ETV Bharat / state

ಕೋವಿಡ್‌ನ ದೂರಗಾಮಿ ಪರಿಣಾಮಗಳ ಅಧ್ಯಯನಕ್ಕೆ ತಜ್ಞರ ಸಮಿತಿ.. ಸಚಿವ ಡಾ. ಸುಧಾಕರ್​

ಈ ಅಧ್ಯಯನದ ಆಧಾರದ ಮೇಲೆ ಕೋವಿಡ್-19 ರೋಗಿಗಳ ದೂರಗಾಮಿ ಆರೋಗ್ಯದ ದೃಷ್ಟಿಯಿಂದ ಸೂಕ್ತ ಚಿಕಿತ್ಸಾ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಟ್ವೀಟ್​ನಲ್ಲಿ ಅಭಿಪ್ರಾಯಪಟ್ಟಿದ್ದಾರೆ..

Sudhakar
ಸಚಿವ ಸುಧಾಕರ್​
author img

By

Published : Sep 20, 2020, 8:52 PM IST

ಬೆಂಗಳೂರು : ಕೋವಿಡ್​ನಿಂದ ಗುಣಮುಖರಾದವರಲ್ಲಿ ಮುಂದೆ ಎದುರಾಗಬಹುದಾದ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ತಜ್ಞರ ಸಮಿತಿ ರಚಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್‌ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಸಚಿವರು, ಕೋವಿಡ್‌ ರೋಗದಿಂದ ಗುಣಮುಖ ಹೊಂದಿದ ನಂತರ ಭವಿಷ್ಯದಲ್ಲಿ ಅದರಿಂದ ಪರಿಣಾಮ ಉಂಟಾಗಬಹುದೇ ಎಂಬ ಅನುಮಾನ ಉದ್ಭವಿಸಿದೆ. ಈ ನಿಟ್ಟಿನಲ್ಲಿ‌ ಅಧ್ಯಯನದ ಅವಶ್ಯಕತೆ ಇದೆ. ಲಘು ಮತ್ತು ತೀವ್ರ ರೋಗಲಕ್ಷಣ ಹೊಂದಿರುವ ಮತ್ತು ಇತರೆ ಗಂಭೀರ ರೋಗಗಳಿಂದ ಬಳಲುತ್ತಿದ್ದವರ ಮೇಲೆ ಆಗಬಹುದಾದ ಪರಿಣಾಮಗಳ ಬಗ್ಗೆ ಅಧ್ಯಯನದಿಂದ ತಿಳಿದುಕೊಳ್ಳಬೇಕಿದೆ.

  • ಕೋವಿಡ್ ಸೋಂಕಿನಿಂದ ಗುಣಮುಖ ಹೊಂದಿದವರಲ್ಲಿ ಉಂಟಾಗಬಹುದಾದ ದೂರಗಾಮಿ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಒಂದು ವಿಶೇಷ ತಜ್ಞ ವೈದ್ಯರ ಸಮಿತಿ ರಚಿಸಲಾಗುವುದು. ಲಘು ಮತ್ತು ತೀವ್ರ ರೋಗಲಕ್ಷಣ ಹೊಂದಿದ್ದ ಮತ್ತು ವಿಶೇಷವಾಗಿ ಇತರೆ ಸಹ-ಅಸ್ವಸ್ಥತೆಗಳನ್ನು ಹೊಂದಿದ್ದ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಲಾಗುವುದು. (1/2)

    — Dr Sudhakar K (@mla_sudhakar) September 20, 2020 " class="align-text-top noRightClick twitterSection" data=" ">

ಈ ಅಧ್ಯಯನದ ಆಧಾರದ ಮೇಲೆ ಕೋವಿಡ್-19 ರೋಗಿಗಳ ದೂರಗಾಮಿ ಆರೋಗ್ಯದ ದೃಷ್ಟಿಯಿಂದ ಸೂಕ್ತ ಚಿಕಿತ್ಸಾ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಟ್ವೀಟ್​ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.