ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ಟಿ ಆಯೋಜಕ ವಿರೇನ್ ಖನ್ನಾ ಮನೆ ಮೇಲೆ ದಾಳಿ ವೇಳೆ ಗಾಂಜಾ, ಸಿರಿಂಜ್, ಏಳು ದೇಶದ ಕರೆನ್ಸಿ ಹಾಗೂ ಪೊಲೀಸ್ ಸಮವಸ್ತ್ರ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಇನ್ಸ್ಪೆಕ್ಟರ್ ಮಹ್ಮದ್ ಹಾಗೂ ಶ್ರೀಧರ್ ನೇತೃತ್ವದ ತಂಡ ಕೋರ್ಟ್ನಿಂದ ಸರ್ಚ್ ವಾರೆಂಟ್ ಪಡೆದು ಮನೆ ಮೇಲೆ ದಾಳಿ ನಡೆಸಿದೆ. ಸತತ 8 ಗಂಟೆಗಳ ಕಾಲ ಪರಿಶೀಲನೆ ಮಾಡಲಾಗಿದೆ.
ಸದ್ಯ ತನಿಖಾಧಿಕಾರಿಗಳು ಬಹುತೇಕ ವಸ್ತುಗಳನ್ನು ವಿರೇನ್ ಖನ್ನಾ ಸಮ್ಮುಖದಲ್ಲೇ ವಶಕ್ಕೆ ಪಡೆದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಈತ ಸ್ಯಾಂಡಲ್ವುಡ್ನ ಕೆಲವರಿಗೆ ಡ್ರಗ್ಸ್ ಪೂರೈಸುತ್ತಿದ್ದ ಪ್ರಮುಖ ಆರೋಪಿಯಾಗಿದ್ದು, ಈತನನ್ನು ದೆಹಲಿಯಲ್ಲಿ ಬಂಧಿಸಲಾಗಿತ್ತು.