ETV Bharat / state

ಬರಗೂರು ನಿವಾಸಕ್ಕೆ ಪರಮೇಶ್ವರ್​,ಮುದ್ದ ಹನುಮೇಗೌಡ ಭೇಟಿ - Mudha Hanumagowda

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್​ ಹಾಗೂ ಸಂಸದ ಮುದ್ದ ಹನುಮೇಗೌಡ ಅವರು ಇಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ನಿವಾಸಕ್ಕೆ ಭೇಟಿ‌ ನೀಡಿದರು.

ಪರಮೇಶ್ವರ್​,ಮುದ್ದ ಹನುಮೇಗೌಡ
author img

By

Published : Mar 15, 2019, 2:12 PM IST

ಬೆಂಗಳೂರು: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್​ ಹಾಗೂ ಸಂಸದ ಮುದ್ದ ಹನುಮೇಗೌಡ ಅವರು ಇಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ನಿವಾಸಕ್ಕೆ ಭೇಟಿ‌ ನೀಡಿ ಕುಶಲೋಪರಿ ವಿಚಾರಿಸಿದರು. ಹಾಗೂ ಮೂವರು ಚರ್ಚೆ ನಡೆಸಿದರು.

ನಂತರ ಮಾತನಾಡಿದ ಅವರು, ತುಮಕೂರು ಜೆಡಿಎಸ್ ಪಟ್ಟಿಯಲ್ಲೇ ಇರಲಿಲ್ಲ. ಜೆಡಿಎಸ್‍ನವರಿಗೆ ಹೇಗೆ ಕ್ಷೇತ್ರ ಬಿಟ್ಟು ಕೊಟ್ರೋ ಗೊತ್ತಿಲ್ಲ. ಹೀಗಾಗಿ ಇದೀಗ ತುಮಕೂರು ವಾಪಸ್ ಪಡೆಯಲು ಪ್ರಯತ್ನ ಮಾಡುತ್ತಿದ್ದೇನೆ. ಮುದ್ದ ಹನುಮಗೌಡ ಅವರು ಹಾಲಿ ಸಂಸರಾಗಿದ್ದಾರೆ. ನಮ್ಮಲ್ಲಿ 10 ಜನ ನಮ್ಮ ಪಕ್ಷದಲ್ಲಿ ಹಾಲಿ ಎಂಪಿಗಳಿದ್ದಾರೆ. ಆ 10 ಜನಕ್ಕೂ ಟಿಕೆಟ್ ಕೊಡಬೇಕು ಎಂದು ವರಿಷ್ಠರ ಜೊತೆ ಚರ್ಚೆ ಮಾಡುವಾಗ ಪ್ರಸ್ತಾಪ ಮಾಡಿದ್ದೆವು. ಆದ್ರೆ ಈಗ ತುಮಕೂರನ್ನು ಬಿಟ್ಟುಕೊಟ್ಟಿದ್ದಾರೆ. ಅದು ನಮಗೆ ಬೇಕು. ನಮ್ಮಲ್ಲಿ ಹಾಲಿ ಎಂಪಿ ಇದ್ದಾರೆ ಎಂದು ನಾನು ಕೇಳುತ್ತಿದ್ದೇನೆ ಎಂದರು.

ಈ ಕುರಿತು ಗುರುವಾರ ದೇವೇಗೌಡರನ್ನು ನಾನು ಭೇಟಿ ಮಾಡಿದ್ದೆ. ಇಂದು ಮುಖ್ಯಮಂತ್ರಿಗಳನ್ನು ಕೂಡ ಭೇಟಿ ಮಾಡುತ್ತೇನೆ. ನಮಗೆ ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ. ಯಾಕಂದ್ರೆ ಮುದ್ದಹನುಮೇಗೌಡ ಕಳೆದ 5 ವರ್ಷಗಳಿಂದ ಕೆಲಸ ಮಾಡಿದ್ದಾರೆ. ನಾವು ಬೆಂಗಳೂರಿಗೆ ಬಂದ ಬಳಿಕ ದೆಹಲಿಯಲ್ಲಿ ಸಾಕಷ್ಟು ಬೆಳವಣಿಗೆಗಳು ಆಗಿದೆ ಎಂದರು.

ಜೆಡಿಎಸ್ ಜೊತೆಗೆ ಸೀಟು ಹಂಚಿಕೆ ಮಾಡಿಕೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಕಾಂಗ್ರೆಸ್‍ನಲ್ಲಿ ಬಿರುಕಿನ ವಾತಾವರಣ ಮೂಡಿದೆ. ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧವೇ ಉಪಮುಖ್ಯಮಂತ್ರಿ ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಬರಗೂರು ರಾಮಚಂದ್ರಪ್ಪ ಅವರು ಬರೆದ "ರಾಜಕುಮಾರ ಜೀವನ ಚರಿತ್ರೆ" ಯನ್ನು ಪರಮೇಶ್ವರ್​ ಅವರಿಗೆ ನೀಡಿದರು.

sample description
ETV Bharat Logo

Copyright © 2025 Ushodaya Enterprises Pvt. Ltd., All Rights Reserved.