರಿಗೆ ಹೋಗಿದ್ದವರು ವಾಪಸ್ ಬೆಂಗಳೂರಿಗೆ ಮರಳಿದ್ದು, ಬಿಎಂಟಿಸಿ ಬಸ್ಗಳ ಮೂಲಕ ನಗರದ ಮೂಲೆಮೂಲೆಗೆ ಹೋಗಬೇಕಿದೆ. ಆದರೆ 8 ಗಂಟೆ ಆದರೂ ಮೆಜೆಸ್ಟಿಕ್ಗೆ ಒಂದೇ ಒಂದು ಬಿಎಂಟಿಸಿ ಬಸ್ ಬಂದಿಲ್ಲದ ಕಾರಣ ಪ್ರಯಾಣಿಕರ ಪರದಾಟ ಮುಂದುವರೆದಿದೆ.
ಇದನ್ನೂ ಓದಿ: ಸಾರಿಗೆ ಮುಷ್ಕರದ ಬಗ್ಗೆ ಗೊತ್ತಿರಲಿಲ್ಲ, ಆಟೋದವರು ಜಾಸ್ತಿ ಹಣ ಕೇಳ್ತಿದ್ದಾರೆ: ಮೆಜೆಸ್ಟಿಕ್ನಲ್ಲಿ ಪ್ರಯಾಣಿಕರ ಆಳಲು