ETV Bharat / state

ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಪರೇಡ್ ಶೀಘ್ರದಲ್ಲಿ ಆದ್ರೆ ಉತ್ತಮ: ಹೈಕೋರ್ಟ್

ಸಾಕ್ಷಿಗಳು ತಮ್ಮ ನೆನಪಿನ ಶಕ್ತಿ ಕಳೆದುಕೊಳ್ಳುವ ಸಾಧ್ಯತೆಯಿರುವುದರಿಂದ ಆರೋಪಿಗಳ ಪತ್ತೆ ಹಚ್ಚುವುದು ಕಷ್ಟಕರವಾಗಿರಲಿದೆ. ಹಾಗಾಗಿ ಅಪರಾಧಿಗಳ ಪತ್ತೆ ಪರೇಡ್​ನನ್ನು ಆದಷ್ಟು ಶೀಘ್ರದಲ್ಲಿ ನಡೆಸಿದ್ರೆ ಉತ್ತಮ ಎಂದು ಹೈಕೋರ್ಟ್​ ಹೇಳಿದೆ.

ಹೈಕೋರ್ಟ್
ಹೈಕೋರ್ಟ್
author img

By

Published : Oct 4, 2022, 9:02 AM IST

ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಗುರುತಿಸಲು ಆದಷ್ಟು ಶೀಘ್ರದಲ್ಲಿ ಪರೇಡ್ ನಡೆಸಿದರೆ ಉತ್ತಮ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ತಮ್ಮ ವಿರುದ್ಧದ ಗುರುತು ಪತ್ತೆಗಾಗಿ 11 ವರ್ಷದ ಬಳಿಕ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ನಗರದ ಕೆ. ಉಮೇಶ್ ಶೆಟ್ಟಿ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿರುವ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದೆ.

ಸಾಕ್ಷಿಗಳು ತಮ್ಮ ನೆನಪಿನ ಶಕ್ತಿ ಕಳೆದುಕೊಳ್ಳುವ ಸಾಧ್ಯತೆಯಿರುವುದರಿಂದ ಆರೋಪಿಗಳ ಪತ್ತೆ ಹಚ್ಚುವುದು ಕಷ್ಟಕರವಾಗಿರಲಿದೆ. ಅಪರಾಧಿಗಳ ಪತ್ತೆ ಪರೇಡ್​ನನ್ನು ಹಲವು ವರ್ಷಗಳ ವಿಳಂಬದ ಬಳಿಕ ನಡೆಸಿದರೆ ಯಾವುದೇ ಪ್ರಯೋಜವಾಗುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಗುರುತು ಪತ್ತೆ ಪರೇಡ್ ನಡೆಸಲು ಅನುಮತಿ: ಈ ಪ್ರಕರಣದಲ್ಲಿ ದೂರು ದಾಖಲಾದ 11 ವರ್ಷಗಳ ಬಳಿಕ ತನಿಖಾಧಿಕಾರಿ ಗುರುತು ಪತ್ತೆ ಪರೇಡ್ ನಡೆಸಲು ಅನುಮತಿ ಕೋರಿದ್ದಾರೆ. ಆದ್ದರಿಂದ ಸಾಮಾನ್ಯವಾಗಿ ಮನುಷ್ಯರ ಜ್ಞಾಪಕ ಶಕ್ತಿ ದುರ್ಬಲವಾದುದು ಮತ್ತು ಸಾಕ್ಷಿ ಮಾಡುವ ಗುರುತಿನ ಮೇಲೆ ನಂಬಿಕೆ ಇಡಲಾಗದು. ಘಟನೆ ನಡೆದ ೧೧ ವರ್ಷಗಳ ನಂತರ ಗುರುತು ಪತ್ತೆ ಪರೇಡ್ ನಡೆಸಿದರೆ, ಯಾವ ಉದ್ದೇಶದಿಂದ ಅದನ್ನು ನಡೆಸುತ್ತಾರೋ ಅದು ಸಫಲವಾಗುವ ಸಾಧ್ಯತೆಗಳಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಇದನ್ನೂ ಓದಿ: ಮದ್ಯಪಾನ ಮಾಡಿ ವಾಹನ ಚಲಾವಣೆ: ನ್ಯಾಯಾಲಯದಲ್ಲಿ ಮಾತ್ರ ದಂಡ ಪಾವತಿ.. ಹೈಕೋರ್ಟ್​ ಸೂಚನೆ

ಗುರುತು ಪತ್ತೆ ಪರೇಡ್ ಪರೀಕ್ಷೆ ನಡೆಸುವುದು ಅಪರಾಧ ಕೃತ್ಯಕ್ಕೆ ಕಾರಣವಾದ ಅಥವಾ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಲು. ಅದನ್ನು ಆದಷ್ಟು ಶೀಘ್ರ ಮಾಡಬೇಕು. ಆಗ ಸಾಕ್ಷಿಗಳು ನೆನಪಿನ ಶಕ್ತಿಯನ್ನು ಕಳೆದುಕೊಂಡಿರುವುದಿಲ್ಲ. ಹಾಗಾಗಿ ಈ ಪ್ರಕರಣದಲ್ಲಿ ಯಾವುದೇ ಆಯಾಮದಿಂದ ನೋಡಿದರೂ,11 ವರ್ಷಗಳ ಬಳಿಕ ಪರೇಡ್ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ: 2006ರಲ್ಲಿ ಬಸವೇಶ್ವರನಗರ ಪೊಲೀಸರು ನಾಲ್ವರು ಆರೋಪಿಗಳ ವಿರುದ್ಧ ಅಕ್ರಮ ಕಳ್ಳ ಸಾಗಾಣೆ ನಿಯಂತ್ರಣ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದರು. ಆ ಸಮಯದಲ್ಲಿ ಉಮೇಶ್ ಶೆಟ್ಟಿ ನಾಪತ್ತೆಯಾಗಿದ್ದರು. ಆತನ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ (ಎನ್‌ಬಿಡಬ್ಲ್ಯೂ) ಜಾರಿ ಮಾಡಿತ್ತು.

ಆದರೆ ಆಗ ಅರ್ಜಿದಾರರಾದ ಉಮೇಶ್ ಶೆಟ್ಟಿ, ತಾನು ಪೊನ್ನಪ್ಪನ ಮಗ ಉಮೇಶ್ ಶೆಟ್ಟಿಯಲ್ಲ, ತಮ್ಮ ತಂದೆ ಲೇಟ್ ವಿಠಲ ಶೆಟ್ಟಿ ಮತ್ತು ಎನ್ ಬಿಡಬ್ಲೂಯಲ್ಲಿ ಹೆಸರಿಸಿರುವುದು ತಾನಲ್ಲ ಎಂದು ಪೊಲೀಸರಿಗೆ ತಿಳಿಸಿದ್ದನು. ಈ ಹಿನ್ನೆಲೆ ಸತ್ಯಾ ಸತ್ಯತೆಯನ್ನು ಅರಿಯಲು ಗುರುತು ಪತ್ತೆ ಪರೇಡ್ ಅನ್ನು ನಡೆಸಲು ಅನುಮತಿ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆ ಮನವಿಯನ್ನು ವಿಚಾರಣಾ ನ್ಯಾಯಾಲಯ ಪುರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.