ETV Bharat / state

ಪ್ಯಾರಾ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಗಿರೀಶ್ ಗೌಡ ಚುನಾವಣಾ ರಾಯಭಾರಿ

author img

By

Published : Mar 20, 2019, 10:59 PM IST

ಪದ್ಮಶ್ರೀ‌ ಪುರಸ್ಕೃತ ಹಾಗೂ ಪ್ಯಾರಾ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಕ್ರೀಡಾಪಟು ಗಿರೀಶ್ ಗೌಡ ಲೋಕಸಭಾ ಚುನಾವಣಾ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ.

ಗಿರೀಶ್ ಗೌಡ

ಬೆಂಗಳೂರು :ಪ್ರಸಕ್ತ ಲೋಕಸಭಾ ಚುನಾವಣಾ ರಾಯಭಾರಿಯಾಗಿ ಪದ್ಮಶ್ರೀ‌ ಪುರಸ್ಕೃತ ಹಾಗೂ ಪ್ಯಾರಾ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಕ್ರೀಡಾಪಟು ಗಿರೀಶ್ ಗೌಡ ಅವರನ್ನು ಆಯ್ಕೆ ಮಾಡಲಾಗಿದೆ.

ವಾರ್ತಾ ಇಲಾಖೆಯ ಕಾರ್ಯಕ್ರಮದಲ್ಲಿ ಗಿರೀಶ್ ಗೌಡ ಅವರನ್ನು ಆತ್ಮೀಯವಾಗಿ ಗೌರವಿಸಲಾಯಿತು. ಜತೆಗೆ ರಾಜ್ಯದ ಚುನಾವಣಾ ರಾಯಭಾರಿಯನ್ನಾಗಿ ಆಯ್ಕೆ ಮಾಡಿರುವುದಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಪ್ರಕಟಿಸಿದರು.

ಗಿರೀಶ್ ಗೌಡ

ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಜೀವ್ ಕುಮಾರ್ ದಿವ್ಯಾಂಗರ ಮತದಾನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯದಲ್ಲಿ 4,03,907 ದಿವ್ಯಾಂಗರಿದ್ದಾರೆ. 35,739 ಮತಗಟ್ಟೆಗಳು, 35,739 ಗಾಲಿ ಕುರ್ಚಿಗಳು,41,669 ಭೂತಗನ್ನಡಿಗಳು, 2,213 ಸಂಜ್ಞಾಭಾಷೆ ವಿವರಣೆಗಾರರು, 31,515 ಸಹಾಯಕರನ್ನು ಒದಗಿಸುವ ಉದ್ದೇಶ ಹೊಂದಿದ್ದೇವೆ. ಅಗತ್ಯ ರೀತಿಯ ಸಾರಿಗೆ ವ್ಯವಸ್ಥೆ ಕೂಡ ಕಲ್ಪಿಸಲಾಗುತ್ತದೆ ಎಂದರು.

ಬ್ರೈಲ್ ಪೋಸ್ಟರ್ ಇದೇ ಮೊದಲ ಬಾರಿ ಮತಗಟ್ಟೆಯ ಹೊರಗಡೆ ಹಾಕಲಾಗುತ್ತದೆ. ಅಲ್ಲಿಯೇ ದಿವ್ಯಾಂಗರು ಪರಿಶೀಲಿಸಿ ಎಷ್ಟನೇ ಸೀರಿಯಲ್ ನಂಬರ್​ಗೆ ಮತ ಹಾಕಬೇಕು ಎಂದು ಗಮನಿಸಿ ಒಳಹೋಗಿ ಮತ ಹಾಕಬಹುದು. ಈ ವ್ಯವಸ್ಥೆ ಇರುವ ಬಗ್ಗೆ ಬ್ರೈಲ್ ಮನವಿ ಕಳುಹಿಸಿಕೊಡಲಾಗುತ್ತದೆ. ಬ್ರೈಲ್ ವೋಟಿಂಗ್ ಗೈಡ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

2018ರಲ್ಲಿ ನಡೆದ ಚುನಾವಣೆಯಲ್ಲಿ 26 ಮತಗಟ್ಟೆಗಳನ್ನು ಸಂಪೂರ್ಣವಾಗಿ ದಿವ್ಯಾಂಗ ಸಿಬ್ಬಂದಿ ನಿರ್ವಹಣೆ ಮಾಡಿ ತೋರಿಸಿದ್ದಾರೆ. ಅವರೂ ಕೂಡ ಇತರ ಸಿಬ್ಬಂದಿಗೆ ಸಮನಾಗಿ ಭಾಗಿಯಾಗುತ್ತೇವೆ ಎಂದ ತೋರಿಸಿದ್ದು, ಇದು ದಿವ್ಯಾಂಗರಲ್ಲಿ ಜಾಗೃತಿ ತಂದಿದೆ. ಯಾರೂ ಕೂಡ ಚುನಾವಣಾ ಕರ್ತವ್ಯಕ್ಕೆ ಈ ಬಾರಿ ವಿನಾಯಿತಿ ಕೋರಿಲ್ಲ. ಎಲ್ಲರೂ ಭಾಗಿಯಾಗುತ್ತಿದ್ದಾರೆ. ಈ ಬಾರಿ ಎಲ್ಲಾ ಜಿಲ್ಲೆಯಲ್ಲೂ ಕೆಲ‌ ಮತಗಟ್ಟೆಗಳನ್ನು ಸಂಪೂರ್ಣವಾಗಿ ದಿವ್ಯಾಂಗರೆ ನಿರ್ವಹಣೆ ಮಾಡಲಿದ್ದಾರೆ ಎಂದರು.

ಸಂಜೀವ್ ಕುಮಾರ್ ಮಾತನಾಡಿ, ಸ್ಟಾರ್ಟಿಕ್ ಸರ್ವೆಲೆನ್ಸ್ ತಂಡಗಳು ಸರ್ವೆ ನಡೆಸಿದ್ದು, 1,56,34,405 ನಗದು, 21,50,151.46 ಮೌಲ್ಯದ 1529.72 ಲೀಟರ್ ಮದ್ಯ, 1,47,66,305 ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು 106 ಎಫ್ಐಆರ್ ದಾಖಲಿಸಲಾಗಿದೆ. ಅಬಕಾರಿ ಇಲಾಖೆ 16,3120,363 ಮೌಲ್ಯದ 3,61,713.25 ಲೀಟರ್ ಮದ್ಯ ವಶಪಡಿಸಿಕೊಂಡು 812 ಗಂಭೀರ ಪ್ರಕರಣ ದಾಖಲಿಸಲಾಗಿದೆ. 90258 ಶಸ್ತ್ರಾಸ್ತ್ರ ಜಮೆ ಮಾಡಿಕೊಂಡು, 298 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 9 ಶಸ್ತ್ರಾಸ್ತ್ರ ಪರವಾನಿಗೆ ರದ್ದು ಪಡಿಸಲಾಗಿದೆ. 37426 ಪ್ರಕರಣ ದಾಖಲಿಸಲಾಗಿದೆ. ಅವುಗಳಲ್ಲಿ 28173 ವ್ಯಕ್ತಿಗಳಿಂದ ಮುಚ್ಚಳಿಕೆ ಪಡೆಯಲಾಗಿದೆ. 17232 ಜಾಮೀನು ರಹಿತ ವಾರೆಂಟ್​ಗಳನ್ನು ಜಾರಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ನಂತರ ಗಿರೀಶ್ ಗೌಡ ಮಾತನಾಡಿ,‌ ಮತದಾನ ಎಲ್ಲರ ಆದ್ಯ ಕರ್ತವ್ಯ ಮತ್ತು ಹಕ್ಕು. ದೇಶದ ಉಜ್ವಲ ಭವಿಷ್ಯಕ್ಕಾಗಿ ಪ್ರತಿಯೊಬ್ಬರೂ ಮತದಾನ ಮಾಡಬೇಕು. ವಿಕಲ‌ಚೇತನರ ಮತನಾನಕ್ಕೆ ನೆರವಾಗಲು ವಿಶೇಷ ಸೌಲಭ್ಯ ಕಲ್ಪಿಸಿದ್ದು, ಇದನ್ನು ಬಳಸಿಕೊಳ್ಳಬೇಕು. ದೇಶದ ಎಲ್ಲಾ ಪ್ರಜ್ಞಾವಂತರು ಮತ ಚಲಾಯಿಸಬೇಕು. ನಾನು‌ ಮತ ಚಲಾಯಿಸುತ್ತೇವೆ ನೀವೂ ಮತ ಚಲಾಯಿಸಿ ಎಂದು ಕರೆ ನೀಡಿದರು.

sample description

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.