ETV Bharat / state

ಮುಂಬೈಯಿಂದ ಬೆಂಗಳೂರಿಗೆ ರೈಲಲ್ಲಿ ಬಂದ ಪ್ರಯಾಣಿಕರು ಪರಾರಿ, ಪೊಲೀಸರಿಗೆ ಹೆಚ್ಚಿದ ತಲೆನೋವು - ಮುಂಬೈನಿಂದ ಬೆಂಗಳೂರಿಗೆ ರೈಲು ಆಗಮನ

ಮುಂಬೈಯಿಂದ ಬೆಂಗಳೂರಿಗೆ ರೈಲು ಆಗಮಿಸಿದ್ದು, ಕ್ವಾರಂಟೈನ್​ಗೆ ತೆರಳಬೇಕಾದ ಪ್ರಯಾಣಿಕರು ಆಟೋ ಹಾಗು ಬಿಎಂಟಿಸಿ ಬಸ್ಸುಗಳಲ್ಲಿ ಪರಾರಿಯಾಗಿದ್ದಾರೆ.

Bangalore
ಕ್ವಾರಂಟೈನ್​ಗೆ ತೆರಳುವ ಪ್ರಯಾಣಿಕರು ಎಸ್ಕೇಪ್
author img

By

Published : Jun 2, 2020, 11:34 AM IST

Updated : Jun 2, 2020, 11:42 AM IST

ಬೆಂಗಳೂರು: ಮುಂಬೈನಿಂದ ಬೆಂಗಳೂರಿಗೆ ರೈಲು ಆಗಮಿಸಿದ್ದು, ಈ ವೇಳೆ ಪ್ರಯಾಣಿಕರು ಆಟೋ ಹಾಗು ಬಿಎಂಟಿಸಿ ಬಸ್ಸುಗಳಲ್ಲಿ ತೆರಳಿದ್ದು, ಅವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಮುಂಬೈನಿಂದ ಬರುವ ಪ್ರಯಾಣಿಕರನ್ನು ರೈಲ್ವೆ ನಿಲ್ದಾಣದ ಬಳಿ ಸ್ವಾಬ್ ಹಾಗೂ ಥರ್ಮಲ್ ಸ್ಕ್ರೀನಿಂಗ್‌ ಪರೀಕ್ಷೆ ನಡೆಸಲಾಗುತ್ತದೆ. ಈ ವೇಳೆ ಕೊರೊನಾ ಲಕ್ಷಣ ಇಲ್ಲದೇ ಹೋದ್ರೆ ಅವರನ್ನು ಕ್ವಾರಂಟೈನ್​ಗಾಗಿ ಪ್ರಯಾಣಿಕರ ಆಯ್ಕೆಯ ಹೋಟೆಲ್​​ಗಳಿಗೆ ಕಳುಹಿಸಲಾಗುತ್ತದೆ. ಪ್ರಯಾಣಿಕರು ತಪ್ಪಿಸಿಕೊಳ್ಳದಂತೆ‌ ಮುಂಜಾಗ್ರತಾ ಕ್ರಮವಾಗಿ ಬಿಬಿಎಂಪಿ ಮತ್ತು ಪೊಲೀಸ್ ಸಿಬ್ಬಂದಿ ಸಂಗೊಳ್ಳಿ ರಾಯಣ್ಣ‌ ರೈಲು ನಿಲ್ದಾಣದಲ್ಲಿ ಕಣ್ಗಾವಲು ಹಾಕಿದ್ದಾರೆ. ಆದರೆ ಇದರ ನಡುವೆ ಅಧಿಕಾರಿಗಳ ಕಣ್ತಪ್ಪಿಸಿ ಕೆಲವರು ಮನೆಗಳಿಗೆ ಹೋಗಿದ್ದು, ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.

ಕ್ವಾರಂಟೈನ್​ಗೆ ತೆರಳುವ ಮುಂಬೈನಿಂದ ಬಂದ ಪ್ರಯಾಣಿಕರು ಎಸ್ಕೇಪ್ ಆಗಿದ್ದಾರೆ

ಇನ್ನೊಂದೆಡೆ, ಕ್ವಾರಂಟೈನ್​ಗೆ ಹೋಗುವ ಬಸ್ಸುಗಳಲ್ಲಿ ಸಾಮಾಜಿಕ ಅಂತರ ಗಾಳಿಗೆ ತೂರಿ, ಕ್ವಾರಂಟೈನ್ ಆಗೋ ಪ್ರತಿ ವ್ಯಕ್ತಿಗೆ 100 ರೂ ಟಿಕೆಟ್ ನಿಗದಿ ಮಾಡಲಾಗಿದೆ.‌ ಪ್ರಯಾಣಿಕರ ಬಳಿಯೂ ಹಣ ಸಂಗ್ರಹಕ್ಕಿಳಿದ ಬಿಎಂಟಿಸಿ ಅಧಿಕಾರಿಗಳ ಜೊತೆ ಪ್ರಯಾಣಿಕರು ಮಾತಿನ ಚಕಮಕಿ ನಡೆಸಿದ್ದು 100 ರೂ ಕೊಡಲ್ಲ, 7 ದಿನ ಅಲ್ಲದಿದ್ರೆ 14 ದಿನ ಕ್ವಾರಂಟೈನ್ ಮಾಡಿ. ಪ್ರಧಾನಿ ಮೋದಿ ಇದಕ್ಕಂತನೇ 20 ಲಕ್ಷ ರೂ ಕೊಟ್ಟಿದ್ದಾರೆ ಎಂದು ವಾದಿಸಿದರು.

ಸುಮಾರು 40 ಸಾವಿರ ಕೊರೊನಾ‌ ಸೋಂಕಿತರಿರುವ ಮಹಾರಾಷ್ಟ್ರದಿಂದ 1,700 ಪ್ರಯಾಣಿಕರನ್ನು ಹೊತ್ತು ಈ ರೈಲು ಬಂದಿದ್ದು, ಕೆಲವರು ಕ್ವಾರಂಟೈನ್ ಆಗುವ ಬದಲು ಎಸ್ಕೇಪ್ ಆಗಿದ್ದಾರೆ. ಹೀಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ‌.

Last Updated : Jun 2, 2020, 11:42 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.